Advertisement
ಭಾರತದ ಅಡ್ವರ್‌ಟೈಸಿಂಗ್ ಕ್ಷೇತ್ರದಲ್ಲಿ ಮುಖ್ಯವಾಗಿ ಮೂರು ವಿಭಾಗಗಳಿವೆ; ಗ್ರಾಹಕ ಸೇವೆ (ಕ್ಲೈಂಟ್ ಸರ್ವೀಸಿಂಗ್), ಕ್ರಿಯಾಶೀಲತೆ(ಕ್ರಿಯೇಟಿವ್) ಮತ್ತು ಯೋಜನೆ(ಸ್ಟ್ರಾಟೆಜಿ). ಗ್ರಾಹಕ ಸೇವಾ ವಿಭಾಗದಲ್ಲಿ ಕಾರ್ಯ ನಿರ್ವಹಿಸುವವರು ಕ್ರಿಯಾತ್ಮಕ ತಂಡ ಮತ್ತು ಗ್ರಾಹಕರ ಮಧ್ಯವರ್ತಿಗಳಾಗಿ ಕೆಲಸ ನಿರ್ವಹಿಸಬೇಕಾಗುತ್ತದೆ. ಜಾಹೀರಾತು ನೀಡಲ್ಪಡುತ್ತಿರುವ ವಸ್ತುವಿನ ವಿವರ ಮತ್ತು ಜಾಹೀರಾತುದಾರರು(ಗ್ರಾಹಕ) ಏನನ್ನು ಅಪೇಕ್ಷಿಸುತ್ತಿದ್ದಾರೆ ಎಂಬುದರ ಮಾಹಿತಿ ಮುಂತಾದ ವಿವರಗಳನ್ನು ಕ್ರಿಯೇಟಿವ್ ತಂಡಕ್ಕೆ ವಿವರಿಸುವುದು ಕ್ಲೈಂಟ್ ಸರ್ವೀಸಿಂಗ್‌ನವರ ಜವಾಬ್ದಾರಿ.
ಜಾಹೀರಾತು ಕ್ಷೇತ್ರದಲ್ಲಿ ಪ್ರವೇಶ ಪಡೆಯಲು ಇಚ್ಛಿಸುವವರು ಈ ಕೆಳಗಿನ ಕೋರ್ಸುಗಳನ್ನು ಆಯ್ದುಕೊಳ್ಳಬಹುದು.
– ಗ್ರಾಹಕ ಸೇವೆ: ಮಾರ್ಕೆಟಿಂಗ್‌ನಲ್ಲಿ ಎಂ.ಬಿ.ಎ. ಅಥವಾ ಪಿ.ಜಿ. ಡಿಪ್ಲೊಮಾ
– ಸ್ಟುಡಿಯೊ: ಕಮರ್ಷಿಯಲ್ ಆರ್ಟ್ಸ್ ಅಥವಾ ಫೈನ್ ಆರ್ಟ್ಸ್ನಲ್ಲಿ ಪರಿಣತಿ (ಬಿ.ಎಫ್.ಎ. ಅಥವಾ ಎಂ.ಎಫ್.ಎ)
– ಮೀಡಿಯಾ: ಜರ್ನಲಿಸಮ್, ಮಾಸ್ ಕಮ್ಯುನಿಕೇಷನ್ ಅಥವಾ ಎಂ.ಬಿ.ಎ.
– ಫೈನಾನ್ಸ್: ಸಿ.ಎ., ಐ.ಸಿ.ಡಬ್ಲೂ.ಎ, ಎಂ.ಬಿ.ಎ. (ಫೈನಾನ್ಸ್)
– ಫಿಲಮ್: ಆಡಿಯೊ ವಿಶುವಲ್‌ನಲ್ಲಿ ಪರಿಣತಿ
– ಪ್ರೊಡಕ್ಷನ್: ಪ್ರಿಂಟಿಂಗ್ ಮತ್ತು ಪ್ರಿ-ಪ್ರಸ್ ವಿಷಯಗಳಲ್ಲಿ ಪರಿಣತಿ
Related Articles
ನೀವು ಉತ್ಸಾಹಿಗಳೂ, ಸೃಜನಶೀಲರೂ, ಆಶಾವಾದಿಗಳೂ ಮತ್ತು ಮಲ್ಟಿ ಟಾಸ್ಕಿಂಗ್(ಹೆಚ್ಚು ಜವಾಬ್ದಾರಿಗಳನ್ನು ಏಕಕಾಲಕ್ಕೆ ನಿಭಾಯಿಸುವ ಕಲೆಗಾರಿಕೆ) ಸಾಮರ್ಥ್ಯವುಳ್ಳವರೂ ಆಗಿದ್ದರೆ ನಿಮಗಿದು ಉತ್ತಮ ಕ್ಷೇತ್ರ. ಜನರ ಬೇಡಿಕೆಗಳನ್ನು, ಜಾಹೀರಾತು ಉದ್ಯಮದ ಮಿಡಿತವನ್ನು ನೀವು ಅರಿಯಬಲ್ಲಿರಾದರೆ ನಿಮ್ಮ ಕ್ಲೈಂಟ್‌ಗಳಿಗೆ ನೀವು ಉತ್ತಮ ಸೇವೆ ನೀಡಬಲ್ಲಿರಿ. ಜಾಹೀರಾತು ಕೋರ್ಸುಗಳಿಗೆ ಸಂಬಂಧಿಸಿದ ಕೌಶಲ್ಯಗಳನ್ನು ಗಳಿಸಬಲ್ಲಿರಾದರೆ ನೀವು ಈ ಕ್ಷೇತ್ರದಲ್ಲಿ ಪ್ರವೇಶ ಗಿಟ್ಟಿಸಬಲ್ಲಿರಿ; ಸಮರ್ಥ ಸಂವಹನ ಶಕ್ತಿ, ಟೀಮ್ ವರ್ಕ್ ಮತ್ತು ಟೀಮ್ ಲೀಡರ್‌ಶಿಪ್, ಒತ್ತಡ ಮತ್ತು ಸವಾಲನ್ನು ಎದುರಿಸುವ ಶಕ್ತಿ, ಆತ್ಮವಿಶ್ವಾಸ, ಒಪ್ಪಿಸುವ ಜಾಣ್ಮೆ, ನಿರ್ವಹಣಾ ಕೌಶಲ ನಿಮ್ಮಲ್ಲಿದ್ದರೆ ನಿಮಗಿದು ಸೂಕ್ತವಾದ ಕ್ಷೇತ್ರ.
Advertisement
ಉದ್ಯೋಗಾವಕಾಶಜಾಹೀರಾತು ಕ್ಷೇತ್ರದಲ್ಲಿ ವಿಪುಲ ಅವಕಾಶಗಳಿವೆ. ಖಾಸಗಿ ಜಾಹೀರಾತು ಏಜೆನ್ಸಿಗಳು, ಸರ್ಕಾರಿ ಮತ್ತು ಖಾಸಗಿ ವಲಯದ ಜಾಹೀರಾತು ವಿಭಾಗಗಳು, ದಿನಪತ್ರಿಕೆ, ಜರ್ನಲ್‌ಗಳು, ನಿಯತಕಾಲಿಕೆಗಳು, ರೇಡಿಯೊ ಮತ್ತು ದೂರದರ್ಶನಗಳ ಕಮರ್ಷಿಯಲ್ ವಿಭಾಗಗಳು, ಮಾರ್ಕೆಟ್ ರಿಸರ್ಚ್ ಸಂಸ್ಥೆಗಳು – ಈ ಎಲ್ಲೆಡೆ ಉದ್ಯೋಗಾವಕಾಶಗಳು ಹೆಚ್ಚಿವೆ. ಜೊತೆಗೆ ಫ್ರೀಲಾನ್ಸರ್(ಸ್ವತಂತ್ರ) ಆಗಿಯೂ ಜಾಹೀರಾತು ಸೇವೆ ಸಲ್ಲಿಸಬಹುದು. ಅಡ್ವರ್‌ಟೈಸಿಂಗ್ ಮ್ಯಾನೇಜರ್, ಸೇಲ್ಸ್ ಮ್ಯಾನೇಜರ್, ಸಾರ್ವಜನಿಕ ಸಂಪರ್ಕಾಧಿಕಾರಿ, ಕ್ರಿಯೇಟಿವ್ ಡೈರೆಕ್ಟರ್, ಕಾಪಿ ರೈಟರ್ ಮತ್ತು ಮಾರ್ಕೆಟಿಂಗ್ ಕಮ್ಯುನಿಕೇಷನ್ಸ್ ಮ್ಯಾನೇಜರ್‌ಗಳಾಗಿ ಇಲ್ಲಿ ಹುದ್ದೆಗಳನ್ನು ಪಡೆಯಬಹುದು. ಇಂಟರ್‌ವ್ಯೂನಲ್ಲಿ ಸೆಲೆಕ್ಟ್ ಆಗೋದು ಹೇಗೆ?
ಅಡ್ವರ್‌ಟೈಸಿಂಗ್ ಮತ್ತು ಸಾರ್ವಜನಿಕ ಸಂಪರ್ಕಾಧಿಕಾರಿಯಾಗಿ ಬೆಳೆಯಬೇಕೆನ್ನುವವರು ಮೊದಲಿಗೆ ಯಾವುದಾದರೊಂದು ಪ್ರತಿಷ್ಠಿತ ಸಂಸ್ಥೆಯಲ್ಲಿ ಇಂಟರ್ನ್ಶಿಪ್ ಮಾಡಿರುವುದು ಉತ್ತಮ. ಈ ಕ್ಷೇತ್ರದಲ್ಲಿ ಕ್ರಿಯೇಟಿವಿಟಿ ಮತ್ತು ಹೊಸ ಆಲೋಚನೆಗಳಿಗೆ ಅಗಾಧ ಅವಕಾಶವಿದೆ. ಭಾರತದಲ್ಲಿ, ಒಂದು ಒಳ್ಳೆಯ ಸಂಸ್ಥೆಯಿಂದ ಶಿಕ್ಷಣ ಮತ್ತು ಉತ್ತಮ ಸಂವಹನ ಕೌಶಲ ಹೊಂದಿದ್ದರೆ ನಿಮಗಿಲ್ಲಿ ಆಯ್ಕೆಯ ಅವಕಾಶ ಹೆಚ್ಚು. ಒಳಿತಾಗಲಿ, ಗುಡ್ ಲಕ್! ರಘು ವಿ., ಪ್ರಾಂಶುಪಾಲರು