Advertisement

ಯೋಗದಿಂದ ವಿಶ್ವಶಾಂತಿ ಸ್ಥಾಪನೆ: ಪ್ರಕಾಶ್‌

02:11 PM Feb 02, 2018 | Team Udayavani |

ಕದ್ರಿ : ಆಧುನಿಕ ಜಗತ್ತಿನಲ್ಲಿ ಶಾರೀರಿಕ ಆರೋಗ್ಯ, ಸ್ವಾಸ್ಥ್ಯ ಸಮಾಜದ ನಿರ್ಮಾಣಕ್ಕೆ ಯೋಗ ಸಹಕಾರಿ. ಯೋಗದಿಂದ ವಿಶ್ವ ಶಾಂತಿ ಸ್ಥಾಪನೆ ಸಾಧ್ಯ ಎಂದು ದಿಗಂತ ಮುದ್ರಣ ಸಂಸ್ಥೆಯ ಮುಖ್ಯಸ್ಥ ಪಿ.ಎಸ್‌. ಪ್ರಕಾಶ್‌ ಹೇಳಿದರು.

Advertisement

ರಥ ಸಪ್ತಮಿಯ ಪ್ರಯುಕ್ತ ಲೋಕ ಕಲ್ಯಾಣಾರ್ಥವಾಗಿ ಶ್ರೀ ಪತಂಜಲಿ ಯೋಗ ಶಿಕ್ಷಣ ಪ್ರತಿಷ್ಠಾನದ ವತಿಯಿಂದ ಕದ್ರಿ ಶ್ರೀ ಮಂಜುನಾಥ ದೇವಸ್ಥಾನದ ಪ್ರಾಂಗಣದಲ್ಲಿ ನಡೆದ ಸಾಮೂಹಿಕ 108 ಸೂರ್ಯ ನಮಸ್ಕಾರ ಕಾರ್ಯಕ್ರಮದಲ್ಲಿ ಅವರು ಮುಖ್ಯ ಅತಿಥಿಯಾಗಿದ್ದರು. ಪ್ರಪಂಚದ ಹೆಚ್ಚಿನ ರಾಷ್ಟ್ರಗಳ ಜನರು ತಮ್ಮ ನಿತ್ಯ ಜೀವನದಲ್ಲಿ ಯೋಗವನ್ನು ಳವಡಿಸಿರುವುದರಿಂದ ವಿಶ್ವಕ್ಕೆ ಶಾಂತಿಯಾಗಲಿದೆ ಎಂದು ಅವರು ಹೇಳಿದರು.

ಆವಿಷ್ಕಾರ್‌ ಯೋಗದ ಮುಖ್ಯಸ್ಥ ಕುಶಾಲಪ್ಪ ಗೌಡ, ಹಿರಿಯ ಸಾಮಾಜಿಕ ಚಿಂತಕ ಸುಧಾಕರ ರಾವ್‌ ಪೇಜಾವರ, ಏಕನಾಥ ಬಾಳಿಗ ಉಪಸ್ಥಿತರಿದ್ದರು. ಚಂದ್ರಿಕಾ ಮಲ್ಯ ಸ್ವಾಗತಿಸಿ, ಸರಿತಾ ಕಾರಂತ್‌ ವಂದಿಸಿದರು. ಪ್ರತಿಭಾ ನಾಯಕ್‌ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next