Advertisement

ನಟನೆಯೇ ಅಭಿನಯ ಕಲೆಯ ತಾಯಿ

01:35 PM Mar 30, 2021 | Team Udayavani |

ಹೊನ್ನಾವರ: ಹಾಲು ಕುಡಿಯಲು ಹಠಮಾಡುವ ಮಗುವನ್ನು ರಮಿಸಲು ತಾಯಿ ಒಮ್ಮೆ ಗುಮ್ಮನಾಗಿಹೆದರಿಸುತ್ತ, ಮತ್ತೂಮ್ಮೆ ಮುದ್ದು ಮಾಡುತ್ತ, ಕಣ್ಣರಳಿಸಿನೋಡುವ ನಟನೆಯೇ ಅಭಿನಯ ಕಲೆಯ ತಾಯಿ. ಪ್ರಪಂಚ ಆರಂಭವಾದಾಗಿನಿಂದ ಇದು ನಡೆದುಕೊಂಡುಬಂದು ರೂಪಾಂತರಗೊಳ್ಳುತ್ತ ದೈವೀ ಕಲೆಯಾಗಿ,ಬದುಕಿಗೆ ನೆಲೆಯಾಗಿ, ಮನರಂಜನೆಯ ಸಾಧನವಾಗಿದೆಎಂದು ಹೆಸರಾಂತ ಅರ್ಥಧಾರಿ, ಚಿಂತಕ ನಾರಾಯಣ ಯಾಜಿ ಸಾಲೇಬೈಲ್‌ ಹೇಳಿದ್ದಾರೆ.

Advertisement

ಕೆರೆಕೋಣಿನ ಚಿಂತನ ರಂಗ ಅಧ್ಯಯನ ಕೇಂದ್ರಡಾ| ಆರ್‌.ವಿ. ಭಂಡಾರಿಯವರ ನೆನಪಿನ ಸಂಸ್ಕೃತಅಧ್ಯಯನ ಕೇಂದ್ರ ಸಹಯಾನದಲ್ಲಿ ಏರ್ಪಡಿಸಿದ್ದ ವಿಶ್ವರಂಗಭೂಮಿ ದಿನಾಚರಣೆ ಕಾರ್ಯಕ್ರಮದಲ್ಲಿಹಿರಿಯ ಭಾಗವತ ಬೊಮ್ಮಯ್ಯ ವೆಂಕಟ್ರಮಣಗಾಂವ್ಕರ್‌ ಹಿತ್ತಲಮಕ್ಕಿ ಇವರಿಗೆ ಹೆಸರಾಂತ ಯಕ್ಷಗಾನ ಕಲಾವಿದರಾಗಿದ್ದ ದಿವಂಗತ ಜಿ.ಎಸ್‌. ಭಟ್‌ ಧಾರೇಶ್ವರಇವರ ನೆನಪಿನ ಸನ್ಮಾನ ನೀಡಿ ಮಾತನಾಡಿದರು.ಯಕ್ಷಗಾನದಲ್ಲಿ ಮಾತ್ರ ರಾಮನನ್ನು, ಕೃಷ್ಣನನ್ನು,ರಕ್ಕಸರನ್ನು, ಋಷಿಮುನಿಗಳನ್ನು ಪ್ರಶ್ನಿಸುವ ನಡೆಯುತ್ತದೆ.

ಅರ್ಥಧಾರಿಗಳು ಪ್ರಶ್ನಿಸುವಾಗ ಮಹಾಕಾವ್ಯಗಳಒಳಹರಿವು ಅರಿವಿಗೆ ಬರುತ್ತದೆ. ಮನುಷ್ಯ ಜೀವನಕ್ಕೆಇದು ಹೊಸ ಬೆಳಕು ಕೊಡುತ್ತದೆ. ಬೇರೆ ಕಡೆ ದೇವರನ್ನು ಪ್ರಶ್ನಿಸಿದವ ಅಪರಾಧಿಯಾಗುತ್ತಾನೆ. ಯಕ್ಷಗಾನದಲ್ಲಿ ಪ್ರಶ್ನಿಸಿದವ ಪಂಡಿತ, ಇದು ಯಕ್ಷಗಾನದ ವೈಶಿಷ್ಟ್ಯ ಎಂದು ಹೇಳಿದ ಬೊಮ್ಮಯ್‌ ಗಾಂವ್ಕರ್‌ ಅವರು ಶಿಕ್ಷಕರಾಗಿ ವೃತ್ತಿ ಮಾಡುತ್ತ ಯಕ್ಷಗಾನ ಕಲಾವಿದರಾಗಿ ನಂತರ ಭಾಗವತರಾಗಿ ಬೆಳೆದದ್ದು ರಂಗಕ್ಕೆ ಕೊಡುಗೆ ನೀಡಿದ್ದು ಇನ್ನೊಬ್ಬ ಶಿಕ್ಷಕ ಮತ್ತು ಯಕ್ಷಗಾನ ಕಲಾವಿದರ ಹೆಸರಿನಲ್ಲಿ ಪ್ರಶಸ್ತಿ ಸಲ್ಲುತ್ತಿರುವುದು ಅಭಿನಂದನೀಯ ಎಂದರು.

ಅಧ್ಯಕ್ಷತೆ ವಹಿಸಿದ್ದ ಕಿರಣ್‌ ಭಟ್‌, ಹೆಲೆನ್‌ ಮಿರ್‌ ಅವರ ಜಾಗತಿಕ ರಂಗಭೂಮಿ ಸಂದೇಶವನ್ನು ಓದಿ ಕೋವಿಡ್ ಅಭದ್ರತೆ ನಡುವೆಯೂ ಸಾಮಾಜಿಕ ಜಾಲತಾಣದಲ್ಲಿ ಕಲಾವಿದ ಅಸ್ತಿತ್ವ ಉಳಿಸಿಕೊಂಡಿದ್ದು ವಿಶೇಷತೆ ಎಂದರು.

ಸಹಯಾನದ ವಿಠ್ಠಲ ಭಂಡಾರಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಇಂದಿರಾ ಭಂಡಾರಿ ನಿರ್ವಹಿಸಿದರು. ಸನ್ಮಾನ ಪ್ರಾಯೋಜಿಸಿದ ಶ್ರೀಪಾದ ಭಟ್‌ ಅವರ ಪತ್ನಿ ಶ್ರೀಮತಿ ಶಾಂತಲಾ ಭಟ್‌ ಇದ್ದರು. ಜಟ್ಟು ಗೌಡ ವಂದಿಸಿದರು. ನಂತರ ಗಣೇಶ ಭಂಡಾರಿ ಕೆರೆಕೋಣ ತರಬೇತು ನೀಡಿದ ಮಕ್ಕಳಿಂದ ಸುಂದರ ಯಕ್ಷಗಾನ ಪ್ರದರ್ಶನ ನಡೆಯಿತು.

Advertisement
Advertisement

Udayavani is now on Telegram. Click here to join our channel and stay updated with the latest news.

Next