Advertisement
ಆಸ್ಟ್ರೇಲಿಯಾದ ಕೆಲವು ವಿಶ್ವವಿದ್ಯಾನಿಲಯದ ಸಂಶೋಧಕರು ಅತೀ ವೇಗದ ಇಂಟರ್ ನೆಟ್ ಡೇಟಾದ ಸಂಪರ್ಕ ಸಾಧಿಸಿದ್ದು, ಇದರಲ್ಲಿ ಸೆಕೆಂಡ್ ಗೆ 1,000 ಸಿನಿಮಾಗಳನ್ನು ಡೌನ್ ಲೋಡ್ ಮಾಡಬಹುದಾಗಿದೆ.
Related Articles
Advertisement
ಪ್ರಸ್ತುತ ಪ್ರಪಂಚದಾದ್ಯಂತ ಬಳಕೆಯಲ್ಲಿರುವ ಫೈಬರ್ ಆಪ್ಟಿಕ್ ತಂತ್ರಜ್ಞಾನದೊಂದಿಗೆ ‘ಬ್ರಾಡ್ ಬ್ಯಾಂಡ್ ಇಂಟರ್ ನೆಟ್’ ನೆಟ್ ವರ್ಕ್ ನಲ್ಲಿ ಬಳಸುವಂತಹ ಒಂದು ಹೊಸ ಸಾಧನವನ್ನು ಉಪಯೋಗಿಸಿ ಅತ್ಯಂತ ವೇಗಾದ ಡೇಟಾ ಸಂಪರ್ಕ ಸಾಧಿಸಲಾಗಿದೆ. ಇದನ್ನು ಆಸ್ಟ್ರೇಲಿಯಾದ ಆರ್ ಎಂಐಟಿ ಯುನಿವರ್ಸಿಟಿಯಿಂದ ಮೋನಾಷ್ ಯುನಿವರ್ಸಿಟಿ ಕ್ಲೇಟನ್ ಕ್ಯಾಂಪಸ್ ವರೆಗಿನ 76.6 ಕಿ.ಮೀ ಫೈಬರ್ ನಲ್ಲಿ ಪರೀಕ್ಷೆ ನಡೆಸಲಾಗಿದೆ.
ಇಲ್ಲಿ ಉಪಯೋಗಿಸಲಾಗಿರುವ ಹೊಸ ಸಾಧನವು 80 ಲೇಸರ್ ಗಳಿಗೆ ಬದಲಾಗಿ ಬಳಸಬಹುದಾಗಿದ್ದು, ಮೈಕ್ರೋ ಕಾಂಬ್ ಎಂದೇ ಕರೆಯಲಾಗಿದೆ. ಅಂದರೇ ಒಂದೇ ಆಪ್ಟಿಕಲ್ ಚಿಪ್ ಬಳಸಿ ಇಂಟರ್ನೆಟ್ ವೇಗವನ್ನು ಸಾಧಿಸಲಾಗಿದೆ. ಇದು ಪ್ರಸ್ತುತ ಬಳಕೆಯಲ್ಲಿರುವ ಟೆಲಿಕಮ್ಯೂನಿಕೇಷನ್ ಸಾಧನಗಳಿಗಿಂತ ಚಿಕ್ಕದಾಗಿದೆ ಮತ್ತು ಹಗುರವಾಗಿದೆ.
ಆಪ್ಟಿಕಲ್ ಫೈಬರ್ ಗೆ ಮೈಕ್ರೋ ಕಾಂಬ್ ಆಳವಡಿಸಿ ಗರಿಷ್ಟ ಮಟ್ಟದ ಡೇಟಾ ರವಾನಿಸಲಾಗಿದೆ. ಮೈಕ್ರೋ ಕಾಂಬ್ ಚಿಪ್ ಗಳಿಗೆ ಸಂಬಂಧಿಸಿದ ಸಂಶೋಧನೆ ಕಳೆದ 10 ವರ್ಷಗಳಿಂದ ನಡೆಯುತ್ತಿದೆ.