ಶನಿವಾರಸಂತೆ : ಇತಿಮಿತಿ ಜನಸಂಖ್ಯೆ ಪಾಲನೆಯ ಕ್ರಮವನ್ನು ಪ್ರತಿಯೊಬ್ಬರು ಜವಾಬ್ದಾರಿಯಾಗಿ ತೆಗೆದುಕೊಂಡರೆ ಜನಸಂಖ್ಯೆ ನ್ಪೋಟವನ್ನು ತಡೆಗಟ್ಟಲು ಸಾಧ್ಯವಾಗುತ್ತದೆ ಎಂದು ಆಲೂರುಸಿದ್ದಾಪುರ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ| ಸುಪರ್ಣಾ ಕೃಷ್ಣಾನಂದ್ ಹೇಳಿದರು.
ಅವರು ವಿಶ್ವ ಜನಸಂಖ್ಯೆ ದಿನಾಚರಣೆ ಅಂಗವಾಗಿ ಪ್ರಾಥಮಿಕ ಆರೋಗ್ಯ ಕೇಂದ್ರದ ವತಿಯಿಂದ ಹಮ್ಮಿಕೊಂಡಿದ್ದ ತಾಲೂಕು ಮಟ್ಟದ ವಿಶ್ವ ಜನಸಂಖ್ಯೆ ದಿನಾಚರಣೆ ಮತ್ತು ಮಾಹಿತಿ ಅರಿವು ಕಾರ್ಯಕ್ರಮದಲ್ಲಿ ಮಾತನಾಡಿದರು.
ವಿಶ್ವದಾದ್ಯಂತ 500 ಕೋಟಿ ಜನಸಂಖ್ಯೆ ಗಡಿದಾಟಿದ ಸಂದರ್ಭದಲ್ಲಿ ಜನಸಂಖ್ಯೆ ಸ್ಫೋಟದಿಂದ ಸಮಸ್ಯೆಯಾಗಿದ್ದ ಹಿನ್ನೆಲೆಯಲ್ಲಿ ವಿಶ್ವಸಂಸ್ಥೆ ಜುಲೈ11 ದಿನವನ್ನು ವಿಶ್ವ ಜನಸಂಖ್ಯೆ ದಿನವನ್ನಾಗಿ ಆಚರಿಸಲಾಗುತ್ತಿದ್ದು ಈ ಮೂಲಕ ಜನಸಂಖ್ಯೆ ನಿವಾರಣೆಗೆ ಪರಿಹಾರ ಕಂಡುಕೊಳ್ಳುವ ಸಲುವಾಗಿ ಜನಸಂಖ್ಯೆ ದಿನವನ್ನು ಆಚರಿಸಲಾಗುತ್ತಿದೆ ಎಂದು ಹೇಳಿದರು.
ಆಲೂರುಸಿದ್ದಾಪುರ ಸರಕಾರಿ ಪ್ರೌಢಶಾಲಾ ಸಹ ಶಿಕ್ಷಕ ಮಂಜೇಶ್ ಮಾತನಾಡಿ-ಜನಸಂಖ್ಯೆ ನ್ಪೋಟವನ್ನು ತಡೆಗಟ್ಟಲು ಪ್ರತಿಯೊಬ್ಬರೂ ಪ್ರಯತ್ನಿಸಬೇಕಾಗುತ್ತದೆ, ನಮ್ಮ ದೇಶದಲ್ಲಿ ಗಂಡು ವಂಶೋದ್ದಾರಕ ಎಂಬ ತಪ್ಪು ಕಲ್ಪನೆಯಿಂದ ಪ್ರತಿಯೊಂದು ಕುಟುಂಬದಲ್ಲಿ ಮಕ್ಕಳು ವೃದ್ಧಿªಯಾಗುತ್ತಿರುವ ಪರಿಣಾಮದಿಂದ ದೇಶದಲ್ಲಿ ಜನಸಂಖ್ಯೆ ಏರಿಕೆಯಾಗಲು ಕಾರಣವಾಗಿದೆ ಎಂದರು. ಪ್ರತಿಯೊಂದು ಕುಟುಂಬ ಹಿಂದಿನ ಕಾಲದಲ್ಲಿ ಕುಟುಂದ ಹಿರಿಯರು ರೂಢಿಸಿದ್ದ ಗಂಡು ಮಕ್ಕಳು ಮಾತ್ರ ವಂಶೋದ್ಧಾರಕರು ಎಂಬ ಮೂಢನಂಬಿಕೆಯಿಂದ ಹೊರಬಂದು ಗಂಡು-ಹೆಣ್ಣು ಮಗು ಎಂಬ ಭೇದಭಾವ ಇಲ್ಲದೆ 2 ಮಗುವನ್ನು ಮಾತ್ರ ಹೊಂದುವುದರ ಜೊತೆಯಲ್ಲಿ ಸಂಸಾರದಲ್ಲಿ ಗಂಡನೂ ಸಹ ಕಡ್ಡಾಯವಾಗಿ 2 ಮಗು ಆದ ನಂತರ ಶಸ್ತ್ರ ಚಿಕಿತ್ಸೆ ಮಾಡಿಸಿಕೊಳ್ಳಲು ಮುಂದೆ ಬಂದರೆ ಜನಸಂಖ್ಯೆ ಸಮಸ್ಯೆ ನಿವಾರಣೆಯಾಗಲು ಸಾಧ್ಯವಾಗುತ್ತದೆ ಎಂದರು.
ಆಲೂರುಸಿದ್ದಾಪುರ ಗ್ರಾ.ಪಂ.ಅಧ್ಯಕ್ಷೆ ವೀಣಾ ರಮೇಶ್ ಅವರು ಮಾತ ನಾಡಿದರು. ಈ ಸಂದರ್ಭದಲ್ಲಿ ತಾಲೂಕು ಹಿರಿಯ ಆರೋಗ್ಯ ಕಾರ್ಯ ಕರ್ತೆ ದಮಯಂತಿ, ಗ್ರಾ.ಪಂ.ಪಿಡಿಒ ಪೂರ್ಣಿಮಾ, ಕಿರಿಯ ಆರೋಗ್ಯ ಸಹಾಯಕಿ ನಮಿತ, ಲ್ಯಾಬ್‌ಟೆಕ್ನಿಶಿಯನ್ ರುದ್ರೇಶ್, ಕಿರಿಯ ಆರೋಗ್ಯ ಸಹಾಯಕಿಯರು ಉಪಸ್ಥಿತರಿದ್ದರು.