Advertisement

ಇಂದು ವಿಶ್ವ ಹೃದಯ ದಿನ: ಲಾಕ್‌ಡೌನ್‌ ಅಲ್ಪವಿರಾಮ; ಹೃದಯ ಆರಾಮ

01:09 AM Sep 29, 2020 | mahesh |

ಬೆಂಗಳೂರು: ವೇಗವಾಗಿ ಓಡುತ್ತಿದ್ದ ಜೀವನದಲ್ಲಿ ಆರು ತಿಂಗಳ ಲಾಕ್‌ಡೌನ್‌ ಎಂಬ ಅಲ್ಪವಿರಾಮವು ಹೃದಯ ಸಂಬಂಧಿ ಕಾಯಿಲೆಗಳಿಗೆ ತಾತ್ಕಾಲಿಕ ವಿರಾಮ ನೀಡಿದೆ! ಚಿಕಿತ್ಸೆ ಪಡೆಯು ತ್ತಿದ್ದವರಲ್ಲೂ ಉತ್ತಮ ಚೇತರಿಕೆ ಕಂಡು ಬಂದಿದೆ.

Advertisement

ಲಾಕ್‌ಡೌನ್‌ನ ನಕಾರಾತ್ಮಕ ಪರಿ ಣಾಮಗಳ ನಡುವೆ ಜನರ ಜೀವನ ಶೈಲಿಯಲ್ಲಿ ಸಕಾರಾತ್ಮಕ ಬದಲಾವಣೆ ಯಾಗಿದ್ದು, “ಒತ್ತಡದ ಜೀವನ’ಕ್ಕೆ ಬ್ರೇಕ್‌ ಬಿದ್ದಿತ್ತು. ಇದರಿಂದ ರಕ್ತದೊತ್ತಡ ಮತ್ತು ಮಧುಮೇಹಗಳು ಹತೋಟಿಗೆ ಬಂದಿವೆ. ಈ ಮೂಲಕ ಹೃದ್ರೋಗ ಚಿಕಿತ್ಸೆಗಳಿಗೆ ಆಸ್ಪತ್ರೆಗೆ ಬರುವವರ ಸಂಖ್ಯೆ ಶೇ. 40 ಕಡಿಮೆಯಾಗಿದೆ. ಅಲ್ಲದೆ ಈಗಾಗಲೇ ಹೃದ್ರೋಗಕ್ಕೆ ಚಿಕಿತ್ಸೆ ಪಡೆಯುತ್ತಿದ್ದವರ ಪೈಕಿ ಶೇ.70 ಮಂದಿಯಲ್ಲಿ ಹಿಂದಿಗಿಂತ ಈಗ ಹೃದಯದ ಆರೋಗ್ಯ ಉತ್ತಮವಾಗಿದೆ ಎನ್ನುತ್ತಾರೆ ತಜ್ಞ ವೈದ್ಯರು.

ಜೀವನ ಶೈಲಿ ಬದಲಾವಣೆ!
ಲಾಕ್‌ಡೌನ್‌ ಸಮಯ ಬಹುತೇಕರು ಮನೆಯಲ್ಲಿಯೇ ಕಾಲ ಕಳೆದಿದ್ದಾರೆ. ಜನರ ಓಡಾಟ ಕಡಿಮೆ ಇತ್ತು. ಇದರಿಂದ ಕಚೇರಿ ಒತ್ತಡ, ಟ್ರಾಫಿಕ್‌, ವಾಯುಮಾಲಿನ್ಯದಿಂದ ದೂರ ಉಳಿದಂತಾಗಿದೆ. ಕುಟುಂಬಸ್ಥ ರೊಂದಿಗೆ ಸಂತೋಷವಾಗಿ ದಿನಕಳೆದಿ ದ್ದಾರೆ. ಕೊರೊನಾ ಭಯದಿಂದ ಆರೋಗ್ಯ ಕರ ಆಹಾರ ಸೇವಿಸಿದ್ದಾರೆ. ಇದರಿಂದ ಹೃದಯ ಆರೋಗ್ಯವಾಗಿದೆ ಎನ್ನುತ್ತಾರೆ ಹೃದ್ರೋಗ ತಜ್ಞ ಡಾ| ಕೆ.ವಿ. ಶ್ರೀಕಾಂತ್‌.

ಜಯದೇವ ಆಸ್ಪತ್ರೆಗೆ ಬರು ವವರ ಸಂಖ್ಯೆ ಶೇ.40ರಷ್ಟು ಕಡಿಮೆ ಯಾಗಿದೆ. ಇದಕ್ಕೆ ಲಾಕ್‌ಡೌನ್‌, ಸಂಚಾರ ವ್ಯತ್ಯಯ ಮತ್ತು ಜನರಲ್ಲಿ ಆರೋಗ್ಯ ಕಾಳಜಿ ಹೆಚ್ಚಾ ಗಿರು ವುದು ಪ್ರಮುಖ ಕಾರಣ  ಗಳಾ ಗಿರ ಬಹುದು. ಲಾಕ್‌ಡೌನ್‌ ವೇಳೆ ಜನರು ಒತ್ತಡದ ಜೀವನ ಶೈಲಿ ಯಿಂದ ಹೊರಬಂದಿದ್ದಾರೆ.
– ಡಾ| ಸಿ.ಎನ್‌. ಮಂಜುನಾಥ್‌, ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನ ಸಂಸ್ಥೆಯ ನಿರ್ದೇಶಕರು

ಜಗತ್ತಿನಾದ್ಯಂತ ಜನರ ಸಾವಿನ ಕಾರಣದಲ್ಲಿ ಹೃದ್ರೋಗಕ್ಕೆ ಮೊದಲ ಸ್ಥಾನ.
1.79 ಕೋಟಿ ಪ್ರತೀ ವರ್ಷ ಜಗತ್ತಿನಾದ್ಯಂತ ಹೃದ್ರೋಗದಿಂದ ಸಾವು.
110 ಕೋಟಿ ವಯಸ್ಕರಲ್ಲಿ ರಕ್ತದೊತ್ತಡ ಸಮಸ್ಯೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next