ಚಾಮರಾಜನಗರ: ಪ್ರಸ್ತುತ ಕಾಲಘಟ್ಟದಲ್ಲಿ ಕೇಳುವ ಪರಂಪರೆ ನಶಿಸಿದೆ. ವಾಚಾಳಿತನ ಹೆಚ್ಚಾಗಿದೆ. ರೆಡಿಯೋ ಕನ್ನಡ ಭಾಷೆಯನ್ನುಕಲಿಸಿದರೆ ಟೀವಿ ಕನ್ನಡ ಭಾಷೆಯನ್ನು ಕೆಡಿಸುತ್ತಿದೆ ಎಂದು ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡಪ್ರಾಧ್ಯಾಪಕ, ನಾಟಕಕಾರ ಡಾ. ರಾಜಪ್ಪ ದಳವಾಯಿ ಬೇಸರ ವ್ಯಕ್ತಪಡಿಸಿದರು.
ನಗರದ ಜಿಲ್ಲಾ ಸರ್ಕಾರಿ ನೌಕರರ ಸಂಘದ ಸಭಾಂಗಣದಲ್ಲಿ ರಂಗ ವಾಹಿನಿ ಸಂಸ್ಥೆ ವಿಶ್ವ ರೇಡಿಯೋ ದಿನದ ಅಂಗವಾಗಿ ಆಯೋಜಿಸಿದ್ದ ಪ್ರತಿ ಗಂಧರ್ವ ನಾಟಕ ಓದು ಕಾರ್ಯಕ್ರಮವನ್ನು ರೆಡಿಯೋ ಕೇಳುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
ರಂಗ ಚಟುವಟಿಕೆಗಳು ಒಂದು ಕಡೆ ಕೇಂದ್ರೀಕೃತವಾಗಬಾರದು. ಹಾಗಾಗಿ ನನ್ನ ಪ್ರತಿಗಂಧರ್ವ ನಾಟಕವನ್ನು ರಾಜ್ಯದ 25 ಜಿಲ್ಲೆಗಳಲ್ಲಿರಂಗ ಪದರ್ಶನ ಮಾಡಲಿದ್ದೇವೆ. ಚಾ.ಗರ ಜಿಲ್ಲೆಯಎಲ್ಲ ಹಳ್ಳಿಗಳಲ್ಲಿ ಕಲಾವಿದರು ಇದ್ದಾರೆ. ಇಲ್ಲಿನ ಹಳ್ಳಿಗಳಲ್ಲಿ ಇಂದಿಗೂ ರಂಗಭೂಮಿ ಜೀವಂತವಾಗಿದೆ ಎಂದರು.
ಹಿರಿಯ ರಂಗಕರ್ಮಿ ಮಲ್ಲಿಕಾರ್ಜುನ ಮಹಾಮನೆ ಮಾತನಾಡಿ, ಪ್ರತಿ ಗಂಧರ್ವ ಒಂದುವ್ಯಕ್ತಿಯ ಜೀವನದ ಸುತ್ತ ಸುತ್ತುವ ನಾಟಕ. ಜೀವನ ಚರಿತ್ರೆ ನಾಟಕ ರೂಪ ಪಡೆದುಕೊಂಡು ಹೊಸ ಪರಂಪರೆಗೆ ನಾಂದಿ ಹಾಡಿದೆ ಎಂದರು.
ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ವೆಂಕಟರಮಣಸ್ವಾಮಿ ರಂಗ ಗೀತೆ ಹಾಡಿದರು. ಬಳಿಕ ಪ್ರತಿ ಗಂಧರ್ವ ನಾಟಕ ಓದಲಾಯಿತು.
ಹಿರಿಯ ರಂಗಕರ್ಮಿಕೆ. ವೆಂಕಟರಾಜು ಅಧ್ಯಕ್ಷತೆವಹಿಸಿದ್ದರು. ರಂಗವಾಹಿನಿ ಸಂಸ್ಥೆ ಅಧ್ಯಕ್ಷ ಸಿಎಂನರಸಿಂಹಮೂರ್ತಿ ನಾಟಕಕಾರ ಡಾ. ವಿವೇಕಾನಂದ, ರಂಗ ವಾಹಿನಿ ಸಂಚಾಲಕ ರೂಬಿನ್ ಸಂಜಯ್, ಎಂ. ಶಶಿಕುಮಾರ್, ಎಸ್ಪಿ ಬಾಲಸುಬ್ರಹ್ಮಣ್ಯಂ ಅಭಿಮಾನಿ ಬಳಗದ ಎಚ್. ಎಂ. ಶಿವಣ್ಣ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ನಿಂಗಶೆಟ್ಟಿ, ಗೊರವರ ಶಿವ ಮಲ್ಲೇಗೌಡ ರಾಮಸಮುದ್ರದ ನಾಟಕ ರಾಜು, ಆಪು ಮಹದೇವ ಮತ್ತಿತರರು ಉಪಸ್ಥಿತರಿದ್ದರು.