Advertisement

ಕ್ಷಯರೋಗ ನಿರ್ಮೂಲನೆಗೆ ಸಹಕಾರ ನೀಡಿ

04:02 PM Mar 26, 2021 | Team Udayavani |

ಶ್ರೀರಂಗಪಟ್ಟಣ: ಕ್ಷಯರೋಗ ನಿರ್ಮೂಲನೆ ಗೊಳಿಸಲು ಇದು ಸಕಾಲವಾಗಿದೆ. 2025 ರ ವೇಳೆಗೆ ಕ್ಷಯರೋಗವನ್ನು ಸೋಲಿಸಿ ದೇಶವನ್ನು ಗೆಲ್ಲಿಸುವ ಸಂಕಲ್ಪ ಮಾಡೋಣ ಎಂದು ಮೈಸೂರು ವಿಭಾಗೀಯ ಆರೋಗ್ಯ ಶಿಕ್ಷಣಾಧಿಕಾರಿ ಪ್ರಕಾಶ್‌ ಹೇಳಿದರು.

Advertisement

ತಾಲೂಕು ಆರೋಗ್ಯಾಧಿಕಾರಿಗಳ ಕಚೇರಿ, ಶ್ರೀರಂಗಪಟ್ಟಣ, ಪ್ರಾ.ಆ.ಕೇಂದ್ರ ಕೆ.ಆ ರ್‌.ಸಾಗರ,ಕಾವೇರಿ ನೀರಾವರಿ ನಿಗಮ ಹಾಗೂ ಗ್ರಾಮಪಂಚಾಯಿತಿ ಸಹಯೋಗದಲ್ಲಿ ಪ್ರಸಿದ್ಧ ಪ್ರವಾಸಿ ಸ್ಥಳಕೆ.ಆರ್‌ಎಸ್‌ ಬೃಂದಾವನದ ಪ್ರವೇಶ ದ್ವಾರದಲ್ಲಿಆಯೋಜಿಸಿದ್ದ ವಿಶ್ವ ಕ್ಷಯರೋಗ ದಿನ-2021 ವಿಶೇಷ ಜಾಗೃತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಗಾಳಿಯ ಮೂಲಕ ಒಬ್ಬರಿಂದ ಒಬ್ಬರಿಗೆ ಹರಡುವ ಕ್ಷಯವು ಸಾಂಕ್ರಾಮಿಕ ರೋಗವಾಗಿದ್ದು, ಸಕಾಲದಲ್ಲಿ ಪರೀಕ್ಷೆ ಮತ್ತು ನಿಯಮಿತ ಚಿಕಿತ್ಸೆ ಪಡೆಯುವುದರಿಂದ ಪೂರ್ಣ ಗುಣಪಡಿಸ ಬಹುದಾಗಿದೆ ಎಂದರು.

ಲಕ್ಷಣಗಳು: ಸತತವಾದ ಕೆಮ್ಮು, ಕಫ‌, ಕಫ‌ದಲ್ಲಿ ರಕ್ತ, ಹಸಿವಾಗದಿರುವುದು, ತೂಕ ಕಡಿಮೆಯಾಗುವುದು, ಬೆವರುವುದು, ಸಾಯಂಕಾಲದ ವೇಳೆ ಜ್ವರ, ದೇಹದ ಮೇಲಿನ ಗಂಟುಗಳು ಕ್ಷಯರೋಗದಲಕ್ಷಣಗಳಾಗಿದ್ದು ಪರೀಕ್ಷಿಸಿಕೊಳ್ಳಬೇಕು ಎಂದರು.

ತಿಂಗಳಿಗೆ 500 ರೂ.: ಆಡಳಿತ ವೈದ್ಯಾಧಿಕಾರಿ ಡಾ.ಸೌಮ್ಯಾ ಸಿ.ಎಸ್‌ ಮಾತನಾಡಿ, ಉಚಿತ ಕಫ‌ ಪರೀಕ್ಷೆ, ಕ್ಷ-ಕಿರಣ ಪರೀಕ್ಷೆ, ಆರು ತಿಂಗಳು ಮನೆಬಾಗಿಲಿಗೆ ಆಶಾ ಕಾರ್ಯಕರ್ತರ ಮೂಲಕ ಚಿಕಿತ್ಸೆಜೊತೆಗೆ ರೋಗಿಯ ಪೌಷ್ಟಿಕ ಆಹಾರಕ್ಕಾಗಿ ಪ್ರತೀತಿಂಗಳುವ 500 ರೂ.ನಂತೆ ಒಟ್ಟು 3000ರೂ.ಪ್ರೋತ್ಸಾಹ ಧನ ನೀಡುವ ಸೌಲಭ್ಯ ಸರ್ಕಾರಿ ಆಸ್ಪತ್ರೆಯಲ್ಲಿದೆ ಎಂದರು.

Advertisement

ಜಾಗೃತಿ: ವಿಶ್ವ ಕ್ಷಯರೋಗ ದಿನದ ಅಂಗವಾಗಿ ಬೃಂದಾವನದ ಪ್ರವೇಶ ದ್ವಾರವನ್ನು ಕೆಂಪು ದೀಪಾಲಂಕಾರದಿಂದ ಸಿಂಗರಿಸಿ ಜಾಗೃತಿ ಮೂಡಿಸಲಾಯಿತು. ಕ್ಷಯರೋಗ ವಿಭಾಗದ ಮೇಲ್ವಿಚಾರಕ ಸುಹೇಲ್‌ ಅಹಮದ್‌ ಹಾಗೂ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಎಸ್‌.ಡಿ.ಬೆನ್ನೂರ ಕ್ಷಯರೋಗ ನಿರ್ಮೂಲನೆಯ ಪ್ರತಿಜ್ಞೆ ಬೋಧಿಸಿದರು. ಪ್ರವಾಸಿಗರಿಗೆ ಕರಪತ್ರ ವಿತರಿಸಿ ಹಾಗೂ ಮೈಕಿಂಗ್‌ ಮೂಲಕ ಜಾಗೃತಿ ಮೂಡಿಸಲಾಯಿತು.

ಆರೋಗ್ಯ ಇಲಾಖೆಯ ಮೈಸೂರು ಎಎಂಒ ಭೀಮಣ್ಣ, ಕೆಆರ್‌ಎಸ್‌ ಗ್ರಾಪಂ ಅಧ್ಯಕ್ಷನಾಗೇಂದ್ರಕುಮಾರ್‌, ಉಪಾಧ್ಯಕ್ಷೆ ಶೃತಿ ಯೋಗೀಶ್‌,ಪಿಡಿಒ ರಫೀಕ್‌ ಕರ್ಜಗಿ, ಸದಸ್ಯರಾದಸಿ.ಮಂಜುನಾಥ್‌, ಕಾವೇರಿ ನೀರಾವರಿ ನಿಗಮದಅಭಿಯಂತರರಾದ ಶಿವಕುಮಾರ್‌, ಆರೋಗ್ಯ ಇಲಾಖೆಯ ಮೇಲ್ವಿಚಾರಕರಾದ ಮಹೇಶ್‌, ಪ್ರಭಾಕರ್‌, ಜಿ.ಮೋಹನ್‌, ಸಲೀಂಪಾಷ,ಹೇಮಣ್ಣ, ಚಂದನ್‌, ಆರೋಗ್ಯ ಸಹಾಯಕಿ ಯರಾದ ಸೌಮ್ಯಾ, ಗೀತಾ, ಜಯಶೀಲ ಆರ್‌. ಮತ್ತು ಆಶಾ ಕಾರ್ಯಕರ್ತರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next