Advertisement

ಜಲಮೂಲ ಸಂರಕ್ಷಣೆ ಚಿಂತನೆ ಅಗತ್ಯ: ಶರಣಪ್ಪ

11:58 AM Mar 23, 2021 | Team Udayavani |

ಧಾರವಾಡ: ನಮ್ಮಲ್ಲಿರುವ ಎಲ್ಲ ಬಗೆಯ ಜಲಮೂಲಗಳಬಗ್ಗೆ ಇಂದು ಚಿಂತನೆ ನಡೆಯಬೇಕಾಗಿರುವುದುಅತ್ಯಂತ ಅವಶ್ಯವಿದೆ ಎಂದು ಕಲಬುರಗಿಯಯನೀರಾವರಿ ಯೋಜನಾ ವಲಯದ ಕಾಡಾ ಅಧ್ಯಕ್ಷ ಶರಣಪ್ಪ ತಳವಾರ ಹೇಳಿದರು.

Advertisement

ನಗರ ಹೊರವಲಯದ ವಾಲ್ಮಿಯಲ್ಲಿ ಹಮ್ಮಿಕೊಂಡಿದ್ದ ವಿಶ್ವ ಜಲ ದಿನಾಚರಣೆ ಕಾರ್ಯಕ್ರಮಉದ್ಘಾಟಿಸಿ ಅವರು ಮಾತನಾಡಿದರು. ಪ್ರತಿ ರೈತನಿಗೆನೀರಿನ ಪ್ರಮಾಣಬದ್ಧ ಹಂಚಿಕೆ ಮತ್ತು ನಿರ್ವಹಣೆನೀರು ಬಳಕೆದಾರರ ಸಹಕಾರ ಸಂಘಗಳ ಪ್ರಮುಖಜವಾಬ್ದಾರಿಯಾಗಿದೆ. ಸರ್ಕಾರ ಈ ಸಂಘಗಳಪುನಶ್ಚೇತನಕ್ಕೆ ಎಲ್ಲ ಕ್ರಮ ಕೈಕೊಳ್ಳುತ್ತಿದ್ದು, ವಿವಿಧಇಲಾಖೆಗಳ ಸಹಕಾರ ಸಹಯೋಗದಿಂದ ಪುರುಷಮತ್ತು ಮಹಿಳೆಯರ ಸಮಾನ ಪಾಲ್ಗೊಳ್ಳುವಿಕೆಯಿಂದನೀರಿನ ನಿರ್ವಹಣೆಯಲ್ಲಿ ತೊಡಗಿಕೊಳ್ಳಬೇಕುಎಂದರು.

ಬೆಂಗಳೂರಿನ ಕಾಡಾ ನಿರ್ದೇಶನಾಲಯದನಿರ್ದೇಶಕ ಬಿ.ಜಿ. ಗುರುಪಾದಸ್ವಾಮಿ ಮಾತನಾಡಿ,ರೈತರು ವಿಶ್ವ ಜಲ ದಿನಾಚರಣೆಯಲ್ಲಿ ಭಾಗವಹಿಸಿದ್ದು,ಸಂತೋಷದ ವಿಷಯ. ವಿಶ್ವಸಂಸ್ಥೆ ಪ್ರತಿವರ್ಷನೀರಿನ ಮಹತ್ವ ತಿಳಿಸುವ ಸಲುವಾಗಿ ವಿಶ್ವ ಜಲದಿನಾಚರಣೆ ಮೂಲಕ ಜಾಗೃತಿ ಕಾರ್ಯಕ್ರಮಗಳನ್ನುಹಮ್ಮಿಕೊಳ್ಳುತ್ತಿದೆ. ವಿಶ್ವಸಂಸ್ಥೆಯ ಸುಸ್ಥಿರ ಅಭಿವೃದ್ಧಿಗುರಿ, ಶುದ್ಧ ನೀರು ಮತ್ತು ನೈರ್ಮಲ್ಯ ಪ್ರಮುಖವಾಗಿದೆಎಂದು ಹೇಳಿದರು.

ಬಾಗಲಕೋಟೆಯ ಜಂಟಿ ಕೃಷಿ ನಿರ್ದೇಶಕ ಚೇತನಾಪಾಟೀಲ ಮಾತನಾಡಿ, ಮಾನವನಿಗೆ ನಿಸರ್ಗದ ಕೊಡುಗೆ ಅಪಾರವಾಗಿದೆ. ನೀರಿಲ್ಲದೆ ನಾಗರಿಕತೆ ಇಲ್ಲ,ನೀರಿನ ಮೌಲ್ಯ ಮೌಲ್ಯೀಕರಿಸಬೇಕಾಗಿದೆ. ಕೃಷಿಯಲ್ಲಿ ಹೆಚ್ಚಿನ ನೀರಿನ ಬಳಕೆಯಿಂದ ಭೂಮಿ ಕೂಡಾ ಹಾಳಾಗುತ್ತಿದೆ. ಕೃಷಿ ಹೊಂಡ, ಬದು ನಿರ್ಮಾಣ, ಮಳೆನೀರು ಕೊಯ್ಲು, ಹನಿ ನೀರಾವರಿ ಅಳವಡಿಕೆ ಇಂದಿನ ತುರ್ತು ಅಗತ್ಯ ಎಂದರು.

ಗದಗದ ಜಲ ಸಂಶೋಧಕ ಡಾ| ಲತೀಫಶೌಕತಲಿಕುನ್ನಿಭಾವಿ ಮಾತನಾಡಿ, ಜಲಮೂಲಗಳ ಸಂರಕ್ಷಣೆಮಾಡುವುದು ಸಂವಿಧಾನಭದ್ಧ ಕರ್ತವ್ಯವಾಗಿದೆ. ಜಲದ ರಚನೆ, ನಾಗರಿಕತೆ, ಇತಿಹಾಸ ,ಸಂಸ್ಕೃತಿಯ ಮೇಲೆ ಪ್ರಭಾವ, ಪ್ರಸ್ತುತ ನೀರಿನ ಲಭ್ಯತೆ, ಸಮಸ್ಯೆಗಳು,ಮಳೆಯ ಪ್ರಮಾಣ, ಹವಾಮಾನ ವೈಪರೀತ್ಯ, ನೀರಿನಮಿತ ಬಳಕೆ ಕ್ರಮಗಳು, ಸರ್ಕಾರದ ಯೋಜನೆಗಳಬಗ್ಗೆ ವಿವರಿಸಿದರು. ನೀರಿನ ಸಂರಕ್ಷಣೆ ಪ್ರೋತ್ಸಾಹಿಸಲುತೆರಿಗೆ ವಿನಾಯತಿ, ಪ್ರಶಸ್ತಿಗಳನ್ನು ನೀಡಬೇಕು ಎಂದು ಹೇಳಿದರು.

Advertisement

ಅಧ್ಯಕ್ಷತೆ ವಹಿಸಿದ್ದ ವಾಲ್ಮೀ ನಿರ್ದೇಶ ಡಾ| ರಾಜೇಂದ್ರ ಪೋದ್ದಾರ ಮಾತನಾಡಿ, ಜಲ ಜೀವಜಗತ್ತಿನ ಜೀವಾಳವಾಗಿದೆ. ನೀರಿಗೆ ಸಾಂಸ್ಕೃತಿಕ,ಐತಿಹಾಸಿಕ, ಸಾಮಾಜಿಕ, ಆರ್ಥಿಕ, ರಾಜಕೀಯಮಹತ್ವವಿದೆ. ಹವಾಮಾನ ವೈಪರೀತ್ಯ ಮತ್ತು ಜಾಗತಿಕಜಲ ಸಂಕಷ್ಟದ ಸಂದರ್ಭದಲ್ಲಿ ನೀರಿನ ಮಹತ್ವ ಹೆಚ್ಚಾಗಿದೆ. ನೀರು ಪ್ರಸ್ತುತ ನಾಗರಿಕ ಸಮಾಜದಪ್ರಥಮಾದ್ಯತೆಯಾಗಬೇಕಾಗಿದೆ ಎಂದರು.

ವಾಲ್ಮಿಯ ಸಹಾಯಕ ಪ್ರಾಧ್ಯಾಪಕ ಪ್ರದೀಪ ದೇವರಮನಿ ಮಾತನಾಡಿ, ನೀರಾವರಿ ನಿರ್ವಹಣೆಮತ್ತು ಸಂರಕ್ಷಣೆಯಲ್ಲಿ ಅಭಿಯಂತರ ಪಾತ್ರ ವಿಷಯವಾಗಿ ಮಳೆನೀರು ಸಂಗ್ರಹಣೆಯ ಮಹತ್ವತಿಳಿಸಿದರು. ನೀರಾವರಿ ನಿರ್ವಹಣೆ ಸಾಧಕರಿಗೆ ಸನ್ಮಾನ,ಜಲ ಸಂರಕ್ಷಣೆ ಕರಪತ್ರ ಬಿಡುಗಡೆ ಮಾಡಲಾಯಿತು.ಪ್ರೊ| ಬಿ.ವೈ. ಬಂಡಿವಡ್ಡರ, ಮಹದೇವಗೌಡ ಹುತ್ತನಗೌಡರ, ನಾಗರತ್ನಾ ಹೊಸಮನಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next