Advertisement

ವಿಶ್ವ ಮಲೇರಿಯಾ ದಿನಾಚರಣೆ: ಜನ ಜಾಗೃತಿ ಜಾಥಾ

01:09 PM Apr 27, 2022 | Team Udayavani |

ಕಲಬುರಗಿ: ನಗರದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ಆಸ್ಪತ್ರೆ ಸಂಯುಕ್ತಾಶ್ರಯದಲ್ಲಿ ಮಂಗಳವಾರ ವಿಶ್ವ ಮಲೇರಿಯಾ ದಿನ ಆಚರಿಸಲಾಯಿತು. ಜಿಲ್ಲಾ ಆಸ್ಪತ್ರೆ ಜಿಲ್ಲಾ ಶಸ್ತ್ರಜ್ಞರು ಹಾಗೂ ಅಧೀಕ್ಷಕ ಡಾ| ಅಂಬಾರಾಯ ರುದ್ರವಾಡಿ ಜನಜಾಗೃತಿ ಜಾಥಾಗೆ ಹಸಿರು ನಿಶಾನೆ ತೋರಿಸಿ ಚಾಲನೆ ನೀಡಿದರು.

Advertisement

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಈಗಾಗಲೇ ಕರ್ನಾಟಕ ರಾಜ್ಯ ಮಲೇರಿಯಾ ನಿರ್ಮೂಲನೆಯತ್ತ ಮಹತ್ತರ ಹೆಜ್ಜೆ ಇಡುತ್ತಿದ್ದು, ಆರೋಗ್ಯ ಇಲಾಖೆಯ ಕ್ಷೇತ್ರ ಸಿಬ್ಬಂದಿಗಳು ಇನ್ನೂ ಹೆಚ್ಚಿನ ಒತ್ತನ್ನು ನೀಡುವುದರ ಮೂಲಕ ಸಕ್ರಿಯ ಸಮೀಕ್ಷೆ ಮಾಡಿ ಪ್ರಾರಂಭಿಕ ಹಂತದಲ್ಲಿಯೇ ಮಲೇರಿಯಾ ರೋಗಿಗಳನ್ನು ಪತ್ತೆ ಹಚ್ಚುವುದರ ಮೂಲಕ ಮಲೇರಿಯಾ ರೋಗಿಗಳನ್ನು ಪತ್ತೆ ಹಚ್ಚಿ ಅವರಿಗೆ ತೀವ್ರ ಚಿಕಿತ್ಸೆ ನೀಡಿ ಜನರಲ್ಲಿಯ ಮಲೇರಿಯಾ ರೋಗಾಣುಗಳನ್ನು ಹೊಡೆದು ಹಾಕುವಲ್ಲಿ ಮಹತ್ತರ ಹೆಚ್ಚೆಯನ್ನು ಇಡಬೇಕೆಂದು ಆರೋಗ್ಯ ಇಲಾಖೆಯ ಸಿಬ್ಬಂದಿಗೆ ಕರೆ ನೀಡಿದರು.

ವಿಶ್ವ ಆರೋಗ್ಯ ಸಂಸ್ಥೆ ಪ್ರತಿ ವರ್ಷ ಒಂದು ಘೋಷವಾಕ್ಯದೊಂದಿಗೆ ಕೆಲಸ ಮಾಡುತ್ತೇವೆ ಹೀಗಾಗಿ ಈ ವರ್ಷದ ಘೋಷ ವಾಕ್ಯ ನೂತನ ವಿಧಾನ ಅಳವಡಿಸುವುದರ ಮೂಲಕ ಮಲೇರಿಯಾ ಕಡಿಮೆ ಮಾಡೋಣ ಹಾಗೂ ಜೀವ ಉಳಿಸೋಣ ಎಂಬದಾಗಿದೆ. ಸಾರ್ವಜನಿಕರು ಕೂಡಾ ಈ ನಿಟ್ಟಿನಲ್ಲಿ ಮಲೇರಿಯಾ ರೋಗವನ್ನು ನಿಯಂತ್ರಣ ಮತ್ತು ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಿ ಮಲೇರಿಯಾ ರೋಗ ಬರದಂತೆ ಮನೆಯ ಸುತ್ತ ಮುತ್ತ ನೀರು ನಿಲ್ಲದಂತೆ ನೋಡಿಕೊಳ್ಳುವುದು. ಸೊಳ್ಳೆ ಪರದೇ ಉಪಯೋಗಿಸುವುದು ಹಾಗೂ ಮನೆಯ ಒಳಗಡೆ ಬೇವಿನ ಸೊಪ್ಪಿನ ಹೊಗೆ ಹಾಕುವುದರ ಮೂಲಕ ಸೊಳ್ಳೆಗಳನ್ನು ನಿಯಂತ್ರಣ ಮಾಡಬಹುದಾಗಿದೆ ಎಂದು ವಿವರಣೆ ನೀಡಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಶರಣಬಸಪ್ಪ ಗಣಜಲಖೇಡ ಮಾತನಾಡಿ ವಿಶ್ವ ಮಲೇರಿಯಾ ಮೊಟ್ಟ ಮೊದಲು ಆಫ್ರಿಕಾ ಮಲೇರಿಯಾ ದಿನವನ್ನಾಗಿ ಆಚರಣೆ ಮಾಡುತ್ತಿದ್ದರು. ತದನಂತರ ವಿಶ್ವದ 44 ಮಲೇರಿಯಾ ಪೀಡಿತ ದೇಶಗಳೆಲ್ಲ ವಿಶ್ವ ಸಂಸ್ಥೆಯ ಸಭೆಯಲ್ಲಿ ಏಪ್ರಿಲ್‌ 25 ಈ ದಿನವನ್ನು ವಿಶ್ವ ಮಲೇರಿಯಾ ದಿನವನ್ನಾಗಿ ಆಚರಣೆ ಮಾಡಲು ನಿರ್ಧಾರ ಮಾಡಲಾಯಿತು. ಈ ದಿನಾಚರಣೆಯ ಮುಖ್ಯ ಉದ್ದೇಶ ಜನರಲ್ಲಿ ಮಲೇರಿಯಾ ರೋಗದ ಕುರಿತಂತೆ ಜನರಲ್ಲಿ ಜಾಗೃತಿ ಮೂಡಿಸಿ ಸಾರ್ವಜನಿಕರು ಕೂಡಾ ರೋಗವನ್ನು ಹತೋಟಿಗೆ ತರವಲ್ಲಿ ಅವರೂ ಪ್ರಮುಖ ಪಾತ್ರವಹಿಸುವಂತೆ ಪ್ರೇರೇಪಿಸುವುದಾಗಿದೆ ಎಂದರು.

ಕಾರ್ಯಕ್ರಮ ಅಧಿಕಾರಿಗಳಾದ ಡಾ| ಬಸವರಾಜ ಗುಳಗಿ ಮಾತನಾಡಿ ಕಳೆದ 5 ವರ್ಷಗಳಿಂದ ಜಿಲ್ಲೆಯಲ್ಲಿ ಮಲೇರಿಯಾ ಪ್ರಕಣಗಳು ಇಳಿಮುಖ ಹಂತದಲ್ಲಿದ್ದು, ಮುಂದೆಯೂ ಇನ್ನೂ ನಿಯಂತ್ರಣ ಮಾಡುವಲ್ಲಿ ಇಲಾಖೆಯ ಸಿಬ್ಬಂದಿಗಳು ಶ್ರಮ ವಹಿಸಬೇಕೆಂದು ಕರೆ ನೀಡಿದರು.

Advertisement

ಜಿಲ್ಲಾ ಕಾರ್ಯಕ್ರಮ ಅಧಿಕಾರಿಗಳಾದ ಡಾ| ರಾಜಕುಮಾರ, ಡಾ| ವಿವೇಕಾನಂದ ರೆಡ್ಡಿ, ಐಎಂಎ ಪ್ರತಿನಿಧಿಗಳಾದ ಡಾ| ಶಾಂತೇಶ ಜಿಲ್ಲಾ ಕೀಟಶಾಸ್ತ್ರಜ್ಞ ಚಾಮರಾಜ ದೊಡಮನಿ, ಜಿಲ್ಲಾ ಸಮಾಲೋಚಕ ಕಾರ್ಣಿಕ ಕೋರೆ, ಜಿಲ್ಲಾ ಮೇಲ್ವಿಚಾರಕ ಗಣೇಶ ಚಿನ್ನಾಕಾರ, ಸರಕಾರಿ ನೌಕರರ ಸಂಘದ ಕಾರ್ಯಾಧ್ಯಕ್ಷ ಚಂದ್ರಕಾಂತ ಏರಿ, ಶರಣು ಅರಳಿಮರದ, ಜಿಲ್ಲಾ ನೋಡಲ್‌ ಪ್ರಯೋಗಶಾಲಾ ತಂತ್ರಜ್ಞ ಲಕ್ಷ್ಮಣ ರಾಠೊಡ ಹಾಗೂ ನರ್ಸಿಂಗ್‌ ಶಾಲೆ ಪ್ರಾಂಶುಪಾಲರು ಹಾಗು ವಿಧ್ಯಾರ್ಥಿಗಳು, ಸಿಬ್ಬಂದಿ ಜಾಥಾದಲ್ಲಿ ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next