ಶಿರಸಿ: ಕಳೆದ ಮೂರು ವರ್ಷಗಳ ಹಿಂದೆ ಸ್ವತಃ 65 ಅಡಿ ಆಳದ ಬಾವಿ ತೋಡಿ ರಾಜ್ಯದಲ್ಲಿ ಮನೆ ಮಾತಾಗಿದ್ದ ಶಿರಸಿಯ ಗೌರಿ ನಾಯ್ಕ ಈಗ ಇನ್ನೊಂದು ಬಾವಿಯ ಒಡತಿಯಾಗಿದ್ದಾಳೆ! ಇಲ್ಲಿನ ಗಣೇಶ ನಗರದಲ್ಲಿ ಸ್ವತಃ ಇನ್ನೊಂದು ಬಾವಿ ತೋಡಿ ಅಚ್ಚರಿ ಮೂಡಿಸಿದ್ದಾಳೆ.
ಮೊನ್ನೆ ಮೊನ್ನೆಯಷ್ಟೇ ರಾಜ್ಯ ಸರಕಾರದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದವೀರ ಮಹಿಳೆ ಪ್ರಶಸ್ತಿ ಪಡೆದಿದ್ದಳು. ಅದೇ ಮಹಿಳೆ ಈಗ ತನ್ನ ಮನೆ ಇರುವ ಪಕ್ಕದಲ್ಲೇ 60 ಅಡಿ ಆಳದ ಇನ್ನೊಂದು ಸಿಹಿ ನೀರಿನ ಬಾವಿ ತೋಡಿದ್ದಾಳೆ!
ಲಾಕ್‌ಡೌನ್ ಪ್ರೇರಣೆ: ಕೋವಿಡ್ ಕಾರಣದಿಂದ ಲಾಕ್‌ಡೌನ್ ಘೋಷಣೆ ಮಾಡಿದಾಗ ಏನುಮಾಡಬೇಕು ತಿಳಿಯಲಿಲ್ಲ. ಬದಲಿಗೆ ಅಡಕೆ ತೋಟಕ್ಕೆ, ಕುಡಿಯಲಿಕ್ಕೆ ನೀರು ಸಮಸ್ಯೆಆಗಬಾರದು ಎಂದು ಇನ್ನೊಂದು ಬಾವಿ ತೋಡಲು ಮುಂದಾದರು. ಅದಕ್ಕಾಗಿ ಕಳೆದ ಮಾರ್ಚ್‌ನಿಂದಮನೆಯ ಹಿಂಭಾಗದಲ್ಲಿ ಇದ್ದ ಗುಡ್ಡವನ್ನುಸುಮಾರು 16 ಅಡಿ ನೆಲ ಸಮತಟ್ಟು ಮಾಡಿಮೇಲ್ಭಾಗದ ಅಡಕೆ ತೋಟಕ್ಕೆ ಸ್ವತಃ ಹಾಕಿದಳು.ಬಳಿಕ ಬಾವಿ ತೋಡಲು ಆರಂಭಿಸಿದರು.ಮತ್ತೆ ಒಬ್ಬಳೇ ತೋಡಿದಳು!: ಐದು ಅಡಿಅಗಲದ 60 ಅಡಿ ಆಳದ ಬಾವಿ ಇದಾಗಿದ್ದು, ಈ ಮೊದಲಿನ ಬಾವಿ ತೋಡಿದಂತೆ ಒಬ್ಬಳೇ ತೆಗೆದು ಮುಗಿಸಿದ್ದಾಳೆ!
ಒಂದು ವರ್ಷದ ಅವಧಿಯಲ್ಲಿ ಈ ಕೆಲಸ ಮಾಡಿ ಮುಗಿಸಿದ್ದಾಳೆ. ಬೆಳಗ್ಗೆ ಬೆಳಕು ಹರಿಯುತ್ತಿದ್ದಂತೆ ಗುದ್ದಲಿ, ಪಿಕಾಸು, ಬಕೆಟು ಹಿಡದು ಶುರುಹಚ್ಚಿದಳು. ಯಾರ ಸಹಾಯವನ್ನೂ ಪಡೆಯದೇಮಣ್ಣು, ಅರಲು ಮಣ್ಣು, ಗಣಕು ನೀರನ್ನು ತುಂಬಿ 60 ಅಡಿ ಏರಿ ಬಂದು ಗಡಗಡೆಯಿಂದ ಸೇದಿದ್ದಾರೆ.
ಇನ್ನೊಂದು ಕನಸು!: ಯಾರೂ ನಂಬಲಿಕ್ಕಿಲ್ಲ. ಆದರೆ, ಆ ಮಂಜುನಾಥ, ಮಾರಿಕಾಂಬೆ, ಹನುಮಂತ ದೇವರೇ ಶಕ್ತಿ ಕೊಟ್ಟವರು ಎಂದು ವಿನಮ್ರವಾಗಿ ಹೇಳುತ್ತಾರೆ ಗೌರಿ. ಇನ್ನು ಮೂರನೇ ಬಾವಿ ತೋಡುವುದಿಲ್ಲ. ಸಾಕು ನೀರು. ಅಡಕೆ ತೋಟಕ್ಕೆ ಮೊದಲ ಬಾವೀಲಿ 7 ಅಡಿ ನೀರು, ಇಲ್ಲಿ ಹೊಸ ಬಾವೀಲಿ 5 ಅಡಿ ನೀರಿದೆ.ಈಗ ಸಾಕು ತೋಟಕ್ಕೆ ಎಂದೂ ಹೇಳುತ್ತಾರೆ. ಒಂದು ಸಣ್ಣ ಕೋಣೆ ಮಾಡಿಕೊಳ್ಳಬೇಕುಎಂಬ ಕನಸಿದೆ ಎಂದೂ ಹೇಳುತ್ತಾರೆ ಗೌರಿ. 52ರಗೌರಿ ಗಂಗೆ ಗೆದ್ದು ವಿಶ್ವ ಜಲ ದಿನಕ್ಕೂ ತಿರುಗಿ ನೋಡುವಂತೆ ಮಾಡಿದ್ದಾಳೆ.
ಲಾಕ್‌ಡೌನ್ ಎಂದು ಸುಮ್ಮನೆ ಕುಳ್ಳಲಾಗಲಿಲ್ಲ. ನನ್ನ ಕೆಲಸಗಾರರು ಅಂದ್ರೆ ಗುದ್ದಲಿ, ಬಕೇಟು, ಹಗ್ಗ.
–
ಗೌರಿ ನಾಯ್ಕ, ವೀರ ಮಹಿಳೆ.
ಒಬ್ಬರೇ ಗುಡ್ಡದ ಮಣ್ಣು ತೆಗೆದು ಬಾವಿ ತೋಡಿದವಳು ಗೌರಕ್ಕ. ಖುಷಿ ಆಕ್ತದೆ ಅವರ ಶ್ರಮ ನೋಡಿ.
– ಕೃಷ್ಣ ಭಂಡಾರಿ, ಹುತಗಾರ ಗ್ರಾಪಂ ಮಾಜಿ ಅಧ್ಯಕ್ಷ
-ರಾಘವೇಂದ್ರ ಬೆಟ್ಟಕೊಪ್ಪ