Advertisement

ಪರಿಸರದಿಂದ ಮನುಷ್ಯ ಎಂಬ ಸತ್ಯ ಅರಿಯಿರಿ: ಡಾ|ಎಂ.ಆರ್‌.ರವಿ

10:26 AM Jun 06, 2018 | Team Udayavani |

ಸಸಿಹಿತ್ಲು : ಪರಿಸರದಿಂದ ಮನುಷ್ಯನಾಗಿದ್ದಾನೆಯೇ ಹೊರತುನಾವು ಪರಿಸರ ವಿರೋಧಿಯಾಗಿರಬಾರದು. ಜವಾಬ್ದಾರಿ ಅರಿತುಕೊಳ್ಳಲು ನಮಗೆ ಅನೇಕ ಅವಕಾಶ ಇವೆ ಜಿಲ್ಲೆಯಲ್ಲಿ ಸ್ವಚ್ಛ ಭಾರತದ ಕಲ್ಪನೆಯಲ್ಲಿ ಹಲವು ಕಾರ್ಯಕ್ರಮಗಳನ್ನು ನಿರಂತರವಾಗಿ ಹಮ್ಮಿಕೊಳ್ಳಲಾಗುತ್ತಿದೆ. ಜಿಲ್ಲಾ ಪಂಚಾಯತ್‌ನ ಸಿಬಂದಿಗಳೇ ಇಂದು ಕಚೇರಿ ಬಿಟ್ಟು ಗ್ರಾಮೀಣ ಭಾಗಕ್ಕೆ ಆಗಮಿಸಿ ಜಾಗೃತಿ ಮೂಡಿಸಿದ್ದಾರೆ ಎಂದು ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ| ಎಂ.ಆರ್‌. ರವಿ ಹೇಳಿದರು.

Advertisement

ಸಸಿಹಿತ್ಲು ಸರಕಾರಿ ಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಜಿಲ್ಲಾ ಪಂಚಾಯತ್‌ನ ಸ್ವಚ್ಛ ಭಾರತ್‌ ಮಿಷನ್‌ ಹಾಗೂ ಜಿಲ್ಲಾ ನೆರವು ಘಟಕದ ಸಂಯೋಜನೆಯಲ್ಲಿ ನಡೆದ ಪರಿಸರ ಜಾಗೃತಿ ಕಾರ್ಯಕ್ರಮಕ್ಕೆ ಅವರು ಗಿಡ ನೆಡುವ ಮೂಲಕ ಚಾಲನೆ ನೀಡಿ ಮಾತನಾಡಿದರು.

ಮಕ್ಕಳಿಂದ ಜಾಗೃತಿ ಮೂಡಿಸಿ ಗ್ರಾಮೀಣ ಭಾಗದಲ್ಲಿ ಸುಂದರ ಪರಿಸರದ ವಾತಾವರಣದ ಪರಿಕಲ್ಪನೆ ಇದ್ದರೆ ಮಾತ್ರ ಇಂತಹ ಕಾರ್ಯ ಯಶಸ್ಸಾಗುತ್ತದೆ. ಇಂದು ಸಿಬಂದಿ ಗಳಿಗೂ ಸಹ ಪರಿಸರದ ವಿಶಿಷ್ಟ ಅನುಭವವನ್ನು ತಿಳಿದುಕೊಳ್ಳಲು
ಅರ್ಥ ಪೂರ್ಣವಾಗಿ ಸಹಕಾರಿಯಾಗಿದೆ ಎಂದರು.

ಜಿ.ಪಂ. ಉಪ ಕಾರ್ಯದರ್ಶಿ ರವಿ ಬಸ್ರಿಹಳ್ಳಿ, ಸಂಯೋಜನ ಕಾರ್ಯದರ್ಶಿ ಗೋಪಾಲಕೃಷ್ಣ ಭಟ್‌, ಯೋಜನಾ ನಿರ್ದೇಶಕ ಟಿ.ಎನ್‌.ಲೋಕೇಶ್‌, ಯೋಜನಾಧಿಕಾರಿ ಸಚಿನ್‌, ಶಾಲಾ ಮುಖ್ಯ ಶಿಕ್ಷಕಿ ಕ್ಲೋಟಿಲ್ಡಾ ಲೋಬೋ, ಶಾಲಾ ಹಳೇ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಅನಿಲ್‌ ಕುಂದರ್‌, ಹಳೆಯಂಗಡಿ ಗ್ರಾ.ಪಂ.ಪ್ರಭಾರ ಪಿಡಿಒ ಕೇಶವ ದೇವಾಡಿಗ, ಪಡುಪಣಂಬೂರು ಗ್ರಾ.ಪಂ.ಪಿಡಿಒ ಅನಿತಾ ಕ್ಯಾಥರಿನ್‌, ಕಾರ್ಯದರ್ಶಿ ಲೋಕನಾಥ ಭಂಡಾರಿ, ಸಿಬಂದಿಗಳಾದ ಶರ್ಮಿಳಾ ಹಿಮಕರ್‌, ದಿನಕರ್‌, ಅಭಿಜಿತ್‌, ಸುನಿತಾ, ಹಳೆಯಂಗಡಿ ಪಂಚಾಯತ್‌ ಸಿಬಂದಿಗಳಾದ ಪ್ರಮಿಳಾ, ಹರೀಶ್‌, ಮಹಮ್ಮದ್‌ ತುಪಾಕಿ, ಅಂಗನವಾಡಿ ಕಾರ್ಯಕರ್ತೆಯರಾದ ಕವಿತಾ, ರತ್ನಾ ಎಸ್‌., ಸುಜಾತಾ, ಸವಿತಾ, ಗೀತಾ ಕೆ., ಮಾಲಿನಿ, ಶುಭಾವತಿ, ಶಾಲಾ ಸಹ ಶಿಕ್ಷಕರು, ವಿದ್ಯಾರ್ಥಿಗಳು, ಪೋಷಕರು ಉಪಸ್ಥಿತರಿದ್ದರು. ಜಿ. ಪಂ.ನ ನೆರವು ಘಟಕದ ಜಿಲ್ಲಾ ಸಂಯೋಜಕಿ ಮಂಜುಳಾ
ಸ್ವಾಗತಿಸಿ, ನಿರೂಪಿಸಿದರು.

ಪರಿಸರದ ದಿನದ ಚಟುವಟಿಕೆ
ಜಿಲ್ಲಾ ಪಂಚಾಯತ್‌ನ ಆಡಳಿತ, ಲೆಕ್ಕ, ಪರಿಷತ್‌, ಯೋಜನಾ ವಿಭಾಗದ ಅಧಿಕಾರಿಗಳು ಹಾಗೂ ಸಿಬಂದಿ ಸೇರಿ 60 ಮಂದಿ, ಅಂಗನವಾಡಿ ಕಾರ್ಯಕರ್ತರು, ಹಳೆಯಂಗಡಿ ಹಾಗೂ ಪಡುಪಣಂಬೂರು ಸಿಬಂದಿಗಳೊಂದಿಗೆ ಸೇರಿಕೊಂಡು, ಗಿಡ ನೆಡುವುದು, ಶ್ರಮದಾನ, ಸಮುದ್ರದ ಬದಿಯಲ್ಲಿ ತ್ಯಾಜ್ಯ ಸಂಗ್ರಹ, ಮನೆ ಮನೆಗೆ ಭೇಟಿ ನೀಡಿ ತ್ಯಾಜ್ಯ ವಿಲೇವಾರಿ ಬಗ್ಗೆ ಸ್ವಚ್ಛ ಮಿತ್ರದ ಕೈಪಿಡಿಯೊಂದಿಗೆ ಮಾಹಿತಿ, ರಸ ಪ್ರಶ್ನೆ, ಪರಿಸರದ ಸ್ಪರ್ಧೆಗಳಲ್ಲಿ ಮುಕ್ತವಾಗಿ ಭಾಗವಹಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next