Advertisement

ಜಲಕ್ಷಾಮದ ವಿಕೋಪ: ಎತ್ತರದ ಗ್ರಾಮದಲ್ಲೀಗ ನೀರಿಲ್ಲ!

08:55 AM Aug 02, 2017 | Karthik A |

ಹೊಸದಿಲ್ಲಿ: ಸುತ್ತಲೂ ಹಿಮಾಚ್ಛಾದಿತ ಬೆಟ್ಟ ಗುಡ್ಡಗಳು. ನೀಲಿ ಬಾನಿನ ಹೊದಿಕೆ. ನೋಡಿದಷ್ಟು ಸಾಲದು ಎಂಬಂತಹ ಪ್ರದೇಶ. ಒಂದೊಮ್ಮೆ ಇಲ್ಲಿ ನೀರ್ಗಲ್ಲ ಸೆಲೆಗಳು, ಕೊಳಗಳು ಬೇಕಾದಷ್ಟಿದ್ದವು. ಆದರೆ ಇದೀಗ ತೊಟ್ಟು ನೀರಿಗೂ ಪರದಾಡಬೇಕಾದ ಸ್ಥಿತಿ. ಈ ಪರಿಸ್ಥಿತಿಯನ್ನು ಎದುರಿಸುತ್ತಿರುವುದು ವಿಶ್ವವಿಖ್ಯಾತ, ಜಗತ್ತಿನ ಅತಿ ಎತ್ತರದ ಗ್ರಾಮ ಎಂದು ಕರೆಯಲ್ಪಡುವ ಸ್ಪಿಟಿ ಕಣಿವೆಯ ಗ್ರಾಮ ಕೊಮಿಕ್‌. 

Advertisement

ಹಿಮಾಚಲ ಪ್ರದೇಶದಲ್ಲಿರುವ ಈ ಪ್ರದೇಶ ವಾಹನ ಸಂಪರ್ಕ ಇರುವ ಅತಿ ಎತ್ತರದ ಗ್ರಾಮ. ಸಮುದ್ರ ಮಟ್ಟದಿಂದ 15,050 ಅಡಿ ಎತ್ತರದ ಈ ಗ್ರಾಮ ಟಿಬೆಟ್‌ ಗಡಿಯಲ್ಲಿದ್ದು 12 ಸಾವಿರ ಜನಸಂಖ್ಯೆಯನ್ನು ಹೊಂದಿದೆ. 130 ಮನೆಗಳು ಇಲ್ಲಿದ್ದು, ಬಾರ್ಲಿ, ಹಸಿರು ಬಟಾಣಿ ಬೆಳೆಯುತ್ತಾರೆ. ಆದರೆ ಇದೀಗ ನೀರಿಲ್ಲದೇ ಇದ್ದು ಜನರನ್ನು ಕಂಗಾಲಾಗಿಸಿದೆ. ಭಾರತಾದ್ಯಂತ ನೀರಿನ ಅಭಾವ ಇತ್ತೀಚಿನ ದಶಕಗಳಲ್ಲಿ ತೀವ್ರವಾಗುತ್ತಿದ್ದು, ಕೊಮಿಕ್‌ ಗ್ರಾಮವೂ ಹೊರತಾಗಿಲ್ಲ. ಹಿಮಾಲಯದ ನೀರ್ಗಲ್ಲ ನದಿಗಳು ತಾಪ ಏರಿಕೆಯಿಂದ ಕರಗುತ್ತಿದ್ದು, ಇದರ ನೇರ ಪರಿಣಾಮ ಈ ಗ್ರಾಮದಲ್ಲಿ ಕಾಣುತ್ತಿದೆ ಎಂದು ಪರಿಸರ ತಜ್ಞರು ಹೇಳುತ್ತಾರೆ. ವರ್ಷದ 6 ತಿಂಗಳು ಮಾತ್ರ ಇಲ್ಲಿ ಹಿಮಾಚ್ಛಾದಿತವಾಗಿರುತ್ತದೆ. ಪ್ರವಾಸಿಗರ ಆಗಮನ ಇಲ್ಲಿ ಹೆಚ್ಚಿದ್ದು, ನೀರಿಗೆ ಸಮಸ್ಯೆಯಾಗಿದೆ. ಏರುತ್ತಿರುವ ತಾಪಮಾನದಿಂದ ನೀರ್ಗಲ್ಲುಗಳ ಸಂಖ್ಯೆ, ಹಿಮ ಬೀಳುವಿಕೆ ಕಡಿಮೆಯಾಗಿದೆ. 2014ರಲ್ಲಿ ಜವಾಹರಲಾಲ್‌ ನೆಹರೂ ವಿವಿ ಅಧ್ಯಯನದಂತೆ ಇಲ್ಲಿನ ತಾಪ ವರ್ಷಕ್ಕೆ 2ಡಿ.ಸೆ. ಏರುತ್ತಿದೆೆ. ನೀರ್ಗಲ್ಲು ಶೇ.13ರಷ್ಟು ಕಡಿಮೆಯಾಗಿವೆ.

Advertisement

Udayavani is now on Telegram. Click here to join our channel and stay updated with the latest news.

Next