Advertisement

ವಿಶ್ವ ಆರೋಗ್ಯ ದಿನ: ಜಗತ್ತಿನ ಎಲ್ಲ ಜನರಿಗೆ ಸಮಾನವಾದ ಆರೋಗ್ಯ ಸೇವೆ ಒದಗಿಸುವುದು ಆದ್ಯತೆ

03:20 PM Apr 07, 2020 | mahesh |

ಆರೋಗ್ಯವೇ ಭಾಗ್ಯ ಎನ್ನುವ ಮಾತೊಂದಿದೆ. ಆರೋಗ್ಯವಿದ್ದರೆ ಮಾತ್ರ ಮನುಷ್ಯ ನೆಮ್ಮದಿಯಿಂದ ಬದುಕಲು ಸಾಧ್ಯ. ಅದೊಂದನ್ನು ಬಿಟ್ಟು ಉಳಿದೆಲ್ಲ ಇದ್ದರೂ ಮನುಷನ್ಯನಿಗೆ ಅವುಗಳನ್ನು ಅನುಭವಿಸಲು ಸಾಧ್ಯವೇ ಆಗುವುದಿಲ್ಲ. ಹಾಗಾಗಿ ಯಾವುದೇ ವ್ಯಕ್ತಿ ಆಸ್ತಿ, ಐಶ್ವರ್ಯ, ಪದವಿ, ಸ್ಥಾನಮಾನ ಈ ಎಲ್ಲದಕ್ಕಿಂತ ಮಾನಸಿಕ ಹಾಗೂ ದೈಹಿಕ ಆರೋಗ್ಯಕ್ಕೆ ಮೊದಲ ಪ್ರಾಶಸ್ತ್ಯ ನೀಡುತ್ತಾನೆ.

Advertisement

ವಿಶ್ವಾದ್ಯಂತ ಸಾರ್ವತ್ರಿಕವಾಗಿ ಆರೋಗ್ಯದ ಬಗ್ಗೆ ಕಾಳಜಿ ಮೂಡಿಸುವ ಸದುದ್ಧೇಶದಿಂದ 1950 ರಿಂದ ಇಚೇಗೆ ಪ್ರತಿ ವರ್ಷವೂ ವಿಶ್ವ ಆರೋಗ್ಯ ದಿನವನ್ನು ಆಚರಿಸಿಕೊಂಡು ಬರಲಾಗುತ್ತಿದೆ. 1948ರಲ್ಲಿ ಜಿನೆವಾದಲ್ಲಿ ನಡೆದ ವಿಶ್ವ ಆರೋಗ್ಯ ಶೃಂಗ ಸಭೆಯಲ್ಲಿ ಹಲವಾರು ದೇಶಗಳ ಪ್ರತಿನಿಧಿಗಳು ಸಮಾಲೋಚಿಸಿ ವರ್ಷಕ್ಕೊಮ್ಮೆ ವಿಶ್ವ ಆರೋಗ್ಯ ದಿನವನ್ನು ಆಚರಿಸು ಬಗ್ಗೆ ತೀರ್ಮಾನ ತೆಗೆದುಕೊಳ್ಳಲಾಯಿತು. ಅದರಂತೆ 1950 ಎಪ್ರೀಲ್ 7ರಂದು ಮೊಟ್ಟ ಮೊದಲಬಾರಿಗೆ ವಿಶ್ವ ಆರೋಗ್ಯ ದಿನವನ್ನು ಆಚರಿಸಲಾಯಿತು.

ಈ ಬಾರಿಯ ಥೀಮ್ ಏನು
ವಿಶ್ವ ಆರೋಗ್ಯ ದಿನವನ್ನು ಆಚರಿಸಲು ಪ್ರಾರಂಭಿಸಿದನಿಂದ ಪ್ರತಿ ವರ್ಷವೂ ಒಂದು ಥೀಮ್ ಅಂದರೆ ಒಂದು ವಿಷಯವನ್ನು ಪ್ರಮುಖವಾಗಿ ಇಟ್ಟುಕೊಳ್ಳಲಾಗುತ್ತದೆ. ಆ ದಿನದಂದು ಆ ವಿಷಯದ ಬಗ್ಗೆ ವಿಶೇಷವಾದ ಸಮಾಲೋಚನೆ, ಜಾಗೃತಿ ಕಾರ್ಯಕ್ರಮ, ವಿವಿಧ ಚಟುವಟಿಕೆಗಳನ್ನು ಏರ್ಪಡಿಸಲಾಗುತ್ತದೆ ಮತ್ತು ನಿರ್ದಿಷ್ಟ ರೋಗದ ಕುರಿತು ಹೆಚ್ಚಿನ ಹಾಗೂ ವಿಶೇಷ ಜಾಗೃತಿ ಮೂಡಿಸಲಾಗುತ್ತದೆ. “ಆರ್ಥಿಕ ಸಂಕಷ್ಟವನ್ನು ನಿರಿಕ್ಷಿಸದೇ ಸಾರ್ವಜನಿಕರಿಗೆ ಆರೋಗ್ಯ ಸೇವೆಗಳಿಗೆ ಪ್ರವೇಶ ಒದಗಿಸುವುದು.” ಈ ವರ್ಷದ ವಿಷಯವಾಗಿದೆ ಇದರ ಪ್ರಕಾರ ಇಲ್ಲಿ ಜನರು ಯಾರು, ಯಾವ ಪ್ರದೇಶ ಎಂಬಿತ್ಯಾದಿ ಭೇದ ತೋರದೇ ಜಗತ್ತಿನ ಎಲ್ಲ ಜನರಿಗೆ ಸಮಾನವಾದ ಆರೋಗ್ಯ ಸೇವೆ ಒದಗಿಸುವುದು ಆದ್ಯತೆಯಾಗಿದೆ.

ಆರೋಗ್ಯ ದಿನವನ್ನು ಏಕೆ ಆಚರಿಸಬೇಕು
ಕೆಲವು ಸರಕಾರೇತ ಸಂಸ್ಥೆ (ಎನ್‌ಜಿಒ)ಗಳು ಸೇರಿಕೊಂಡು ಈ ಕಾರ್ಯಕ್ರಮದಲ್ಲಿ ಸಮಾಲೋಚನೆ ನಡೆಸುತ್ತವೆ. ಜನರಿಗೆ ತಮ್ಮ ದಿನನಿತ್ಯದ ಜೀವನ ಶೈಲಿಯಲ್ಲಿ ಆರೋಗ್ಯದ ಪಾತ್ರವೇನು, ಕಾಲ ಕಾಲಕ್ಕೆ ತೆಗೆದುಕೊಳ್ಳಬೇಕಾದ ಔಷಧ, ಪಾಲಿಸಬೇಕಾದ ನೈರ್ಮಲ್ಯ, ಪರಿಸರದ ಸ್ವಚ್ಛತೆ, ನೀರಿನ ದುಂದು ವೆಚ್ಚ ನಿಲ್ಲಿಸುವುದು ಹೀಗೆ ಮುಂತಾದ ಗಂಭೀರ ವಿಷಯಗಳ ಕುರಿತು ಜನರಲ್ಲಿ ಕಾಳಜಿ ಮೂಡಿಸುವುದು ಮತ್ತು ಮಾಹಿತಿ ಒದಗಿಸಲಾಗುತ್ತದೆ. ಹೀಗಾಗಿ ಈ ದಿನವನ್ನ ನಾವೆಲ್ಲರೂ ಅರ್ಥಪೂರ್ಣವಾಗಿ ಆಚರಿಸಬೇಕಾದ ಅಗತ್ಯವಿದೆ.

ವಿಶ್ವದ ಅಗ್ರ 5 ಆರೋಗ್ಯವಂತ ರಾಷ್ಟ್ರಗಳು
ಬ್ಲೂಮ್ ಬರ್ಗ್ ಜಾಗತಿಕ ಆರೋಗ್ಯ ಸೂಚ್ಯಂಕದ ವರದಿಯೊಂದರ ಪ್ರಕಾರ ಜಾಗಾತಿಕವಾಗಿ ಆರೋಗ್ಯವಂತ ರಾಷ್ಟ್ರಗಳ ಪಟ್ಟಿ ತಯಾರಿಸುತ್ತದೆ. ಆಯಾ ದೇಶದ ವಾಯು ಮಾಲಿನ್ಯದ ಪ್ರಮಾಣ, ಗುಣಮಟ್ಟದ ಆರೋಗ್ಯ ಕೇಂದ್ರಗಳು, ಕಡಿಮೆ ಮಾಲಿನ್ಯ, ಶುದ್ಧ ಮತ್ತು ಗುಣಮಟ್ಟದ ಕುಡಿಯುವ ನೀರು, ಮುಂತಾದ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ವಿವಿಧ ದೇಶಗಳ ಆರೋಗ್ಯದ ಶ್ರೇಯಾಂಕವನ್ನು ಸಿದ್ಧಪಡಿಸುತ್ತದೆ. ಅವುಗಳ ಪಟ್ಟಿ ಈ ಕೆಳಗಿನಂತಿದೆ.

Advertisement

1. ಸ್ಪೇನ್ (92.75)
2. ಇಟಲಿ (91.59)
3. ಐಸ್‌ಲ್ಯಾಂಡ್ (91.44)
4. ಜಪಾನ್ (91.28)
೫. ಸ್ವಿಜರ್‌ಲ್ಯಾಂಡ್ (90.93),
ಭಾರತ 120ನೇ ಸ್ಥಾನದಲ್ಲಿದೆ.

ಅತ್ಯುತ್ತಮ ಹೆಲ್ತ್ ಕೇರ್ ಹೊಂದಿರುವ ರಾಷ್ಟ್ರಗಳು.
1. ಕೆನಡಾ
2. ಕತಾರ್
3. ಫ್ರಾನ್ಸ್
4. ನಾರ್ವೆ
5. ನ್ಯೂಜಿಲೆಂಡ್
6. ಜರ್ಮನಿ

ಭಾರತದ ಜನರ ಆರೋಗ್ಯ ಪರಿಸ್ಥಿತಿ ಹೇಗಿದೆ
· ಸಂಸ್ಥೆಯೊಅದರ ಅಂದಾಜಿನ ಪ್ರಕಾರ ದೇಶದಲ್ಲಿ ಜನರ ಸರಾಸರಿ ಜೀವಿತಾವಧಿ.
ಮಹಿಳೆ –7೦, ಪುರುಷ 67.

· 2018ರ ವರದಿಯ ಪ್ರಕಾರ ದೇಶದಲ್ಲಿ 5 ವರ್ಷದ ಒಳಗಿನ ಮಕ್ಕಳಲ್ಲಿ 1000ಕ್ಕೆ 37 ಮಕ್ಕಳು ಸಾವನ್ನಪ್ಪುತ್ತಾರೆ.

· ಜನರ ಆರೋಗ್ಯ ಪ್ರಮಾಣದಲ್ಲಿ ಜಾಗತಿಕವಾಗಿ ಭಾರತ 125ನೇ ಸ್ಥಾನದಲ್ಲಿದೆ.

· ಶಿಶು ಮರಣದರದಲ್ಲಿ ದೇಶ 113ನೇ ಸ್ಥಾನ ಹೊಂದಿದೆ.


· ಭಾರತ ವಾರ್ಷಿಕವಾಗಿ ತನ್ನ ಜೀಡಿಪಿಯಲ್ಲಿ ಶೇ 3.65ರಷ್ಟ ಪ್ರಮಾಣವನ್ನು ಹೆಲ್ತ್ ಕೇರ್ ಗೆ ವ್ಯಯಿಸುತ್ತದೆ.


· ದೇಶಾದ್ಯಂತ ಪ್ರತಿ 10,000 ಸಾವಿರ ಜನಸಂಖ್ಯೆಗೆ ಕೇವಲ 7 ಜನ ವೈದ್ಯರು ಸೇವೆ ಸಲ್ಲಿಸುತ್ತಿದ್ದಾರೆ. ಇಟಲಿಯಲ್ಲಿ 4೦ ಜನ ವೈದ್ಯರು ಸೇವೆ ಸಲ್ಲಿಸುತ್ತಾರೆ.


· 2018ರ ವರದಿಯೊಂದರ ಪ್ರಕಾರ ದೇಶದಲ್ಲಿ ಸುಮಾರು 28,899 ಆಸ್ಪತ್ರೆಗಳು ಮಾತ್ರ ಇವೆ.

– ಶಿವಾನಂದ H.

Advertisement

Udayavani is now on Telegram. Click here to join our channel and stay updated with the latest news.

Next