ನವದೆಹಲಿ : ವಿಶ್ವಸಂಸ್ಥೆಯ ಸುಸ್ಥಿರ ಅಭಿವೃದ್ಧಿ ಪರಿಹಾರಗಳ ಜಾಲ, ವಿಶ್ವ ಹ್ಯಾಪಿನೆಸ್ ವರದಿಯನ್ನು ಬಿಡುಗಡೆ ಮಾಡಿದ್ದು, ಫಿನ್ ಲ್ಯಾಂಡ್ ಮೊದಲ ಸ್ಥಾನವನ್ನು ಪಡೆದಿದೆ. ಈ ವರದಿಯಲ್ಲಿ ಒಟ್ಟು 149 ದೇಶಗಳು ಇದ್ದು, ಭಾರತವು 139ನೇ ಸ್ಥಾನದಲ್ಲಿದೆ.
ಕಳೆದ ವರ್ಷಕ್ಕೆ ಹೋಲಿಸಿದ್ರೆ ಭಾರತವು ಒಂದು ಸ್ಥಾನ ಮೇಲಕ್ಕೆ ಜಿಗಿದಿದೆ. ಸದ್ಯ ಬಿಡುಗಡೆಯಾಗಿರುವ ಪಟ್ಟಿಯಲ್ಲಿ ಮೊದಲ 9 ಸ್ಥಾನಗಳನ್ನು ಯುರೋಪ್ ಖಂಡದ ದೇಶಗಳೇ ಪಡೆದುಕೊಂಡಿವೆ. ಡೆನ್ಮಾರ್ಕ್, ಸ್ವಿಟ್ಜರ್ಲ್ಯಾಂಡ್, ಐಸ್ ಲ್ಯಾಂಡ್, ನೆದರ್ ಲ್ಯಾಂಡ್, ನಾರ್ವೆ, ಸ್ವೀಡನ್, ಲುಕ್ಸಂಬರ್ಗ್, ನ್ಯೂಜಿಲ್ಯಾಂಡ್, ಆಷ್ಟ್ರೇಲಿಯಾ ಮೊದಲ ಸಾಲಿನಲ್ಲಿವೆ.
ವಿಶ್ವ ಹ್ಯಾಪಿನೆಸ್ ವರದಿಯನ್ನು ಘೋಷಣೆ ಮಾಡಬೇಕಾದರೆ ಕೆಲವು ಮಾನದಂಡಗಳ ಮಿತಿಯಲ್ಲಿ ವರದಿಯನ್ನು ಸಿದ್ಧ ಮಾಡಲಾಗಿದೆ. ಈ ಹಿಂದಿನ ವರ್ಷಗಳಲ್ಲಿ ಜಿಡಿಪಿ, ಸಮಾಜಿಕ ಸಹಕಾರ, ವೈಯಕ್ತಿಕ ಸ್ವಾತಂತ್ರ್ಯ ಮತ್ತು ಭ್ರಷ್ಟಾಚಾರದ ಮಟ್ಟವನ್ನು ಪರಿಗಣಿಸಿ ವರದಿಯನ್ನು ಮಾಡಲಾಗುತ್ತಿತ್ತು. ಆದ್ರೆ ಈ ವರ್ಷ ಕೊರೊನಾ ಇದ್ದಿದ್ದರಿಂದ ಇವುಗಳಲ್ಲಿ ಒಂದಷ್ಟು ಮಾರ್ಪಾಡುಗಳನ್ನು ಮಾಡಿಕೊಳ್ಳಲಾಗಿದೆ.
“ಕೋವಿಡ್ 19 ನಮ್ಮ, ಜಗತ್ತು ಎದುರಿಸುತ್ತಿರುವ ಸವಾಲು ಏನು, ಈ ಸಂದರ್ಭದಲ್ಲಿ ಜನರ ಸಹಕಾರ ಮುಖ್ಯ, ಹಾಗು ಎಲ್ಲಾ ದೇಶಗಳು ಈ ಸಾಂಕ್ರಾಮಿಕವನ್ನು ಎದುರಿಸುವಲ್ಲಿ ಹೇಗೆ ಸಹಕಾರ ಮಾಡಿದವು, ಇದರಿಂದ ಏನೆಲ್ಲ ತೊಂದರೆ ಆಯ್ತು ಎಂಬುದರ ಬಗ್ಗೆ ಕೋವಿಡ್ ಕಲಿಸಿದೆ ಎಂದು ಲೇಖಕ ಜೆಫ್ರಿ ಸ್ಯಾಚ್ಸ್ ಹೇಳಿದ್ದಾರೆ. ವಿಶ್ವ ಹ್ಯಾಪಿನೆಸ್ ವರದಿ 2021 ನಮಗೆ ಕೇವಲ ಸಂಪತ್ತಿನ ಜೊತೆಗೆ ಯೋಗಕ್ಷೇಮವನ್ನು ಕಾಪಾಡಿಕೊಳ್ಳಬೇಕು ಎಂಬುದನ್ನೂ ಕಲಿಸಿದೆ ಎಂದರು.
ಬಿಡುಗಡೆಯಾಗಿರುವ ವರದಿ ಪ್ರಕಾರ ಅಫ್ಘಾನಿಸ್ಥಾನವು ಕೆಳಮಟ್ಟಕ್ಕೆ ಹೋಗಿದೆ. ಯುನೈಟೆಡ್ ಸ್ಟೇಟ್ಸ್ ಕೂಡ ಕಳೆದ ಬಾರಿಗೆ ಹೋಲಿಸಿದರೆ ಒಂದು ಸ್ಥಾನವನ್ನು ಕಳೆದುಕೊಂಡು 19 ನೇ ಸ್ಥಾನಕ್ಕೆ ತಲುಪಿದೆ. ಇನ್ನು ಏಷ್ಯಾದ ಹಲವಾರು ದೇಶಗಳು ಕಳೆದ ವರ್ಷಕ್ಕಿಂತ ಈ ವರ್ಷ ಉತ್ತಮವಾಗಿವೆ, ಆದರೆ ಚೀನಾ 94 ನೇ ಸ್ಥಾನದಿಂದ 84 ನೇ ಸ್ಥಾನಕ್ಕೆ ಸಾಗಿದೆ.