ಲಂಡನ್: ಭಾರತದ ಪ್ಯಾರಾ ಹೈಜಂಪ್ ಸ್ಪರ್ಧಿಗಳಾದ ಶರತ್ ಕುಮಾರ್, ವರುಣ್ ಭಾಟಿ ವಿಶ್ವ ಪ್ಯಾರಾ ಅಥ್ಲೆಟಿಕ್ಸ್ ಕೂಟದಲ್ಲಿ ಕ್ರಮವಾಗಿ ಬೆಳ್ಳಿ ಮತ್ತು ಕಂಚಿನ ಪದಕ ಗೆದ್ದಿದ್ದಾರೆ. ಪುರುಷರ ಟಿ42 ವಿಭಾಗದಲ್ಲಿ ಶರತ್ 1.84 ಮೀ. ಎತ್ತರಕ್ಕೆ ಜಿಗಿದು ವೈಯಕ್ತಿಕ ಶ್ರೇಷ್ಠ ಸಾಧನೆಯೊಂದಿಗೆ ಬೆಳ್ಳಿ ಪದಕ ಗೆದ್ದರು. ಇದೇ ವಿಭಾಗದಲ್ಲಿ ವರುಣ್ ಭಾಟಿ 1.77 ಮೀ. ಎತ್ತರಕ್ಕೆ ಜಿಗಿದು ಕಂಚಿನ ಪದಕ ಗೆದ್ದರು.
ವರುಣ್ ಭಾಟಿ 2016ರಲ್ಲಿ ನಡೆದ ರಿಯೋ ಪ್ಯಾರಾಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಗೆದ್ದಿದ್ದನ್ನು ಇಲ್ಲಿ ಸ್ಮರಿಸಬಹುದು. ಶರತ್ ಕುಮಾರ್, ಐಪಿಸಿ ಅಂತಾರಾಷ್ಟ್ರೀಯ ಅಥ್ಲೆಟಿಕ್ಸ್ ಗ್ರ್ಯಾನ್ ಪ್ರೀ ಅಥ್ಲೆಟಿಕ್ಸ್ ಕೂಟದಲ್ಲಿ ಶರತ್ ಕುಮಾರ್ ಬೆಳ್ಳಿ ಪದಕ ಗೆದ್ದಿದ್ದರು. ವಿಜೇತರಿಗೆ ಸಾಮಾಜಿಕ
ಜಾಲತಾಣದಲ್ಲಿ ಭಾರತೀಯ ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹವಾಗ್ ಶುಭಾಶಯ ಕೋರಿದ್ದಾರೆ.
ಕೂಟಕ್ಕೆ ತೆರೆ: ಕಳೆದ 10 ದಿನಗಳಿಂದ ನಡೆಯುತ್ತಿದ್ದ ವಿಶ್ವ ಪ್ಯಾರಾ ಅಥ್ಲೆಟಿಕ್ಸ್ ಕೂಟಕ್ಕೆ ಭಾನುವಾರ ತೆರೆಬಿತ್ತು. ಚೀನಾ ಒಟ್ಟು 62 ಪದಕ ಗೆದ್ದು ಸಮಗ್ರ ಪ್ರಶಸ್ತಿ ಗೆದ್ದಿತು. ನಂತರದ ಸ್ಥಾನದಲ್ಲಿ ಅಮೆರಿಕ, ಬ್ರಿಟನ್ ಇದೆ. ಭಾರತ ಒಟ್ಟು 5 ಪದಕದೊಂದಿಗೆ 32ನೇ ಸ್ಥಾನ ಪಡೆಯಿತು.