Advertisement
ಸಂಗೀತ ನಿರ್ದೇಶಕ ರವಿ ಬಸ್ರೂರು ಮಾತನಾಡಿ, ಕುಂದಾಪ್ರ ಕನ್ನಡ ಹಬ್ಬದಲ್ಲಿ ಹಲವುರು ಶ್ರಮಿಸುತ್ತಿದ್ದಾರೆ. ಈ ಪ್ರಯತ್ನಕ್ಕೆ ನನ್ನ ಬೆಂಬಲ ಇರಲಿದೆ. ಕುಂದಾಪುರ ಸಂಸ್ಕೃತಿಗೆ ಸಂಬಂಧಿಸಿದ ಹೊಸ ಪ್ರಯೋಗ ಮಾಡುತ್ತಿದ್ದು, ಅದನ್ನು ಈ ಬಾರಿಯ ಕುಂದಾಪುರ ಹಬ್ಬದಲ್ಲಿ ಲೋಕಾರ್ಪಣೆ ಮಾಡಲಾಗುತ್ತದೆ ಎಂದರು.ಚಿತ್ರ ಸಾಹಿತಿ ಪ್ರಮೋದ್ ಮರವಂತೆ, ಸತೀಶ್ ಶೆಟ್ಟಿ, ಉಪೇಂದ್ರ ಶೆಟ್ಟಿ, ಕುಂದಾಪ್ರ ಕನ್ನಡ ಪ್ರತಿಷ್ಠಾನದ ದೀಪಕ್ ಶೆಟ್ಟಿ, ರಾಘವೇಂದ್ರ ಕಾಂಚನ್, ನರಸಿಂಹ ಬೀಜಾಡಿ, ಅಜಿತ್ ಶೆಟ್ಟಿ ಉಳೂ¤ರು, ಉದಯ್ ಹೆಗ್ಡೆ ಉಪಸ್ಥಿತರಿದ್ದರು.
ಆ. 17ರಂದು ನಗರದ ವಿವಿಧ ಬಡಾವಣೆಗಳಿಂದ “ಕುಂದಾಪುರ ಕನ್ನಡ ಹಬ್ಬದ’ ಪುರಪ್ರವೇಶದ ಮೆರವಣಿಗೆ ಹೊರಟು ಅರಮನೆ ಮೈದಾನ ತಲುಪಲಿದೆ. ಮಧ್ಯಾಹ್ನ ಉದ್ಘಾಟನ ಕಾರ್ಯಕ್ರಮ ನಡೆಯಲಿದ್ದು, ವಿಶೇಷವಾಗಿ ಚಿತ್ರತಾರೆಯರು, ಗಣ್ಯರು ಉಪಸ್ಥಿತರಿರಲಿದ್ದಾರೆ. ಜೋಡಾಟ ಯಕ್ಷಗಾನ, ಹಂದಾಡಿ ಮತ್ತು ತಂಡದ ಹಂದಾಡ್ತಾ ನೆಗ್ಯಾಡಿಯ ವಿಭಿನ್ನ ನಗೆನಾಟಕ, ಕುಂದಾಪುರದ ಗ್ರಾಮೀಣ ಕ್ರೀಡೆಗಳನ್ನು ಒಳಗೊಂಡ ಬಯಲಾಟ, ರಥೋತ್ಸವ ಕಾರ್ಯಕ್ರಮ ನಡೆಯಲಿದೆ. ಕರಾವಳಿ ಖಾದ್ಯ ಮೇಳ
ಆಫ್ರಿಕಾದ ಜಂಬೆ-ಕುಂದಾಪುರದ ಚಂಡೆಯ ಜುಗಲ್ಬಂದಿ, ಹಗ್ಗ ಜಗ್ಗಾಟ ಸ್ಪರ್ಧೆ,ಯುವಕ- ಯುವತಿಯರಿಗಾಗಿ ಕುಂದಾಪುರ ಕನ್ನಡ ಡಿಜೆ, ಕುಂದಗೀತೆಗಳ ಡ್ಯಾನ್ಸ್ ಕುಂದಾಪುರ ಡ್ಯಾನ್ಸ್, ಕುಂದಾಪುರ ಕನ್ನಡ ಚಿತ್ರ ಪ್ರದರ್ಶನ, ಕುಂದಾಪುರ ನೆಲಮೂಲದ ಸಿನಿ ತಾರಾ ಮೆರಗು, ಕಡಲೂರಿನ ವಸ್ತು, ಒಡವೆ, ವಸ್ತ್ರ ಮೊದಲಾದವುಗಳ ಪ್ರದರ್ಶನ, ಮಾರಾಟ, ಕರಾವಳಿ ಖಾದ್ಯ ಮೇಳದ ವಿಶೇಷತೆ ಇರಲಿದೆ.