Advertisement

ವಿಶ್ವ ರಂಗಭೂಮಿ ದಿನಾಚರಣೆ

04:01 PM Mar 25, 2017 | |

27 ಮಾರ್ಚ್‌ 2017ರಂದು ಸೋಮವಾರ ಪರಂಪರಾ ಕಲ್ಚರಲ್‌ ಫೌಂಡೇಶನ್‌ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ವಿಶ್ವ ರಂಗಭೂಮಿ ದಿನಾಚರಣೆ ಆಯೋಜಿಸಲಾಗಿದೆ.

Advertisement

ಅಂದು ಸಂಜೆ 5 ಗಂಟೆಗೆ ನಯನ ಸಭಾಂಗಣದಲ್ಲಿ ನಡೆಯಲಿರುವ ರಂಗಸಂಗೀತ ಮತ್ತು ರಂಗಗೌರವ ಕಾರ್ಯಕ್ರಮವನ್ನು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಉದ್ಘಾಟಿಸುವರು.

ಕೇಂದ್ರ ಸಂಗೀತ ಮತ್ತು ನಾಟಕ ಅಕಾಡೆಮಿ ಪ್ರಶಸ್ತಿ ಹಿರಿಯ ಕಲಾವಿದ ಡಾ.ಲಕ್ಷ್ಮಣದಾಸ್‌, ಬಿಬಿಎಂಪಿ ಸಾರ್ವಜನಿಕ ಆರೋಗ್ಯ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷಎಂ.ಮುನಿರಾಜು, ರಂಗಕರ್ಮಿ ಮುನಿಮಾರಪ್ಪ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು.

ಸಮಾಜ ಸೇವಾ ಧುರೀಣ ಎಸ್‌.ವಿ.ಶಿವರಾಂ ಅಧ್ಯಕ್ಷತೆ ವಹಿಸುವರು. ಪರಂಪರಾ ಅಧ್ಯಕ್ಷ ಜಿ.ಪಿ.ರಾಮಣ್ಣ ಉಪಸ್ಥಿತರಿರುವರು. ಇದೇ ಸಂದರ್ಭದಲ್ಲಿ ಖ್ಯಾತ ರಂಗಕರ್ಮಿ ಹಾಗೂ ವಾಗ್ಮಿ ವೈ.ವಿ.ಗುಂಡೂರಾವ್‌ ಮತ್ತು ಕರ್ನಾಟಕ ನಾಟಕ ಅಕಾಡೆಮಿ ಮಾಜಿ ಸದಸ್ಯ, ರಂಗಕರ್ಮಿ ಎಂ.ಎಸ್‌.ಗುಣಶೀಲನ್‌ ಅವರಿಗೆ ರಂಗಗೌರವ ಸಲ್ಲಿಸಲಾಗುವುದು. ಸಭಾ ಕಾರ್ಯಕ್ರಮದ ಆರಂಭಕ್ಕೆ ಬೆಂಗಳೂರು ಗ್ರಾಮಾಂತರ ಜಿಲ್ಲಾ ರಂಗಕಲಾವಿದರ ಸಂಘದ ಸದಸ್ಯರು ರಂಗಸಂಗೀತ ಕಾರ್ಯಕ್ರಮ ನಡೆಸಿಕೊಡುವರು.

Advertisement

Udayavani is now on Telegram. Click here to join our channel and stay updated with the latest news.

Next