Advertisement

ಹಿಂಡನ್‌ ವಾಯುನೆಲೆಗೆ ಡಕೋಟಾ ಆಕರ್ಷಣೆ

09:17 AM Feb 14, 2018 | Team Udayavani |

ಹೊಸದಿಲ್ಲಿ: 1947ರ ಭಾರತ ಮತ್ತು ಪಾಕಿಸ್ಥಾನ ಯುದ್ಧದಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಡಕೋಟಾ ಯುದ್ಧ ವಿಮಾನ ದುರಸ್ತಿಗೊಳಿಸಿ ಮತ್ತೆ ಭಾರತೀಯ ವಾಯುಪಡೆಗೆ ಸೇರ್ಪಡೆ ಮಾಡಲಾಗಿದೆ. ಎರಡನೇ ವಿಶ್ವ ಮಹಾಯುದ್ಧದ ಕಾಲಕ್ಕೆ ಸೇರಿದ ವಿಮಾನವನ್ನು ಪುನರುಜ್ಜೀವನಗೊಳಿಸುವಲ್ಲಿ ನೆರವಾಗಿದ್ದು ಕರ್ನಾಟಕವನ್ನು ರಾಜ್ಯಸಭೆಯಲ್ಲಿ ಪ್ರತಿನಿಧಿಸುತ್ತಿರುವ ಸ್ವತಂತ್ರ ಸಂಸದ ರಾಜೀವ್‌ ಚಂದ್ರಶೇಖರ್‌. ಅದಕ್ಕೆ ಸಂಬಂಧಿಸಿದ ದಾಖಲೆಗಳನ್ನು ರಾಜೀವ್‌ ಚಂದ್ರಶೇಖರ್‌ ಐಎಎಫ್ ಮುಖ್ಯಸ್ಥ ಏರ್‌ಚೀಫ್ ಮಾರ್ಷಲ್‌ ಬಿ.ಎಸ್‌. ಧನೋವಾಗೆ ಮಂಗಳವಾರ ಹಸ್ತಾಂತರಿಸಿದ್ದಾರೆ.

Advertisement

ಇಂಗ್ಲೆಂಡ್‌ನಲ್ಲಿ 7  ವರ್ಷ ದುರಸ್ತಿಗೆ ಈ ವಿಮಾನ ಒಳಪಟ್ಟಿತ್ತು. ಅದನ್ನು ಉ.ಪ್ರ. ಹಿಂಡನ್‌ ವಾಯುನೆಲೆಯಲ್ಲಿ ಇರಿಸಲಾಗುತ್ತದೆ. ಮುಂದಿನ ತಿಂಗಳು ಅದು ಆಗಮಿಸಲಿದೆ. ಅದರ ಬಗ್ಗೆ ಮಾತನಾಡಿದ ಏರ್‌ಚೀಫ್ ಮಾರ್ಷಲ್‌ “1930ರಲ್ಲಿ ಅದನ್ನು ವಾಯುಪಡೆಗೆ ಸೇರಿಸಿಕೊಳ್ಳಲಾಗಿತ್ತು. ಅಂದಿನ ರಾಯಲ್‌ ಇಂಡಿಯನ್‌ ಏರ್‌ಫೋರ್ಸ್‌ನ 12 ಸ್ಕ್ವಾಡ್ರನ್‌ನಲ್ಲಿ ಬಳಸಿಕೊಳ್ಳಲಾಗಿತ್ತು.  1947ರಲ್ಲಿ ಜಮ್ಮು – ಕಾಶ್ಮೀರದಲ್ಲಿ ಜನರ ರಕ್ಷಣೆಯಲ್ಲಿ ಅದರ ಪಾತ್ರ ಪ್ರಮುಖವಾಗಿತ್ತು’ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next