Advertisement

“ರಂಗಭೂಮಿ ಬಲವರ್ಧಿಸಲು ಸಹಕರಿಸಿ’

09:27 PM Mar 28, 2019 | Sriram |

ಉಡುಪಿ: ಕಲಾವಿದನ ಕಲೆಯ ಹಿಂದಿರುವ ಸಾಧನೆಯಿಂದ ಕಲೆಯನ್ನು ಗುರುತಿಸಬಹುದು. ಇದರಲ್ಲಿ ಪರಿಪೂರ್ಣತೆ ಹೊಂದಲು ಅಪಾರ ಸಾಧನೆ ಮಾಡಬೇಕಾಗುತ್ತದೆ. ರಂಗಭೂಮಿಯನ್ನು ಆರ್ಥಿಕವಾಗಿ ಬಲವರ್ಧಿಸಲು ಸಹಕರಿಸಬೇಕು ಎಂದು ಹಿರಿಯ ರಂಗಭೂಮಿ ನಟ ಎನ್‌. ರಾಜಗೋಪಾಲ ಬಲ್ಲಾಳ್‌ ಹೇಳಿದರು.

Advertisement

ರಂಗಭೂಮಿ ಉಡುಪಿ ಮತ್ತು ಜೇಸಿಐ ಕಲ್ಯಾಣಪುರ ಇದರ ಸಹಭಾಗಿತ್ವದಲ್ಲಿ ಎಂಜಿಎಂ ಕಾಲೇಜು ಮತ್ತು ಕನ್ನಡ, ಸಂಸ್ಕೃತಿ ಇಲಾಖೆ ಬೆಂಗಳೂರು ಇದರ ಸಹಕಾರದೊಂದಿಗೆ ಕಾಲೇಜಿನ ರವೀಂದ್ರ ಮಂಟಪದಲ್ಲಿ ನಡೆದ “ವಿಶ್ವರಂಗಭೂಮಿ ದಿನಾಚರಣೆ’ಯಲ್ಲಿ ಸಮ್ಮಾನ ಸ್ವೀಕರಿಸಿ ಅವರು ಮಾತನಾಡಿದರು.

ಉಡುಪಿ ರಂಗಭೂಮಿಯ ಅಧ್ಯಕ್ಷ ಡಾ| ತಲ್ಲೂರು ಶಿವರಾಮ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.ಪೂರ್ಣಪ್ರಜ್ಞ ಸಂಧ್ಯಾ ಕಾಲೇಜಿನ ಪ್ರಾಂಶುಪಾಲೆ ಡಾ| ಸುಕನ್ಯಾ ಫೆರ್ನಾಂಡಿಸ್‌ ಮುಖ್ಯ ಅತಿಥಿಯಾಗಿ ಮಾತನಾಡಿ, ಆಧುನಿಕ ತಂತ್ರಜ್ಞಾನಗಳಿಂದ ರಂಗಭೂಮಿಗೆ ಸಮಸ್ಯೆಗಳು ಬಂದರೂ ಹಲವು ರೀತಿಯ ಪ್ರಯೋಜನಗಳಾಗಿವೆ. ಹೊಸ ತಾಂತ್ರಿಕ, ಮಾಧ್ಯಮದಿಂದ ರಂಗಭೂಮಿ ಹೊಸ ಸವಾಲುಗಳನ್ನು ಎದುರಿಸಬೇಕಿದ್ದು, ಇದಕ್ಕೆ ಪ್ರೇಕ್ಷಕರ ಸಹಕಾರ ಅಗತ್ಯ ಎಂದರು.

ರಂಗಚಟುವಟಿಕೆಗಳಲ್ಲಿ ತೊಡಗಿ
ವಿದ್ಯಾರ್ಥಿಗಳ ಸಂಖ್ಯೆ ರಂಗಭೂಮಿ ಚಟುವಟಿಕೆಯಲ್ಲಿ ಇಳಿಮುಖವಾಗುತ್ತಿದೆ. ಅತಿಯಾದ ಸಾಮಾಜಿಕ ಜಾಲತಾಣಗಳ ಬಳಕೆಯಿಂದ ಮಕ್ಕಳನ್ನು ದೂರವಿರಿಸಲು ರಂಗಭೂಮಿ ಚಟುವಟಿಕೆಗಳು ಸಹಕಾರಿ ಎಂದರು.

ಕಲ್ಯಾಣಪುರ ಜೇಸಿಐ ಅಧ್ಯಕ್ಷೆ ಆಶಾ ಅಲೆನ್‌ ವಾಜ್‌, ಲಾವಣ್ಯ ಬೈಂದೂರು ಇದರ ವ್ಯವಸ್ಥಾಪಕ ಗಣೇಶ್‌ ಕಾರಂತ್‌ ಮಾತನಾಡಿದರು.

Advertisement

ಈ ಸಂದರ್ಭದಲ್ಲಿ ನಾಟಕದಲ್ಲಿ ಅಭಿನಯಿಸಿದ ವಿದ್ಯಾರ್ಥಿಗಳು ಪ್ರಶಸ್ತಿ ಪತ್ರ ಹಾಗೂ ಕಲಾವಿದರನ್ನು ಅಭಿನಂದಿಸ ಲಾಯಿತು. ಕಾರ್ಯಕ್ರಮದಲ್ಲಿ ರಂಗಭೂಮಿಯ ಗೌರವಾಧ್ಯಕ್ಷ ಡಾ| ಎಚ್‌. ಶಾಂತಾರಾಮ್‌, ಎಂಜಿಎಂ ಕಾಲೇಜು ಪ್ರಾಂಶುಪಾಲ ವಿಜಯ್‌, ಉಪಾಧ್ಯಕ್ಷ ವಾಸುದೇವ ರಾವ್‌, ನಂದಕುಮಾರ್‌ ಮತ್ತಿತರರು ಉಪಸ್ಥಿತರಿದ್ದರು.ಕಾರ್ಯಕ್ರಮದ ಬಳಿಕ ಸರ್ವಂ ಬೆಂಗಳೂರು ಇವರಿಂದ ದಿವ್ಯ ಕಾರಂತ ರಚನೆ ಮತ್ತು ನಿರ್ದೇಶನದ “ಹೇ ಸಿರಿ’ ನಾಟಕ ಪ್ರದರ್ಶನಗೊಂಡಿತು.

Advertisement

Udayavani is now on Telegram. Click here to join our channel and stay updated with the latest news.

Next