Advertisement
ಆವರಗೆರೆ ಗ್ರಾಮದ ಶ್ರೀಕಾಯಕಯೋಗಿ ಬಸವ ಪರಿಸರ ವೇದಿಕೆ ಸದಸ್ಯರು ಕಳೆದ ಎರಡು ವರ್ಷಗಳಿಂದ ಗ್ರಾಮದಲ್ಲಿ ಎರಡು ಸಾವಿರಕ್ಕೂ ಅಧಿಕ ಸಸಿಗಳನ್ನು ನೆಟ್ಟು ನಿತ್ಯ ಪೋಷಣೆ ಮಾಡುತ್ತಿದ್ದು ಅವು ಈಗ ಗ್ರಾಮದಲ್ಲಿ ಸಮೃದ್ಧವಾಗಿ ಬೆಳೆದು ನಿಂತಿವೆ. ಇದರ ಜತೆಗೆ ಪ್ರತಿ ರವಿವಾರ ಶ್ರಮದಾನದ ಮೂಲಕ ಗ್ರಾಮದಲ್ಲಿ ಸ್ವಚ್ಛತಾ ಕಾರ್ಯಗಳನ್ನು ಮಾಡುವ ಮೂಲಕ ಗ್ರಾಮದ ಸೌಂದರ್ಯ ಹೆಚ್ಚಿಸುವ ಕಾರ್ಯ ಮಾಡುತ್ತಿದ್ದಾರೆ.
Related Articles
Advertisement
ಮರ ಬೆಳೆಸುವ ಕಾಳಜಿ, ಪರಿಸರ ಪ್ರೀತಿ ಸಾರ್ವಜನಿಕರಲ್ಲಿಯೂ ಬೆಳೆಸುವ ಉದ್ದೇಶದಿಂದರಾಷ್ಟ್ರೀಯ ಕಾರ್ಯಕ್ರಮ, ಹಬ್ಟಾಚರಣೆ ಹಾಗೂ ವಿಶೇಷ ಸಂದರ್ಭದಲ್ಲಿ ಸಸಿ ವಿತರಿಸುವ ಕಾರ್ಯವೂ ನಿರಂತರವಾಗಿ ವೇದಿಕೆವತಿಯಿಂದ ನಡೆಯುತ್ತಿದೆ.
ಪರಿಸರಕ್ಕಾಗಿ ದೇಣಿಗೆ: ಶ್ರೀಕಾಯಕಯೋಗಿ ಬಸವ ಪರಿಸರ ವೇದಿಕೆ ಸದಸ್ಯರಿಂದ ಪರಿಸರಚಟುವಟಿಕೆಗಾಗಿ ಪ್ರತಿ ತಿಂಗಳು 200 ರೂ. ದೇಣಿಗೆಸಂಗ್ರಹಿಸಲಾಗುತ್ತಿದೆ. ಇದಕ್ಕಾಗಿ ಅಂಚೆ ಕಚೇರಿಯಲ್ಲಿ ಉಳಿತಾಯ ಖಾತೆಯನ್ನೂ ತೆರೆಯಲಾಗಿದೆ. ಸ್ವತ್ಛತಾಚಟುವಟಿಕೆಗೆ ಬೇಕಾದ ಗಾರೆ, ಬುಟ್ಟಿಯಂತಹಪರಿಕರ ಖರೀದಿಸಿಟ್ಟುಕೊಳ್ಳಲಾಗಿದೆ. ಇದರೊಂದಿಗೆ ದಾನಿಗಳ ಸಹಾಯದಿಂದ ಗ್ರಾಮದಲ್ಲಿ ಅಲ್ಲಲ್ಲಿಬೆಂಚ್, ಬೇಸಿಗೆಯಲ್ಲಿ ಟ್ಯಾಂಕರ್ ಮೂಲಕ ಸಸಿಗಳಿಗೆ ನೀರುಣಿಸಲಾಗುತ್ತಿದೆ.
ಗ್ರಾಮದ ಹಿರಿಯರಾದ ನಾಯಕನಹಟ್ಟಿ ರುದ್ರಪ್ಪ, ಶಿಕ್ಷಕ ಎಂ. ಗುರುಸಿದ್ದಸ್ವಾಮಿ, ಮಹಾನಗರಪಾಲಿಕೆ ಮಾಜಿ ಸದಸ್ಯ ಎಚ್.ಜಿ. ಉಮೇಶ್, ಮೈಸೂರು ಹನುಮಂತಪ್ಪ, ಕೆ.ಬಾನಪ್ಪ, ತಿಪ್ಪೇಸ್ವಾಮಿ, ಮಂಜುನಾಥ, ಶಿವರುದ್ರಪ್ಪ ಸೇರಿದಂತೆ ಸಂಘಟನೆಯಎಲ್ಲ ಸದಸ್ಯರು ಪರಿಸರ ಸಂರಕ್ಷಣೆ ಕಾಯಕದಲ್ಲಿ ಕೈಜೋಡಿಸಿದ್ದಾರೆ.
ಒಟ್ಟಾರೆ ಆವರಗೆರೆ ಗ್ರಾಮದ ಶ್ರೀಕಾಯಕಯೋಗಿ ಬಸವ ಪರಿಸರ ವೇದಿಕೆ ಸದಸ್ಯರ ಪರಿಸರ ಪ್ರೇಮ ಹಾಗೂ ಪರಿಸರ ಪೂರಕ ಚಟುವಟಿಕೆ ಇತರರಿಗೂ ಮಾದರಿಯಾಗಿದೆ.
ಕಳೆದ ಎರಡು ವರ್ಷಗಳಿಂದಆವರಗೆರೆಯಲ್ಲಿ ಶ್ರೀಕಾಯಕಯೋಗಿಬಸವ ಪರಿಸರ ವೇದಿಕೆ ಮಾಡಿಕೊಂಡು ಗ್ರಾಮದವಿವಿಧೆಡೆ ಸಸಿ ನೆಟ್ಟು ಪೋಷಿಸುತ್ತ ಬರಲಾಗುತ್ತಿದೆ.ಜತೆಗೆ ಪ್ರತಿ ರವಿವಾರ ಶ್ರಮದಾನದ ಮೂಲಕಗ್ರಾಮದ ಸ್ವಚ್ಛತಾ ಕಾರ್ಯ ಮಾಡಿ, ಗ್ರಾಮದ ಸೌಂದರ್ಯ ಹೆಚ್ಚಿಸಲಾಗುತ್ತಿದೆ. ವೇದಿಕೆಯಈ ಕಾರ್ಯಕ್ಕೆ ಗ್ರಾಮಸ್ಥರಿಂದ ಸಹಕಾರ,ಪ್ರೋತ್ಸಾಹವೂ ದೊರೆತಿದೆ.- ಎಂ. ಗುರುಸಿದ್ಧಸ್ವಾಮಿ, ಶಿಕ್ಷಕರು, ಸದಸ್ಯರು, ಶ್ರೀಕಾಯಕಯೋಗಿ ಬಸವ ಪರಿಸರ ವೇದಿಕೆ.
-ಎಚ್.ಕೆ. ನಟರಾಜ