Advertisement

2ನೇ ವಿಶ್ವಯುದ್ಧದಲ್ಲಿ ಮುಳುಗಿದ್ದ ಹಡಗು 84 ವರ್ಷಗಳ ನಂತರ ಪತ್ತೆ!

08:06 PM Apr 23, 2023 | Team Udayavani |

ನವದೆಹಲಿ: ಮನೆಯಲ್ಲಿನ ಸದಸ್ಯರು ಒಂದೆರಡು ವರ್ಷ ನಾಪತ್ತೆಯಾಗಿ, ಮತ್ತೆ ಮರಳಿದರೆ ಆಗುವ ಅಚ್ಚರಿ, ಸಂತಸ ಎಷ್ಟೆಂದು ನಿಮಗೆಲ್ಲ ಗೊತ್ತಿರುತ್ತದೆ. ಹಾಗಿರುವಾಗ 2ನೇ ವಿಶ್ವಯುದ್ಧದಲ್ಲಿ ನಾಪತ್ತೆಯಾಗಿದ್ದ ಹಡಗೊಂದು 84 ವರ್ಷಗಳ ನಂತರ ಪತ್ತೆಯಾದರೆ ಆಗುವ ಅಚ್ಚರಿ ಎಷ್ಟಿರಬಹುದು?

Advertisement

ಶನಿವಾರ ದ.ಚೀನಾ ಸಮುದ್ರವೆಂದು ಕರೆಸಿಕೊಳ್ಳುವ ಫಿಲಿಪ್ಪೀನ್ಸ್‌ನ ಲುಝಾನ್‌ ದ್ವೀಪದ ಸಮುದ್ರದಾಳದಲ್ಲಿ ಜಪಾನಿನ ಮಾಂಟೆವಿಡಿಯೊ ಮಾರು ಹಡಗು ಪತ್ತೆಯಾಗಿದೆ. 13,123 ಅಡಿಗಳ ಆಳದಲ್ಲಿ ಈ ಹಡಗು ಸಿಕ್ಕನಂತರ ಯೋಧರ ಕುಟುಂಬಕ್ಕೆ ಅಂತೂ ಒಂದು ಉತ್ತರ ಸಿಕ್ಕಿದೆ.

ಆಸೀಸ್‌ನ 864 ಯೋಧರನ್ನು ಬಲಿಪಡೆದಿದ್ದ ಈ ಘಟನೆ, ಆಸೀಸ್‌ ಇತಿಹಾಸದಲ್ಲೇ ಅತಿದೊಡ್ಡ ಸಮುದ್ರ ದುರಂತ ಎಂದು ದಾಖಲಾಗಿದೆ. 1942, ಜುಲೈ ತಿಂಗಳಲ್ಲಿ ಪಪುವಾ ನ್ಯೂಗಿನಿಯದಿಂದ ಚೀನಾದ ಹೈನಾನ್‌ಗೆ ಹೊರಟಿದ್ದ ಹಡಗು ಅಮೆರಿಕದ ಸಬ್‌ಮರಿನ್‌ವೊಂದರ ಟಾಪೆಡೊ ದಾಳಿಗೆ ತುತ್ತಾಗಿತ್ತು. ಇದು ವ್ಯಾಪಾರಿ ಹಡಗಾಗಿದ್ದರೂ ಯುದ್ಧ ಕಾರ್ಯಾಚರಣೆಗಳಿಗೂ ಬಳಸಲ್ಪಡುತ್ತಿತ್ತು.

864 ಆಸೀಸ್‌ ಯೋಧರು ಸಾವನ್ನಪ್ಪಿದ್ದರೂ ಹಡಗಿನಲ್ಲಿ ಯುದ್ಧ ಕೈದಿಗಳಿದ್ದರೇ ಎನ್ನುವುದು ಖಚಿತವಿಲ್ಲ. ಇದರ ಶೋಧವನ್ನು ಆಸ್ಟ್ರೇಲಿಯಾದ ರಕ್ಷಣಾ ಇಲಾಖೆ ನೆರವಿನಿಂದ ಸಬ್‌ಮರಿನ್‌ ಪುರಾತತ್ವ ಇಲಾಖೆ, ಸಮುದ್ರದಾಳ ಶೋಧಪಡೆ ಕೈಗೊಂಡಿತ್ತು.

Advertisement

Udayavani is now on Telegram. Click here to join our channel and stay updated with the latest news.

Next