Advertisement

ವಿಶ್ವಸಂಸ್ಥೆಯ ಸಂತೋಷ ಸೂಚ್ಯಂಕ ವರದಿ ಬಿಡುಗಡೆ

11:56 PM Mar 21, 2023 | Team Udayavani |

ಹೊಸದಿಲ್ಲಿ: ಕೋವಿಡ್‌-19 ವೈರಾಣು ವಿನ ದಾಳಿಗೆ ಕಳೆದ ಕೆಲವು ವರ್ಷಗಳಲ್ಲಿ ಇಡೀ ಪ್ರಪಂಚ ಸಾವು, ದುಃಖಗಳನ್ನು ಅನುಭವಿಸಿದೆ. ಇಷ್ಟೆಲ್ಲ ಸಾವು ನೋವಿನ ಮಧ್ಯೆಯೂ ಜನರು ತುಂಬಾ ಸಂತೋ ಷವಾಗಿದ್ದಾರೆ!

Advertisement

ಹೌದು, ವಿಶ್ವಸಂಸ್ಥೆಯ ಸುಸ್ಥಿರ ಅಭಿ ವೃದ್ಧಿ ಪರಿಹಾರಗಳ ಜಾಲ (ಸಸ್ಟೇ ಯೆನೆಬಲ್‌ ಡೆವಲಂಪ್‌ಮೆಂಟ್‌ ಸೊಲ್ಯು ಶನ್‌ ನೆಟವರ್ಕ್‌) ತನ್ನ 11ನೇ ಸಂತೋಷ ಸೂಚ್ಯಂಕದ ವರದಿಯಲ್ಲಿ ಮೊದಲಿನ ಸಮಯಕ್ಕೆ ಹೋಲಿಸಿದರೆ ಕೋವಿಡ್‌ ದಾಳಿಯ ಅನಂತರ ವಿಶ್ವದಲ್ಲಿ ಸಂತೋಷದಿಂದ ಬದುಕುತ್ತಿರುವವರ ಸಂಖ್ಯೆಯೂ ಹೆಚ್ಚಿದೆ ಎಂದು ಹೇಳಿದೆ.

ಸತತ 6ನೇ ಬಾರಿ ಫಿನ್‌ ಲ್ಯಾಂಡ್‌ ಪ್ರಥಮ
ಈ ಬಾರಿಯ ವರದಿಯಲ್ಲಿ ಯುರೋ ಪ್‌ನ ಫಿನ್‌ ಲ್ಯಾಂಡ್‌ ಅತೀ ಹೆಚ್ಚು ಸಂತೋಷದ ಜನರಿರುವ ದೇಶವಾಗಿದೆ. ಇದು ಸತತ ಆರನೇ ಬಾರಿಗೆ ಫಿನಲ್ಯಾಂಡ್‌ ಪ್ರಥಮ ಸ್ಥಾನಿ ಯಾಗಿರುವುದು. ಇಲ್ಲಿನ ಬಲವಾದ ಆಡಳಿತ, ಮಾನವ ಹಕ್ಕುಗಳ ಅನುಸರಣೆ ಫಿನ್‌ ಲ್ಯಾಂಡ್‌ ಮೊದಲ ಸ್ಥಾನ ಗಳಿಸಲು ಕಾರಣವಾಗಿದೆ. ಜತೆಗೆ ಇಲ್ಲಿ ಮಗು ಹುಟ್ಟಿದಾಗ ಒಂದು ವರ್ಷದವರೆಗೆ ಮಗುವಿನ ಬೆಳವಣಿಗೆಗೆ ಪೂರಕವಾಗುವ ಸೌಲಭ್ಯಗಳನ್ನು ನೀಡುತ್ತದೆ. ಅಲ್ಲದೇ ಪೋಷಕರಿಗೆ 10 ತಿಂಗಳ ಪೋಷಕ ರಜೆಯ ಸೌಲಭ್ಯ ಒದಗಿಸುವುದರಿಂದ ಮಗುವಿನೊಂದಿಗೆ ತಂದೆ-ತಾಯಿ ಸಮಯ ಕಳೆಯ ಬಹುದು. ಇದರ ಹೊರತಾಗಿಯೂ ಇಲ್ಲಿನ ನಾಗರಿಕರಿಗೆ ಉಚಿತ ಶಿಕ್ಷಣ ಹಾಗೂ ಆರೋಗ್ಯ ಸೇವೆಗಳನ್ನು ಅಲ್ಲಿನ ಸರಕಾರ ಒದಗಿಸುತ್ತಿದೆ, ಅದಲ್ಲದೇ ನಿರುದ್ಯೋ ಗಿಗಳಿಗೂ ನೆರವಾಗುವ ವ್ಯವಸ್ಥೆ ಫಿನ್‌ ಲ್ಯಾಂಡ್‌ ನ‌ ಸತತ ಗೆಲುವಿಗೆ ಕಾರಣವಾಗಿದೆ.

ಡೆನ್‌ಮಾರ್ಕ್‌ 2ನೇ ಸ್ಥಾನ, ಐಸ್‌ಲ್ಯಾಂಡ್‌ 3ನೇ ಸ್ಥಾನ, ಇಸ್ರೇಲ್‌ ಹಾಗೂ ನೆದರ್‌ಲ್ಯಾಂಡ್ಸ್‌ ದೇಶಗಳು 4 ಮತ್ತು 5ನೇ ಸ್ಥಾನದಲ್ಲಿ. ಅಪಘಾನಿಸ್ಥಾನವು ಕೊನೆಯ ಅಂದರೆ 137ನೇ ಸ್ಥಾನಗಳಿಸಿದೆ.

ಭಾರತಕ್ಕೆ 126ನೇ ಸ್ಥಾನ
ಸಂತೋಷ ಸೂಚ್ಯಂಕದಲ್ಲಿ ಭಾರತ 126ನೇ ಸ್ಥಾನಗಳಿಸಿದೆ. ವಿಪರ್ಯಾ ಸವೆಂದರೆ ಭಾರತದ ನೆರೆ ರಾಷ್ಟ್ರಗಳು ಈ ಪಟ್ಟಿಯಲ್ಲಿ ಭಾರತವನ್ನು ಹಿಂದಿಕ್ಕಿವೆ. ನೆರೆ ರಾಷ್ಟ್ರ ನೇಪಾಲ 78, ಚೀನ 64, ಪಾಕಿಸ್ಥಾನ 108, ಶ್ರೀಲಂಕಾ 112 ಸ್ಥಾನದಲ್ಲಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next