ದೊಡ್ಡಬಳ್ಳಾಪುರ: ಯುನೆಸ್ಕೋದಿಂದ ರಂಗ ಚಟುವಟಿಕೆಗಳಿಗೆ ಆರ್ಥಿಕ ಸಹಾಯ ಪಡೆಯುವಲ್ಲಿ ಭಾರತ ಸೋತಿರುವುದು ಶೋಚನೀಯ ಸಂಗತಿಯಾಗಿದ್ದು, ವಿಶ್ವದ ಕಲಾವಿದರೆಲ್ಲ ಒಂದೇ ಎನ್ನುವ ಮನೋಭಾವ ದೊಂದಿಗೆ ರಂಗಭೂಮಿಗೆ ಕಾಯಕಲ್ಪ ನೀಡುವ ಅಗತ್ಯವಿದೆ ಎಂದು ಕರ್ನಾಟಕ ನಾಟಕ ಅಕಾಡೆಮಿ ಸದಸ್ಯ ಎಂ.ಎಸ್.ಗುಣಶೀಲನ್ ಹೇಳಿದರು.
ನಗರದ ಡಾ.ರಾಜ್‌ಕುಮಾರ್ ಕಲಾಮಂದಿರದಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲಾ ರಂಗಭೂಮಿ ಕಲಾವಿದರ ಸಂಘ ಹಾಗೂ ಕರ್ನಾಟಕ ನಾಟಕ ಅಕಾಡೆಮಿ ವತಿಯಿಂದ ವಿಶ್ವ ರಂಗಭೂಮಿ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ರಂಗಭೂಮಿ ಚಟುವಟಿಕೆ ನಿರತರಿಗೂ ಒಂದು ಸ್ಮರಣೀಯ ದಿನ ಬೇಕು ಎನ್ನುವ ಕಾರಣದಿಂದಾಗಿ1962ರಿಂದ ವಿಶ್ವ ರಂಗಭೂಮಿ ದಿನವನ್ನು ಮಾರ್ಚ್ 27ರಂದು ಆಚರಿಸಿಕೊಂಡು ಬರಲಾಗುತ್ತಿದ್ದು, ದೇಶಗಳ ನಡುವೆ ಸಾಂಸ್ಕೃತಿಕ ಬಾಂಧವ್ಯ ಬೆಸೆಯುವನಿಟ್ಟಿನಲ್ಲಿ ರಂಗಭೂಮಿ ವೇದಿಕೆಯಾಗಿದೆ. ಈ ಬಾರಿ ಯುನೈಟೆಡ್ ಕಿಂಗ್‌ಡಮ್‌ನ ನಟಿ ಹೆಲನ್ ಮಿರೆನ್ ಸಂದೇಶ ನೀಡಿದ್ದಾರೆ.
ಆದರೆ ನೂರಕ್ಕೂ ಹೆಚ್ಚು ದೇಶಗಳಲ್ಲಿ ಕಚೇರಿ ಹೊಂದಿರುವ ವರ್ಲ್ಡ್ ಥಿಯೇಟರ್ ಇನ್ಸಿಟಿಟ್ಯೂಟ್(ವಿಶ್ವ ರಂಗಭೂಮಿ ಚಟುವಟಿಕೆಗಳ ಸಂಸ್ಥೆ)ಯುನೆಸ್ಕೋ ಪ್ರಾಯೋಜಿಸುವ ಐಟಿಐ ನಮ್ಮ ದೇಶದಲ್ಲಿಇನ್ನೂ ಕಚೇರಿ ಹೊಂದಿಲ್ಲ.ಬಾಂಗ್ಲಾದೇಶ, ನೇಪಾಳ, ಶ್ರೀಲಂಕಾದಂತಹ ಚಿಕ್ಕಪುಟ್ಟ ದೇಶಗಳಲ್ಲಿ ಸಹ ಐಟಿಐ ಕೇಂದ್ರಗಳಿವೆ. ಈ ದೇಶಗಳು ಐಟಿಐ ಮತ್ತು ಯುನೆಸ್ಕೋದ ಸಾಂಸ್ಕೃತಿಕ ಲಾಭಗಳನ್ನು ಪಡೆಯುತ್ತಿವೆ. ಆದರೆ ಪ್ರದರ್ಶನ ಕಲೆಗಳಲ್ಲಿ ತುಂಬಾ ಶ್ರೀಮಂತವಾಗಿರುವ ನಮ್ಮ ದೇಶ ಇನ್ನೂ ಐಟಿಐ ಕೇಂದ್ರವನ್ನು ಹೊಂದಿಲ್ಲ ಎನ್ನುವುದು ಪ್ರಶ್ನೆಯಾಗಿದೆ ಎಂದರು.
ದೊಡ್ಡಬಳ್ಳಾಪುರ ತಾಲೂಕಿನಲ್ಲಿ ಹಲವಾರು ಕಲಾವಿದರಿದ್ದಾರೆ. ಆದರೆ ಹೊಸ ರಂಗಪ್ರಯೋಗಗಳು ವಿರಳವಾಗುತ್ತಿವೆ. ಹೊಸ ಪ್ರಯೋಗಗಳು ರಂಗಭೂಮಿಗೆ ಜೀವಂತಿಕೆಗೆ ಇಂಬು ನೀಡುತ್ತವೆ. ಕಲಾವಿದರು ತಮ್ಮ ಊರಿಗಷ್ಟೇ ಕಲಾ ಪ್ರದರ್ಶನ ಸೀಮಿತಗೊಳಿಸದೇ ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಪ್ರದರ್ಶನಗಳನ್ನು ನೀಡಬೇಕಿದೆ. ನಾಟಕ ಅಕಾಡೆಮಿಯಿಂದ ರಂಗಕಲೆಗೆ ಅಗತ್ಯ ಸಹಕಾರ ನೀಡಲಾಗುತ್ತಿದೆ. ಸದು ಪಯೋಗಪಡಿಸಿಕೊಳ್ಳಬೇಕು ಎಂದು ತಮ್ಮ ನಾಟಕದ ಜೀವಿತವನ್ನು ಪುರಭವನದಲ್ಲಿ ಕಳೆದ ದಿನಗಳನ್ನು ಸ್ಮರಿಸಿದರು.
ಜಿಲ್ಲಾ ರಂಗಭೂಮಿ ಕಲಾವಿದರ ಸಂಘದ ಗೌ. ಅಧ್ಯಕ್ಷ ಕೆ.ಎಂ.ಕೃಷ್ಣಮೂರ್ತಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಮಾಧ್ಯಮಗಳ ಪ್ರಭಾವದಿಂದ ಇಂದು ರಂಗಕಲೆ ನೇಪಥ್ಯಕ್ಕೆ ಸರಿಯುತ್ತಿದೆ. ಕೊವಿಡ್ ಪರಿಣಾಮಕಲಾವಿದರು ಸಂಕಷ್ಟದಲ್ಲಿದ್ದು ಸರ್ಕಾರ ಕಲಾವಿದರಿಗೆಹೆಚ್ಚಿನ ನೆರವು ನೀಡಬೇಕಿದೆ ಎಂದರು. ಹಿರಿಯ ಕಲಾವಿದರಾದ ಬಿ.ಚಂದ್ರಯ್ಯ, ಕೆ.ಪಿ. ಪ್ರಕಾಶ್, ಕೃಷ್ಣಮೂರ್ತಿ, ಎಸ್.ಸಿದ್ದರಾಮಯ್ಯ, ಕೆ.ಸಿ.ನಾರಾಯಣ್,ಅಕ್ಕಯ್ಯಮ್ಮ ಅವರನ್ನು ಸನ್ಮಾನಿಸಲಾಯಿತು.ಜಿಲ್ಲಾ ಕಲಾವಿದರ ಸಂಘದ ಅಧ್ಯಕ್ಷ ಡಿ.ಕೆಂಪಣ್ಣ,ಕರ್ನಾಟಕ ಕಲಾವಿದರ ಒಕ್ಕೂಟದ ಅಧ್ಯಕ್ಷ ಗುಬ್ಬಿವೀರೇಶ್,ನಗರಸಭೆ ಮಾಜಿ ಅಧ್ಯಕ್ಷ ಟಿ.ಎನ್. ಪ್ರಭುದೇವ್, ದೊಡ್ಡಬಳ್ಳಾಪುರ ತಾಲೂಕು ಕಲಾವಿದರಸಂಘದ ಅಧ್ಯಕ್ಷ ಎನ್.ರಾಮಾಂಜಿನಪ್ಪ, ದೇವನಹಳ್ಳಿತಾಲೂಕು ಕಲಾವಿದರ ಸಂಘದ ಅಧ್ಯಕ್ಷ ಮೋಹನ್ ಬಾಬು, ಹೊಸಕೋಟೆ ಕಲಾವಿದರ ಸಂಘದ ಅಧ್ಯಕ್ಷ ರಾಮಚಂದ್ರಪ್ಪ, ವಾಣಿಜ್ಯೋದ್ಯಮಿ ಭಾಸ್ಕರ್, ಕಲಾವಿದ ಶಿವರಾಜು ಇತರರಿದ್ದರು. ನರಸೀಪುರ ಕೃಷ್ಣಮೂರ್ತಿ ನಿರ್ದೇಶನದ ಶ್ರೀ ರಾಮ ಪಾದಕ ಪಟ್ಟಾಭಿಷೇಕ ಪೌರಾಣಿಕ ನಾಟಕ ಪ್ರದರ್ಶನ ನಡೆಯಿತು.