Advertisement

“83′ಪ್ರೀಮಿಯರ್‌ ಶೋಗೆ ವಿಶ್ವ ವಿಜೇತರು ಫಿದಾ!

11:25 PM Dec 23, 2021 | Team Udayavani |

ಮುಂಬಯಿ: ಭಾರತೀಯ ಕ್ರಿಕೆಟ್‌ನಲ್ಲಿ ಭಾರೀ ಸಂಚಲನ, ರೋಮಾಂಚನ ಮೂಡಿಸಿದ ಸಾಧನೆಯೆಂದರೆ 1983ರ ಏಕದಿನ ವಿಶ್ವಕಪ್‌ ಗೆಲುವು.

Advertisement

ಕಪಿಲ್‌ದೇವ್‌ ಪಡೆಯ ಈ ಸಾಹಸಗಾಥೆ ಅಂದಿನ ತಲೆಮಾರಿನ ಕ್ರಿಕೆಟ್‌ ಅಭಿ ಮಾನಿಗಳಿಗೆ ಇಂದಿಗೂ ಹಸಿರು. ರೇಡಿಯೋ ಮೂಲಕ ಬಿತ್ತರಗೊಂಡ ವಿಶ್ವಕಪ್‌ ಗೆಲುವಿನ ಕ್ಷಣ ಈಗಲೂ ಕಿವಿಯಲ್ಲಿ ರಿಂಗಣಿಸುತ್ತಿದೆ!

ಇಂದಿನ ತಲೆಮಾರಿನ ಕ್ರಿಕೆಟ್‌ ಪ್ರಿಯರಿಗೆ ಇದನ್ನು ಕೇಳಿಯಷ್ಟೇ ಗೊತ್ತು. ಈಗ ಎರಡೂ ತಲೆಮಾರಿನ ಕ್ರಿಕೆಟ್‌ ಪ್ರೇಮಿಗಳಿಗೆ ಇದನ್ನು ಕಣ್ತುಂಬಿಸಿಕೊಳ್ಳುವ ಅವಕಾಶವೊಂದು ಎದುರಾಗಿದೆ. 1983ರ ವಿಶ್ವಕಪ್‌ ಗೆಲುವಿನ ಹಿನ್ನೆಲೆಯುಳ್ಳ ಹಿಂದಿ ಚಿತ್ರ “83′ ಶುಕ್ರವಾರ ಬೆಳ್ಳಿತೆರೆಯಲ್ಲಿ ಮೂಡಿಬರಲಿದೆ.

ಕಬೀರ್‌ ಖಾನ್‌ ನಿರ್ದೇಶನದ ಈ ಚಿತ್ರದ ಪ್ರೀಮಿಯರ್‌ ಶೋವನ್ನು ಬುಧವಾರ ಏರ್ಪಡಿಸಲಾಗಿದ್ದು, 1983ರ ವಿಶ್ವಕಪ್‌ ವಿಜೇತ ತಂಡದ ಸದಸ್ಯರೆಲ್ಲ ಇದನ್ನು ಕಂಡು ರೋಮಾಂಚನಗೊಂಡರು. ಚಿತ್ರತಂಡ ಹಾಗೂ ವಿಶ್ವಕಪ್‌ ವಿಜೇತ ತಂಡದ ಸದಸ್ಯರೆಲ್ಲ ಪರಸ್ಪರ ಭೇಟಿಯಾಗಿ ಸಂಭ್ರಮದಲ್ಲಿ ವಿಹರಿಸಿದರು. ಆದರೆ ಅಂದಿನ ಆರಂಭಿಕ ಪಂದ್ಯದಲ್ಲಿ ವೆಸ್ಟ್‌ ಇಂಡೀಸನ್ನು ಮಣಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ ಯಶ್ಪಾಲ್‌ ಶರ್ಮ ಅವರ ಅಗಲಿಕೆ ಮಾತ್ರ ಆ ಖುಷಿಯ ವೇಳೆಯಲ್ಲೂ ನೋವು ತಂದಿತ್ತು.

ಇದನ್ನೂ ಓದಿ:ಪ್ರೊ ಕಬಡ್ಡಿ: ಜೈಪುರ್‌ ಪಿಂಕ್‌ ಪ್ಯಾಂಥರ್ ವನ್ನು ಕೆಡವಿದ ಗುಜರಾತ್‌ ಜೈಂಟ್ಸ್‌

Advertisement

ಗಾವಸ್ಕರ್‌ ರೋಮಾಂಚನ
ಈ ಸಂದರ್ಭದಲ್ಲಿ ಮಾತಾಡಿದ ಸುನೀಲ್‌ ಗಾವಸ್ಕರ್‌, “ಇದೊಂದು ಅಮೋಘ ಪ್ರಯತ್ನ. ನಾನಂತೂ ರೋಮಾಂಚನಗೊಂಡೆ. 1983ರ ಅಷ್ಟೂ ಸವಿ ನೆನಪು ಮತ್ತೊಮ್ಮೆ ಉಕ್ಕಿ ಬಂತು. ಕಲಾವಿದರ ನಡೆ, ನುಡಿ, ವರ್ತನೆ, ನೋಟ, ಸ್ಟೈಲ್‌ ಎಲ್ಲವೂ ನಮ್ಮನ್ನೇ ಅನುಸರಿಸುವಂತಿತ್ತು. ಕಬೀರ್‌ ಖಾನ್‌ ಮತ್ತವರ ತಂಡಕ್ಕೆ ನಾನು ಪೂರ್ತಿ ಅಂಕ ನೀಡುತ್ತೇನೆ’ ಎಂದರು. ಚಿತ್ರದಲ್ಲಿ ತಾಹಿರ್‌ ಭಸೀನ್‌ ಅವರು ಗಾವಸ್ಕರ್‌ ಪಾತ್ರದಲ್ಲಿ ನಟಿಸಿದ್ದಾರೆ. ನಾಯಕನ ಪಾತ್ರಧಾರಿ ರಣವೀರ್‌ ಸಿಂಗ್‌. ಇವರು ಕಪ್ತಾನ ಕಪಿಲ್‌ ಪಾತ್ರ ನಿರ್ವಹಿಸಿದ್ದಾರೆ. ಕಪಿಲ್‌ ಪತ್ನಿ ರೋಮಿ ಪಾತ್ರದಲ್ಲಿ ನಟಿಸಿದವರು ದೀಪಿಕಾ ಪಡುಕೋಣೆ.

Advertisement

Udayavani is now on Telegram. Click here to join our channel and stay updated with the latest news.

Next