Advertisement

World Yoga Day: ಸ್ವಾಮೀಜಿಗಳಿಂದ ಯೋಗ

12:02 AM Jun 22, 2024 | Team Udayavani |

ಉಡುಪಿ: ಶ್ರೀ ಕೃಷ್ಣಮಠದ ರಾಜಾಂಗಣದಲ್ಲಿ ನಡೆದ ಕಾರ್ಯ ಕ್ರಮವನ್ನು ಪುತ್ತಿಗೆ ಮಠಾಧೀಶರಾದ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ಉದ್ಘಾಟಿಸಿ, ಯೋಗಾಸನ ಮಾಡಿದರು. ಕಿರಿಯ ಯತಿ ಶ್ರೀ ಸುಶ್ರೀಂದ್ರತೀರ್ಥ ಶ್ರೀಪಾದರು ಶ್ರೀ ಮಠದಲ್ಲಿ ಯೋಗಾಸನ ಮಾಡಿದರು.

Advertisement

ಮೂಡುಬಿದಿರೆ: ವಿಶ್ವ ಯೋಗ ದಿನದ ಅಂಗವಾಗಿ ಮೂಡುಬಿದಿರೆ ಶ್ರೀ ಜೈನಮಠಾಧೀಶ ಸ್ವಸ್ತಿಶ್ರೀ ಭಟ್ಟಾರಕ ಚಾರುಕೀರ್ತಿ ಪಂಡಿತಾ ಚಾರ್ಯ ವರ್ಯ ಸ್ವಾಮೀಜಿ ಯವರು ಭಟ್ಟಾರಕ ಭವನ ದಲ್ಲಿ ಮತ್ತು ಸಾವಿರ ಕಂಬದ ಬಸದಿ ಎದುರಿನ ಬೃಹತ್‌ ಸಂಪಿಗೆಯ ಮರದಡಿ ಮುಂಜಾನೆ 9.30ರಿಂದ 10.15ರ ವರೆಗೆ ವಿವಿಧ ಯೋಗಾಸನಗಳನ್ನು ಪ್ರಸ್ತುತಪಡಿಸಿದರು.

ಸ್ವಸ್ತಿಶ್ರೀ ಜೈನ ವಸತಿ ಪ.ಪೂ. ಕಾಲೇಜಿನ ವಿದ್ಯಾರ್ಥಿವೃಂದ, ಬೋಧಕರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next