Advertisement
ವಿಶೇಷವಾಗಿ ಆರ್ಟಿಕ್ ಮತ್ತು ಅಂಟಾರ್ಟಿಕಾದಲ್ಲಿರುವ ಭಾರತದ ಸಂಶೋಧನಾ ಕೇಂದ್ರದ ಸಂಶೋಧಕರು, ಲಡಾಖ್‌ನ ಅತ್ಯಂತ ಎತ್ತರದ ಪ್ರದೇಶದಲ್ಲಿ, ಕೇರಳದ ಸಮುದ್ರದ ಆಳದಲ್ಲಿ, ಭಾರತದ ಹೆಮ್ಮೆಯ ಐಎನ್‌ಎಸ್ ವಿಕ್ರಾಂತ್ ಯುದ್ಧ ನೌಕೆಯಲ್ಲಿ, ಭೋಪಾಲ್‌ನಿಂದ ದೆಹಲಿಗೆ ತೆರಳುವ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನಲ್ಲಿ, ಯೋಗ ಸ್ಟುಡಿಯೋ, ಶಾಲಾ-ಕಾಲೇಜುಗಳು, ಮನೆಗಳು ಮತ್ತು ಕಚೇರಿಗಳಲ್ಲಿ ನಾಗರಿಕರು ಯೋಗಾಭ್ಯಾಸದಲ್ಲಿ ತೊಡಗುವ ಮೂಲಕ ಅಂತಾರಾಷ್ಟ್ರೀಯ ಯೋಗ ದಿನದ ಸಂಭ್ರಮಾಚರಣೆಗೆ ಕೈಜೋಡಿಸಿದರು.
ಜಿ20 ಪ್ರತಿನಿಧಿಗಳಿಂದ ಯೋಗಾಭ್ಯಾಸ: ಸುಪ್ರೀಂ ಕೋರ್ಟ್ ಆವರಣದಲ್ಲಿ ಸಿಜೆಐ ಡಿ.ವೈ.ಚಂದ್ರಚೂಡ್ ಸೇರಿದಂತೆ ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿಗಳು ವಿವಿಧ ಯೋಗಾಸನಗಳನ್ನು ಮಾಡಿದರು. ಗೋವಾದ ಪಣಜಿಯಲ್ಲಿ ಜಿ20 ಸಭೆ ಅಂಗವಾಗಿ ಆಗಮಿಸಿರುವ ವಿವಿಧ ದೇಶಗಳ ಜನಪ್ರತಿನಿಧಿಗಳು ಯೋಗಾಭ್ಯಾಸ ಮಾಡಿದರು. ಮುಂಬೈನ ಲೋಕಲ್ ರೈಲುಗಳಲ್ಲಿ ಪ್ರಯಾಣಿಕರು ಯೋಗಾಭ್ಯಾಸ ಮಾಡಿದರು.
Related Articles
Advertisement
ಸೂರತ್‌ನಲ್ಲಿ ಗಿನ್ನೆಸ್ ವಿಶ್ವದಾಖಲೆಅಂತಾರಾಷ್ಟ್ರೀಯ ಯೋಗದಿನದ ಹಿನ್ನೆಲೆಯಲ್ಲಿ ಗುಜರಾತ್‌ನ ಸೂರತ್‌ನಲ್ಲಿ ಬುಧವಾರ ಬೆಳಗ್ಗೆ 1.53 ಲಕ್ಷ ಮಂದಿ ಯೋಗಾಭ್ಯಾಸ ಮಾಡಿದರು. ಅತ್ಯಂತ ಹೆಚ್ಚಿನ ಸಂಖ್ಯೆಯ ಜನರು ಒಂದೆಡೆ ಸೇರಿ ಯೋಗಾಭ್ಯಾಸ ಮಾಡುವ ಮೂಲಕ ನೂತನ ಗಿನ್ನೆಸ್ ವಿಶ್ವದಾಖಲೆ ಮಾಡಿದರು. ಈ ಕಾರ್ಯಕ್ರಮದಲ್ಲಿ ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಭಾಗವಹಿಸಿದ್ದರು. ಈ ಹಿಂದೆ 2018ರಲ್ಲಿ ರಾಜಸ್ಥಾನದ ಕೋಟಾದಲ್ಲಿ ಅಂತಾರಾಷ್ಟ್ರೀಯ ಯೋಗದಿನದಂದು 1,00,984 ಮಂದಿ ಯೋಗಾಭ್ಯಾಸ ಮಾಡುವ ಮೂಲಕ ದಾಖಲೆ ಮಾಡಿದ್ದರು. 100 ಕಡೆಗಳಲ್ಲಿ ಯೋಧರಿಂದ “ಭಾರತ್‌ಮಾಲಾ’
ಭಾರತದ ಗಡಿಭಾಗದಲ್ಲಿ, ಸೇನಾನೆಲೆ, ವಾಯುನೆಲೆ, ನೌಕಾನೆಲೆ ಸೇರಿದಂತೆ 100ಕ್ಕೂ ಹೆಚ್ಚು ಸ್ಥಳಗಳಲ್ಲಿ ಭಾರತೀಯ ಸೇನೆಯ ಯೋಧರು “ಭಾರತ್‌ಮಾಲಾ’ ಸೃಜಿಸಿದರು. ಕಾರ್ಯಕ್ರಮದಲ್ಲಿ ಯೋಧರ ಕುಟುಂಬದವರು, ನಿವೃತ್ತ ಯೋಧರು ಕೂಡ ಭಾಗವಹಿಸಿದ್ದರು. ಯೋಗದ ಜನಪ್ರಿಯತೆಗೆ ಈಗಿನ ಸರ್ಕಾರವೂ ಕಾರಣ: ಕಾಂಗ್ರೆಸ್‌ಗೆ ತರೂರ್ ತಿರುಗೇಟು
ಯೋಗ ಜನಪ್ರಿಯವಾಗಲು ಮೊದಲ ಪ್ರಧಾನಿ ಜವಾಹರ್‌ಲಾಲ್ ನೆಹರೂ ಕಾರಣ ಎಂದು ಕಾಂಗ್ರೆಸ್ ಹೇಳಿದೆ. ಈ ಬಗ್ಗೆ ಟ್ವೀಟ್ ಮಾಡಿದ ಅದು, “ಯೋಗವನ್ನು ಜನಪ್ರಿಯಗೊಳಿಸುವಲ್ಲಿ ಪ್ರಮುಖ ಪಾತ್ರವಹಿಸಿದ ಹಾಗೂ ರಾಷ್ಟ್ರೀಯ ನೀತಿಯ ಭಾಗವಾಗಿಸಿದ ನೆಹರೂ ಅವರಿಗೆ ಅಂತಾರಾಷ್ಟ್ರೀಯ ಯೋಗದಿನದಂದು ಧನ್ಯವಾದಗಳನ್ನು ಅರ್ಪಿಸುತ್ತೇವೆ’ ಎಂದಿದೆ. ಈ ವೇಳೆ ನೆಹರೂ ಅವರು ಶೀರ್ಷಾಸನ ಮಾಡುತ್ತಿರುವ ಚಿತ್ರವನ್ನೂ ಹಂಚಿಕೊಂಡಿದೆ. ಇದನ್ನು ಬೆಂಬಲಿಸುವ ಜೊತೆಜೊತೆಗೇ ಕಾಂಗ್ರೆಸ್ ನಾಯಕ ಶಶಿ ತರೂರ್ ಅದನ್ನು ಟೀಕಿಸಿದ್ದಾರೆ. “ವಿಶ್ವಸಂಸ್ಥೆಯ ಮೂಲಕ ಯೋಗದಿನವನ್ನು ಅಂತಾರಾಷ್ಟ್ರೀಯಗೊಳಿಸಿದ ಈಗಿನ ಸರ್ಕಾರ, ಪ್ರಧಾನಮಂತ್ರಿ ಕಚೇರಿ, ವಿದೇಶಾಂಗ ಸಚಿವಾಲಯವನ್ನೂ ನಾವು ಕೃತಜ್ಞತೆಯಿಂದ ಸ್ಮರಿಸಬೇಕು’ ಎಂದು ತರೂರ್ ಟ್ವೀಟ್ ಮಾಡಿದ್ದಾರೆ. ಪರೋಕ್ಷವಾಗಿ ಯೋಗದ ಜನಪ್ರಿಯತೆಗೆ ನೆಹರೂ ಕಾರಣ ಎಂದ ಕಾಂಗ್ರೆಸ್ ನಿಲುವನ್ನು ತಿರಸ್ಕರಿಸಿದ್ದಾರೆ. ಯೋಗವು ನಮ್ಮ ನಾಗರಿಕತೆಯ ಶ್ರೇಷ್ಠ ಸಾಧನೆಗಳಲ್ಲಿ ಒಂದಾಗಿದೆ ಮತ್ತು ಭಾರತವು ಜಗತ್ತಿಗೆ ನೀಡಿದ ದೊಡ್ಡ ಕೊಡುಗೆಗಳಲ್ಲಿ ಒಂದಾಗಿದೆ. ಯೋಗವು ದೇಹ ಮತ್ತು ಮನಸ್ಸಿನ ನಡುವೆ ಸಮತೋಲನವನ್ನು ಸ್ಥಾಪಿಸುತ್ತದೆ.
– ದ್ರೌಪದಿ ಮುರ್ಮು, ರಾಷ್ಟ್ರಪತಿ ಯೋಗವು ಜಗತ್ತಿಗೆ ಭಾರತವು ನೀಡಿದ ನಾಗರಿಕತೆಯ ಕೊಡುಗೆಯಾಗಿದೆ. ಯೋಗವು ದೈಹಿಕ ವ್ಯಾಯಾಮಕ್ಕೆ ಸೀಮಿತವಲ್ಲ. ಬದಲಾಗಿ ಸಮಗ್ರ ಜೀವನ ವಿಧಾನವಾಗಿದೆ.
– ರಾಷ್ಟ್ರೀಯ ಸ್ವಯಂ ಸೇವಕ ಸಂಘ(ಆರ್‌ಎಸ್‌ಎಸ್)