Advertisement
ಮಿಸ್ಸಿಸ್ಸಾಗ ಮೇಯರ್ ಬೋನಿ ಕ್ರಾಂಬಿ ಕಾರ್ಯಕ್ರಮ ಉದ್ಘಾಟಿಸಲಿದ್ದು, ಸಂಸದ ಚಂದ್ರ ಆರ್ಯ ಉಪಸ್ಥಿತರಿರುವರು. ಪ್ರಸಿದ್ಧ ಕಲಾವಿದರಾದ ಮಾಳವಿಕಾ ಅವಿನಾಶ್, ಕೆನಡಾದ ಆರ್ಡರ್ ಆಫ್ ಕೆನಡಾ ಪ್ರಶಸ್ತಿ ವಿಜೇತ ಕನ್ನಡಿಗರಾದ ಲತಾ ಪಾದ ಹಾಗೂ ಕನ್ನಡ ಬ್ಲಾಗ್ ಖ್ಯಾತಿಯ ಪ್ರಜ್ಞಾ ಜೈನ್ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ. ಕಾರ್ಯಕ್ರಮವನ್ನು ಜೂಮ್, ಫೇಸ್‌ಬುಕ್ ಹಾಗೂ @kstoronto ನಲ್ಲಿ ನೇರಪ್ರಸಾರ ಮಾಡಲಾಗುವುದು.
Related Articles
Advertisement
ಟೊರೊಂಟೊ: ಕನ್ನಡ ಸಂಘದ ವತಿಯಿಂದ ಕೆಎಸ್‌ಟಿ ಚೆಸ್ ಚಾಂಪಿಯನ್‌ಶಿಪ್ ಮಾ. 20ರಂದು ಶನಿವಾರ ಬೆಳಗ್ಗೆ 10.30(ಇಎಸ್‌ಟಿ)ರ ಅನಂತರ ಆನ್‌ಲೈನ್‌ನಲ್ಲಿ ನಡೆಯಲಿದೆ. ಮೂರು ವಿಭಾಗಗಳಲ್ಲಿ ಅಂದರೆ 11 ವರ್ಷದೊಳಗಿನ, 11- 15ವರ್ಷದೊಳಗಿನ ಮತ್ತು 16 ವರ್ಷಕ್ಕಿಂತ ಮೇಲ್ಪಟ್ಟವರಿಗಾಗಿ ನಡೆಯುವ ಸ್ಪರ್ಧೆಯಲ್ಲಿ ಭಾಗವಹಿಸಲಿಚ್ಛಿಸುವವರು ಮಾ. 13ರೊಳಗೆ ನೋಂದಣಿ ಮಾಡಿಕೊಳ್ಳಬಹುದು. ಸಂಘದ ಸದಸ್ಯರಿಗೆ ಉಚಿತ ನೋಂದಣಿಯಾಗಿದ್ದು, ಉಳಿದವರಿಗೆ 5 ಡಾಲರ್ ಶುಲ್ಕ ವಿಧಿಸಲಾಗಿದೆ. ಪ್ರತಿಯೊಂದು ವಿಭಾಗದಲ್ಲೂ ಮೂರು ಪ್ರಶಸ್ತಿಗಳಿದ್ದು ಇದು ಸರ್ಟಿಫಿಕೇಟ್, ಟ್ರೋಫಿ ಅಥವಾ ಮೆಡಲ್ ಮತ್ತು ಅಸ್ಟ್ರೋ ಚೆಸ್‌ನಿಂದ ಎಲ್ಲ ವಯೋಮಾನದವರಿಗೆ ಮೂರು ಉಚಿತ ತರಗತಿಗಳು ನಡೆಯಲಿವೆ. ನೋಂದಣಿ ಮಾಡಿದ ಎಲ್ಲರಿಗೂ ಮಾ. 14ರಂದು ಬೆಳಗ್ಗೆ 10.30 (ಇಎಸ್‌ಟಿ)ಕ್ಕೆ ಪ್ರಾತ್ಯಕ್ಷಿಕೆ ನಡೆಸಲಾಗುವುದು. ಆನ್‌ಲೈನ್ ಚೆಸ್ ಟೂರ್ನಮೆಂಟ್‌ನಲ್ಲಿ ಪಾಲ್ಗೊಳ್ಳಲಿಚ್ಛಿಸುವ ಅಭ್ಯರ್ಥಿಗಳು ನೋಂದಣಿ ಮತ್ತು ಇತರ ಮಾಹಿತಿಗಾಗಿ ಸಂಘದ ವೆಬ್‌ಸೈಟ್ //www.kannadasanghatotonto.org/upcoming-events/ ಅನ್ನು ನೋಡಬಹುದು.
ಮಾ. 20ರಂದು ಸಾಂಸ್ಕೃತಿಕ ಸಂಜೆ ;
ಕ್ವೀನ್ಸ್‌ಲ್ಯಾಂಡ್: ಇಲ್ಲಿನ ಕನ್ನಡ ಸಂಘವು ವಿವಿಧ ಸಂಸ್ಥೆಗಳ ಪ್ರಾಯೋಜಕತ್ವದಲ್ಲಿ ಮಾ. 20ರಂದು ಸಂಜೆ 5 ಗಂಟೆಗೆ ಕೂರ್ಪಾರೊ ಸೆಕೆಂಡರಿ ಕಾಲೇಜಿನಲ್ಲಿ ಸಾಂಸ್ಕೃತಿಕ ಸಂಜೆ ಕಾರ್ಯಕ್ರಮವನ್ನು ಆಯೋಜಿಸಿದೆ.
ಈ ಕಾರ್ಯಕ್ರಮದಲ್ಲಿ ಕೇವಲ ಮನರಂಜನೆಯ ಉದ್ದೇಶದಿಂದ ಸಂಗೀತ, ನೃತ್ಯ, ನಾಟಕ ಪ್ರದರ್ಶನ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.
ಮಾ. 13ರಂದು “ಶ್ರೀ ರಾಮ ಪ್ರತೀಕ್ಷೆ’ ನೃತ್ಯರೂಪಕ ಪ್ರದರ್ಶನ :
ವಾಷಿಂಗ್ಟನ್: ಅಟ್ಲಾಂಟ ಅನಂತಾಡಿ ರಾಯರ ಮಠದ ನೇತೃತ್ವದಲ್ಲಿ ಕರ್ನಾಟಕದ ಕಲಾವಿದರನ್ನು ಬೆಂಬಲಿಸುವ ಸಲುವಾಗಿ ಅಮೆರಿಕದ ವಿವಿಧ ಸಂಸ್ಥೆಗಳೊಂದಿಗೆ ಕಾವೇರಿ ಕನ್ನಡ ಸಂಘದ ಪ್ರಾಯೋಜಕತ್ವದಲ್ಲಿ ಬೆಂಗಳೂರಿನ ಪ್ರಭಾತ್ ಕಲಾವಿದರಿಂದ “ಶ್ರೀ ರಾಮ ಪ್ರತೀಕ್ಷೆ’ ನೃತ್ಯ ರೂಪಕ ಪ್ರದರ್ಶನ ಮಾ. 13ರಂದು ರಾತ್ರಿ 8 ಗಂಟೆಗೆ ವರ್ಚುವಲ್ ಮೂಲಕ ನಡೆಯಲಿದೆ.
ಮಾ. 21: ಧರ್ಮೇಂದ್ರ ಕುಮಾರ್ ಅವರೊಂದಿಗೆ ಸಂವಾದ :
ಇಂಗ್ಲೆಂಡ್: ಕನ್ನಡಿಗರು ಯುಕೆ ವತಿಯಿಂದ ಧರ್ಮೇಂದ್ರ ಕುಮಾರ್ ಅವರೊಂದಿಗೆ ಸಂವಾದ ಕಾರ್ಯಕ್ರಮ ಮಾ. 21ರಂದು ಬೆಳಗ್ಗೆ 11.30 (ಬಿಎಸ್‌ಟಿ), ಸಂಜೆ 5 (ಐಎಸ್‌ಟಿ) ಗಂಟೆಗೆ ವರ್ಚುವಲ್ ಮೂಲಕ ನಡೆಯಲಿದೆ. ಈ ಸಂದರ್ಭ ದಲ್ಲಿ ಮೈಸೂರಿನ ಕಥೆಗಳು ಕುರಿತು ಅವರು ಮಾತನಾಡಲಿದ್ದಾರೆ. ಜೂಮ್ ಮೂಲಕ ನಡೆಯುವ ಕಾರ್ಯಕ್ರಮವನ್ನು ಫೇಸ್‌ಬುಕ್, ಯುಟ್ಯೂಬ್‌ನಲ್ಲಿ ನೇರಪ್ರಸಾರ ಮಾಡಲಾಗುವುದು.
ನಾಳೆ ಚಿಣ್ಣರ ಪ್ರತಿಭಾ ಕಾರಂಜಿ :
ಫ್ರಾಂಕ್‌ಫರ್ಟ್: ರೈನ್‌ಮೈನ್ ಕನ್ನಡ ಸಂಘ, ಇ.ವಿ. ಫ್ರಾಂಕ್‌ಫರ್ಟ್ ವತಿಯಿಂದ ಕನ್ನಡ ಕಲಿ 25ನೇ ಸಪ್ತಾಹದ ಸಂಭ್ರಮ ಮಾ. 7ರಂದು 10.30 (ಸಿಇಟಿ) ಕ್ಕೆ ನಡೆಯಲಿದೆ. ಈ ಸಂದರ್ಭದಲ್ಲಿ ಕನ್ನಡ ಕಲಿ 2ರಿಂದ 5 ವರ್ಷದ ಚಿಣ್ಣರ ಪ್ರತಿಭಾ ಕಾರಂಜಿಯನ್ನು ವರ್ಚುವಲ್ ಮೂಲಕ ಆಯೋಜಿಸಲಾಗಿದೆ.