Advertisement

ನೀರು ಹಿತಮಿತವಾಗಿ ಬಳಸಿ: ಹಿರೇಮಠ

11:58 AM Mar 24, 2021 | Team Udayavani |

ಧಾರವಾಡ: ನೀರಿನ ಸದ್ಬಳಕೆ ಮಾಡಿದಲ್ಲಿಮಾತ್ರ ಮುಂದಿನ ಪೀಳಿಗೆಗಳು ಉತ್ತಮಗುಣಮಟ್ಟದ ನೀರನ್ನು ಪಡೆಯಲುಸಾಧ್ಯವಿದೆ ಎಂದು ಕೃಷಿ ವಿವಿಯವಿಸ್ತರಣಾ ನಿರ್ದೇಶಕ ಡಾ| ರಮೇಶ ಬಾಬು ಹೇಳಿದರು.

Advertisement

ಐಸಿಎಆರ್‌-ಕೃಷಿ ವಿಜ್ಞಾನ ಕೇಂದ್ರದಲ್ಲಿ ವಿಶ್ವ ಜಲ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಸನ್ಮಾನ ಸ್ವೀಕರಿಸಿದ ಇಕೋ ವಿಲೇಜ್‌ ಸಂಸ್ಥಾಪಕ ಪಂಚಯ್ಯ ಹಿರೇಮಠಮಾತನಾಡಿ, ನೀರಿನ ಗುಣಮಟ್ಟಕಾಯ್ದುಕೊಳ್ಳುವುದು ಪ್ರಮುಖ. ನೀರುಹಾಗೂ ಜೇನು ಕೃಷಿಗೆ ಪೂರಕವಾದಸಂಬಂಧವಿದ್ದು,ನೀರನ್ನು ಮಿತವಾಗಿಬಳಸಬೇಕು. ಕೃಷಿ ಪದವೀಧರರು ಹೆಚ್ಚುಸಂಶೋಧನೆಗಳನ್ನು ಮಾಡಿದಲ್ಲಿ ಮಾತ್ರಅಭಿವೃದ್ಧಿ ಸಾಧ್ಯವಿದೆ ಎಂದರು.

ಡಾ| ಶ್ರೀಪಾದ ಕುಲಕರ್ಣಿಇದ್ದರು. ವಿದ್ಯಾರ್ಥಿಗಳಿಗೆ ವಿಶ್ವ ಜಲದಿನಾಚರಣೆ ಅಂಗವಾಗಿ ಭಾಷಣ ಸ್ಪರ್ಧೆಹಮ್ಮಿಕೊಳ್ಳಲಾಗಿತ್ತು. ಡಾ| ಎಸ್‌.ಎ.ಬಿರಾದಾರ ಸ್ವಾಗತಿಸಿದರು. ಡಾ| ಗೀತಾಎಸ್‌. ತಾಮಗಾಳೆ ನಿರೂಪಿಸಿದರು. ಡಾ|ಪ್ರವೀಣ ಗೋರೊಜಿ ವಂದಿಸಿದರು.

ರೋಟರಿ ಕ್ಲಬ್‌ :

Advertisement

ಹುಬ್ಬಳ್ಳಿ: ರೋಟರಿ ಕ್ಲಬ್‌ ಹುಬ್ಬಳ್ಳಿ ಸೌಥ್‌ನಿಂದಹಳೇಹುಬ್ಬಳ್ಳಿ ಸಿದ್ಧಾರೂಢ ನಗರದಲ್ಲಿರುವರೇವಣಸಿದ್ದೇಶ್ವರ ಶಾಲೆಯಲ್ಲಿ ವಿಶ್ವ ಜಲದಿನ ಆಚರಿಸಲಾಯಿತು.

ಕ್ಲಬ್‌ ಅಧ್ಯಕ್ಷ ಮಂಜುನಾಥ ಹೊಂಬಳಮಾತನಾಡಿ, ನೀರನ್ನು ಮಿತವಾಗಿ ಬಳಸಿ.ಶಾಲೆಗೆ ತಂದು ಉಪಯೋಗಿಸಿ ಉಳಿದನೀರನ್ನು ವ್ಯರ್ಥ ಮಾಡದೇ ಶಾಲೆಯಆವರಣದಲ್ಲಿರುವ ಗಿಡ-ಮರಗಳಿಗೆ ಹಾಕಿ.ನೀರಿನ ಮಿತವ್ಯಯದ ಬಗ್ಗೆ ಜಾಗೃತರಾಗಿಭವಿಷ್ಯದಲ್ಲಿ ನಮ್ಮ ಮುಂದಿನ ಪೀಳಿಗೆಕಷ್ಟ ಪಡುವ ದಿನಗಳು ಬರುತ್ತವೆಂದು ಇಂದಿನಿಂದಲೇ ಎಷ್ಟು ಸಾಧ್ಯವೋ ಅಷ್ಟು ನೀರನ್ನು ಮಿತವಾಗಿ ಬಳಸಿ ಎಂದರು.

ಕ್ಲಬ್‌ ಸದಸ್ಯರಾದ ಮನೋಜಗೂಗಲಿಯಾ, ಅಶೋಕ ದಾನಿ, ಶಂಕರಮೋಹಿತೆ, ನಾಗರಾಜ ಹಾವನೂರ, ವಿಜಯ ಮಲಾಡ್ಕರ, ಮಧುಕುಮಾರ,ಜಿ.ಎಂ. ರಘುನಾಥ ಪೈ, ತನಿಷ್ಕ ಹೊಂಬಳಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next