Advertisement

ಇದು ಮಹಿಳಾ ವಿಜಯವಯ್ಯಾ … 

10:06 PM Mar 28, 2017 | Team Udayavani |

ಮಹಿಳೆಯರದ್ದೇ ಸಂಗೀತ, ಸಾಹಿತ್ಯ ಮತ್ತು ಗಾಯನ   

Advertisement

ಸುಗಮ ಸಂಗೀತ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ಇಂದು ವಿಶ್ವನಾಥ್‌, ಮಹಿಳೆಯರೇ ತೊಡಗಿಸಿಕೊಂಡಿರುವ ಇಪ್ಪತ್ತೈದು ಗೀತೆಗಳಿರುವ ಭಾವಗೀತೆಗಳನ್ನು ಒಳಗೊಂಡಿರುವ ಡಿವಿಡಿಯನ್ನು ಹೊರತಂದಿ¨ªಾರೆ. ಕನ್ನಡ ಸುಗಮ ಸಂಗೀತ ಕ್ಷೇತ್ರದಲ್ಲಿ ಇಂಥ ಪ್ರಯತ್ನ ಇದೇ ಮೊದಲು. “ಚಾಂದಿನಿ’ ಹೆಸರಿನ ಆಲ್ಬಮ್ ಅನ್ನು ಹೃಷಿ ಆಡಿಯೋ ಹೊರತಂದಿದೆ. ಈ ಆಲ್ಬಮ್ ಭಾವಗೀತೆಗಳನ್ನು ಬರೆದವರು, ಸಂಗೀತ ಸಂಯೋಜನೆ, ಹಾಡುಗಾರಿಕೆ ಎಲ್ಲವನ್ನೂ ಮಹಿಳೆಯರೇ ನಿರ್ವಹಿಸಿರುವುದು ವಿಶೇಷ. ಈ ಆಲ್ಬಂನ ಮುಖ್ಯ ಆಕರ್ಷಣೆ ಚಾಂದಿನಿಯವರು. ತೃತೀಯ ಲಿಂಗಿಗಳಾದ ಚಾಂದಿನಿ, ಕವಿಗಳು ಕೂಡ. ಅವರ¨ªೊಂದು ಕವಿತೆಯನ್ನು ಈ ಆಲ್ಬಮ್ನಲ್ಲಿ ಬಳಸಿಕೊಳ್ಳಲಾಗಿದೆ. “ಚಾಂದಿನಿಯವರ ಹೆಸರಿನ ಕವಿತೆಯನ್ನೇ ಈ ಆಲ್ಬಮ್ನಲ್ಲಿ ಬಳಸಿಕೊಂಡಿದ್ದೇವೆ. ಈ ಕಾರಣಕ್ಕಾಗಿಯೇ ಆಲ್ಬಂಗೆ ಚಾಂದಿನಿ ಎಂದೇ ಹೆಸರಿಟ್ಟಿದ್ದೇವೆ ‘ ಎನ್ನುತ್ತಾರೆ ಇಂದು ವಿಶ್ವನಾಥ್‌.  ಕನ್ನಡದ ಹಿರಿಯ ಹಾಗೂ ಹೊಸ ತಲೆಮಾರಿನ ಕವಯಿತ್ರಿಯರಾದ ಎಚ್‌. ಎಲ್. ಪುಷ್ಪ, ಮಾಲತೀ ಪಟ್ಟಣಶೆಟ್ಟಿ, ದೀಪಾ ಗಿರೀಶ್‌, ವನಮಾಲ ಸಂಪನ್ನಕುಮಾರ್‌, ಹೆಚ್‌. ಸಿ ಭುವನೇಶ್ವರಿ, ನಿರ್ಮಲಾ ಎಲಿಗಾರ್‌, ಪದ್ಮ ಟಿ. ಚಿನ್ಮಯಿ, ಪದ್ಮಿನಿ, ದೀಪಾ, ನೂತನ್‌, ನಳಿನಾ, ನಂದಿನಿ ವಿಶ್ವನಾಥ್‌, ಜಯಶ್ರೀ ಕಂಬಾರ್‌, ಶಮಾ ನಂದಿಬೆಟ್ಟ, ಎಸ್‌. ಪಿ ವಿಜಯಲಕ್ಷಿ¾à, ಶಾಂತ ಸನ್ಮತಿ ಕುಮಾರ್‌ ಅವರ ಹಾಡುಗಳು ಇದರಲ್ಲಿ ಸೇರಿವೆ. ಕಮಲಾ ಹಂಪನಾ ಅವರ ಎಂಟು ಆಧುನಿಕ ವಚನಗಳೂ ಇದರಲ್ಲಿವೆ. ಸುಗಮಸಂಗೀತ, ಚಲನಚಿತ್ರ ಕ್ಷೇತ್ರಗಳಲ್ಲಿ ಹೆಸರು ಮಾಡಿರುವ ಗಾಯಕಿಯರಾದ ಸಂಗೀತಾ ಕಟ್ಟಿ, ಅರ್ಚನಾ ಉಡುಪ, ನಾಗಚಂದ್ರಿಕಾ ಭಟ್‌, ಮಾಲಿನಿ ಕೇಶವ್‌, ಕೆ ಎಸ್‌ ಸುರೇಖಾ, ಶೃತಿ ರಾವ್‌, ಅಲ್ಕಾ ಸಂದೀಪ್‌, ಕುಸುಮಾ ಜೈನ್‌ ಹಾಡಿ¨ªಾರೆ. ಆಲ್ಬಂಗೆ ಸಂಗೀತ ನೀಡಿರುವ ಇಂದು ವಿಶ್ವನಾಥ್‌ ಅವರು ನಾಲ್ಕು ಗೀತೆಗಳನ್ನು ಹಾಡಿ¨ªಾರೆ. ಇವೆಲ್ಲದರ ನಡುವೆ ಈ ಆಲ್ಬಂ ಸಿಡಿಯ ನಿರ್ಮಾಪಕರೂ ಮಹಿಳೆಯೇ, ಹರ್ಷಿ ಆಡಿಯೋ ಸಂಸ್ಥೆಯ ಮಾಲಕಿ ಹೇಮಾ ಅರುಣ್‌ ಸಿಂಗ್‌ ಅವರು ಈ ಸಿಡಿಯನ್ನು ಹೊರತರುವಲ್ಲಿ ಪ್ರಮುಖ ಪಾತ್ರವಹಿಸಿ¨ªಾರೆ.

Advertisement

Udayavani is now on Telegram. Click here to join our channel and stay updated with the latest news.

Next