Advertisement

ವರ್ಲ್ಡ್ ಸ್ಕೂಲ್‌ ಗೇಮ್ಸ್‌ : ಕೊಡಗಿನ ಉನ್ನತಿಗೆ ಕಂಚು

01:40 AM May 22, 2022 | Team Udayavani |

ಮಡಿಕೇರಿ: ಉದಯೋನ್ಮುಖ ಕ್ರೀಡಾ ತಾರೆ, ಕೊಡಗಿನ ಬೊಳ್ಳಂಡ ಉನ್ನತಿ ಅಯ್ಯಪ್ಪ ಫ್ರಾನ್ಸ್‌ನಲ್ಲಿ ನಡೆಯುತ್ತಿರುವ ವರ್ಲ್ಡ್ ಸ್ಕೂಲ್‌ ಗೇಮ್ಸ್‌ನಲ್ಲಿ ಭಾರತಕ್ಕೆ ಕಂಚಿನ ಪದಕ ಗೆದ್ದುಕೊಟ್ಟ ಸಾಧನೆ ಮಾಡಿದ್ದಾರೆ.

Advertisement

ಫ್ರಾನ್ಸ್‌ನ ನಾರ್ಮಂಡಿಯಲ್ಲಿ ನಡೆದ ಈ ಗೇಮ್ಸ್‌ನ 100 ಮೀಟರ್‌ ಹರ್ಡ್‌ಲ್ಸ್‌ನಲ್ಲಿ ಉನ್ನತಿ 13.73 ಸೆಕೆಂಡ್‌ನ‌ಲ್ಲಿ ಗುರಿ ತಲುಪಿ ಪದಕ ತಂದಿದ್ದಾರೆ.

ಈ ಹಿಂದೆ ವಿವಿಧ ರಾಷ್ಟ್ರೀಯ ಪಂದ್ಯಾವಳಿಗಳಲ್ಲಿ ಕೂಡ ಉನ್ನತಿ ಉತ್ತಮ ಸಾಧನೆ ತೋರಿದ್ದು, ಹಲವು ಪದಕಗಳನ್ನು ಗಳಿಸಿದ್ದಾರೆ. 2021 ರಲ್ಲಿ ನಡೆದ ರಾಷ್ಟ್ರೀಯ ಜೂನಿಯರ್‌ ಚಾಂಪಿಯನ್‌ ಶಿಪ್‌ನಲ್ಲಿ ಉನ್ನತಿ ದೇಶದ ಹೆಸರಾಂತ ಕ್ರೀಡಾ ತಾರೆ ಪಿ.ಟಿ.ಉಷಾ ಅವರ ದಾಖಲೆಯನ್ನು ಮುರಿದು (80 ಮೀಟರ್‌ ಹರ್ಡ್‌ಲ್ಸ್‌) ಹೆಸರು ಮಾಡಿದ್ದರು. ಇದೀಗ ಆಕೆಗೆ ಚೊಚ್ಚಲ ಅಂತಾರಾಷ್ಟ್ರೀಯ ಮಟ್ಟದ ಪದಕ ಲಭ್ಯವಾಗಿದೆ.

ಉನ್ನತಿ ಅವರು ಅಂತಾರಾಷ್ಟ್ರೀಯ ಆ್ಯತ್ಲೀಟ್‌ ಹಾಗೂ ತರಬೇತುದಾರ ಬೊಳ್ಳಂಡ ಅಯ್ಯಪ್ಪ ಹಾಗೂ ಒಲಿಂಪಿಯನ್‌ ಪ್ರಮೀಳಾ ಅಯ್ಯಪ್ಪ ದಂಪತಿಯ ಪುತ್ರಿಯಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next