Advertisement
ಭಾರತಕ್ಕೆ ಭೂಗರ್ಭ ರೈಲು ನಿಲ್ದಾಣಗಳು ಹೊಸದೇನಲ್ಲ. ಮೆಟ್ರೋ ರೈಲು ಯೋಜನೆಯಡಿ ವಿವಿಧ ಮಹಾನಗರಗಳಲ್ಲಿ ಇಂಥ ಹಲವು ನಿಲ್ದಾಣಗಳು ನಿರ್ಮಾಣಗೊಂಡಿವೆ. ಆದರೆ, ಭಾರತೀಯ ರೈಲ್ವೆಯಿಂದ ದುರ್ಗಮ ಪರ್ವತ ಶ್ರೇಣಿಯಲ್ಲಿ ನಿರ್ಮಾಣ ವಾಗುತ್ತಿರುವ ಮೊದಲ ಭೂಗರ್ಭ ರೈಲ್ವೆ ನಿಲ್ದಾಣವಾಗಿದೆ. ಹೆಚ್ಚಿನ ಮಹತ್ವ ಬಂದಿದೆ. ಕಿಯಾಂಗ್ ಪ್ರಾಂತ್ಯ ಮನಾಲಿಯಿಂದ 26 ಕಿ.ಮೀ., ಭಾರತ- ಚೀನ ಗಡಿಯಿಂದ 120 ಕಿ.ಮೀ. ದೂರ ದಲ್ಲಿದೆ. ಈ ಯೋಜನೆ ಪೂರ್ತಿಗೊಂಡ ಅನಂತರ ಇದು ವಿಶ್ವದ ಅತಿ ಎತ್ತರದ ರೈಲ್ವೇ ಹಾದಿ ಎನಿಸಿಕೊಳ್ಳಲಿದೆ. ಜತೆಗೆ, ಸದ್ಯಕ್ಕೆ ದಿಲ್ಲಿ ಮತ್ತು ಲೇಹ್ ನಡುವಿನ ಪ್ರಯಾಣಾವಧಿ ಯನ್ನು (40 ಗಂಟೆ) ಅರ್ಧ ದಷ್ಟು ಇಳಿಸಲಿದೆ.
24 – ಮಾರ್ಗದಲ್ಲಿ ನಿರ್ಮಾಣಗೊಳ್ಳಲಿರುವ ದೊಡ್ಡ ಸೇತುವೆಗಳು
39 – ಪರ್ವತಗಳ ನಡುವೆ ನಿರ್ಮಾಣವಾಗಲಿರುವ ಚಿಕ್ಕ ಸೇತುವೆಗಳು
3,000 ಅಡಿ- ಸಮುದ್ರ ಮಟ್ಟದಿಂದ ಇರುವ ಎತ್ತರ