ಟೆಹ್ರಾನ್: ವಿಶ್ವದ ಅತ್ಯಂತ ಕೊಳಕು ಮನುಷ್ಯ ಎಂದೇ (ಕು) ಖ್ಯಾತಿ ಪಡೆದಿದ್ದ ಇರಾನ್ ನ ವ್ಯಕ್ತಿ ಮೃತಪಟ್ಟಿದ್ದಾರೆ. ಅರ್ಧ ಶತಮಾನಕ್ಕೂ ಹೆಚ್ಚು ಕಾಲ ಸ್ನಾನ ಮಾಡಿರದ 94ರ ಹರೆಯದ ಅಮೌ ಹಾಜಿ ನಿಧನರಾದ ಸುದ್ದಿಯನ್ನು ಮಾಧ್ಯಮಗಳು ವರದಿ ಮಾಡಿದೆ.
ಅರ್ಧ ಶತಮಾನಕ್ಕೂ ಹೆಚ್ಚು ಕಾಲ ಸ್ನಾನ ಮಾಡಿರದ ಒಂಟಿಯಾಗಿ ವಾಸವಾಗಿದ್ದ ಅಮೌ ಹಾಜಿ ಅವರು ದಕ್ಷಿಣ ಪ್ರಾಂತ್ಯದ ಫಾರ್ಸ್‌ನ ದೇಜ್ಗಾ ಗ್ರಾಮದಲ್ಲಿ ಭಾನುವಾರ ನಿಧನರಾಗಿದ್ದರೆ.
ಇದನ್ನೂ ಓದಿ:ಜೆಡಿಎಸ್ ಜೊತೆ ಮೈತ್ರಿ ಇಲ್ಲ, ಕಾಂಗ್ರೆಸ್ ಸರ್ಟಿಫಿಕೇಟ್ ಬೇಕಿಲ್ಲ: ಅಸಾದುದ್ದೀನ್ ಓವೈಸಿ
ಅನಾರೋಗ್ಯ ಪೀಡಿತರಾಗುವ ಭಯದಿಂದ ಅವರು ಸ್ನಾನ ಮಾಡುತ್ತಿರಲಿಲ್ಲ ಎಂದು ಐಆರ್ ಎನ್ಎ ಸುದ್ದಿ ಸಂಸ್ಥೆ ಹೇಳಿದೆ.
ಆದರೆ ಕೆಲ ವಾರಗಳ ಹಿಂದೆ ಗ್ರಾಮಸ್ಥರು ಒತ್ತಾಯಪೂರ್ವಕವಾಗಿ ಆತನಿಗೆ ಸ್ನಾನ ಮಾಡಿಸಿದ್ದರು. ಇದಾಗಿ ತಿಂಗಳ ಬಳಿಕ ಆತ ಮೃತಪಟ್ಟಿದ್ದಾನೆ.
ಅಮೌ ಹಾಜಿ ಜೀವನದ ಬಗ್ಗೆ 2013ರಲ್ಲಿ ‘ ದಿ ಸ್ಟ್ರೇಂಜ್ ಲೈಫ್ ಆಫ್ ಅಮೌ ಹಾಜಿ’ ಎಂಬ ಸಾಕ್ಷ್ಯಚಿತ್ರ ತೆರೆಗೆ ಬಂದಿತ್ತು.