Advertisement

ಗುಜರಾತ್‌ನಲ್ಲಿ ವಿಶ್ವದ ಮೊದಲ ಸಾಂಪ್ರದಾಯಿಕ ಔಷಧ ಶೃಂಗಸಭೆ

09:51 PM Jul 28, 2023 | Team Udayavani |

ನವದೆಹಲಿ: ವಿಶ್ವ ಆರೋಗ್ಯ ಸಂಸ್ಥೆ(ಡಬ್ಲೂಎಚ್‌ಒ) ವತಿಯಿಂದ ಭಾರತದ ಸಹಯೋಗದಲ್ಲಿ ಮುಂದಿನ ತಿಂಗಳು ಗುಜರಾತ್‌ನಲ್ಲಿ ವಿಶ್ವದಲ್ಲೇ ಮೊದಲ “ಡಬ್ಲೂಎಚ್‌ಒ ಸಾಂಪ್ರದಾಯಿಕ ಔಷಧ ಜಾಗತಿಕ ಶೃಂಗಸಭೆ’ ಆಯೋಜಿಸಲಾಗಿದೆ.

Advertisement

ಗುಜರಾತ್‌ನ ಗಾಂಧಿನಗರದಲ್ಲಿ ಆ.17 ಮತ್ತು 18ರಂದು ಈ ಶೃಂಗಸಭೆ ನಡೆಯಲಿದೆ. ಇದರಲ್ಲಿ ವಿಶ್ವದ 40ಕ್ಕೂ ಹೆಚ್ಚು ಆರೋಗ್ಯ ಸಚಿವರು ಭಾಗವಹಿಸಲಿದ್ದಾರೆ. ಆರೋಗ್ಯಕ್ಕೆ ಸಾಂಪ್ರದಾಯಿಕ ಔಷಧಗಳ ಕೊಡುಗೆಯ ಕುರಿತು ಪುರಾವೆಗಳು, ಮಾಹಿತಿ ಮತ್ತು ನಾವೀನ್ಯತೆಗಳನ್ನು ಹಂಚಿಕೊಳ್ಳಲು ಈ ಶೃಂಗಸಭೆಯು ವೇದಿಕೆಯಾಗಲಿದೆ. ಇನ್ನೊಂದೆಡೆ, ಆ.19ರಂದು ಜಿ20 ಜಂಟಿ ಹಣಕಾಸು, ಆರೋಗ್ಯ ಸಚಿವರ ಸಭೆಯನ್ನು ಆಯೋಜಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next