Advertisement

ಕಲ್ಲನ್ನೇ ಹೊತ್ತೂಯ್ಯುತ್ತಂತೆ ಈ ಬಾಹುಬಲಿ ಕಪ್ಪೆ!

08:25 AM Aug 12, 2019 | Nagendra Trasi |

ಲಂಡನ್‌: ಕಪ್ಪೆ ಎಂದರೆ ಎಷ್ಟು ದೊಡ್ಡದಿರಬಹುದು? ನಾವೆಲ್ಲ ನೋಡಿದ್ದರಲ್ಲಿ ದೊಡ್ಡದು ಎಂದರೆ ಕೈಯ ಗಾತ್ರದಷ್ಟಿರಬಹುದು. ಆದರೆ ಇದು ಅಂತಿಂಥ ಕಪ್ಪೆಯಲ್ಲ. ಬಾಹುಬಲಿ ಕಪ್ಪೆ. 3.34 ಕೆ.ಜಿ. ತೂಕದ, 34 ಸೆಂ.ಮೀ. ಗಿಂತಲೂ ದೊಡ್ಡದಾದ ಈ ಕಪ್ಪೆ 2 ಕೆ.ಜಿ. ವರೆಗಿನ ಕಲ್ಲನ್ನು ಹೊತ್ತುಕೊಂಡು ಹೋಗುತ್ತಂತೆ!

Advertisement

ಕಪ್ಪೆ ಹೀಗೆ ಕಲ್ಲನ್ನು ಹೊತ್ತುಕೊಂಡು ಹೋಗೋದು, ಮನೆಕಟ್ಟೋದಿಕ್ಕೆ. ಅರ್ಥಾತ್‌ ಸಣ್ಣ ಹೊಂಡದಂತೆ ಮಾಡಿ, ಸುತ್ತಲೂ ಕಲ್ಲುಗಳನ್ನು ಪೇರಿಸಿ, ಅದರ ಒಳಗಡೆ ಮೊಟ್ಟೆ ಇಡುತ್ತಂತೆ. ಈ ಬಾಹುಬಲಿ ಕಪ್ಪೆಯ ನಿಜವಾದ ಹೆಸರು ಗೋಲಿಯಾತ್‌ ಫ್ರಾಗ್ಸ್‌. ಆಫ್ರಿಕಾದ ಕ್ಯಾಮರೂನ್‌ ಮತ್ತು ಈಕ್ವಟೋರಿಯಲ್‌ ಗಿನಿ ದೇಶಗಳಲ್ಲಿ ಕಾಣಸಿಗುತ್ತದೆ.

ಜರ್ನಲ್‌ ಆಫ್ ನಾಚುರಲ್‌ ಹಿಸ್ಟರಿ ನಿಯತಕಾಲಿಕೆಯಲ್ಲಿ ಈ ಕಪ್ಪೆಯ ಬಗ್ಗೆ ಸಂಶೋಧನ ಲೇಖನ ಪ್ರಕಟವಾಗಿದ್ದು, ಅಚ್ಚರಿಯ ಮಾಹಿತಿಗಳಿವೆ. ಈ ಕಪ್ಪೆಗಳು ಕಳೆದ 10 ವರ್ಷಗಳಲ್ಲಿ ಶೇ.50ರಷ್ಟು ಕ್ಷೀಣಿಸಿದ್ದು, ಸದ್ಯ ಅಳಿವಿನಂಚಿನಲ್ಲಿವೆ.

Advertisement

Udayavani is now on Telegram. Click here to join our channel and stay updated with the latest news.

Next