Advertisement

World Environment Day: ಬನಹಟ್ಟಿಯಲ್ಲಿ ತಲೆ ಎತ್ತುತ್ತಿದೆ ನಗರವಾಸಿಗಳಿಗೆ ವೃಕ್ಷ ಉದ್ಯಾನವನ

02:33 PM Jun 05, 2024 | Team Udayavani |

ರಬಕವಿ-ಬನಹಟ್ಟಿ: ಅರಣ್ಯ ಇಲಾಖೆ ಅರಣ್ಯ ಬೆಳೆಸುವ ನಿಟ್ಟಿನಲ್ಲಿ ವರ್ಷದುದ್ದಕ್ಕೂ ಅನೇಕ ಕಾರ್ಯಕ್ರಮಗಳನ್ನು ಹಾಕಿಕೊಂಡು ಬರುತ್ತಿದ್ದು, ಅದರಂತೆ ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ಬನಹಟ್ಟಿ ಹಾಗೂ ಆಸಂಗಿ ಗ್ರಾಮಕ್ಕೆ ಹೊಂದಿಕೊಂಡಿರುವ ಬನಹಟ್ಟಿಯ ಸರ್ವೆ ನಂ. 7 ಮತ್ತು ಆಸಂಗಿ ಸರ್ವೆ ನಂ. 97ರಲ್ಲಿ ಒಟ್ಟು 43 ಎಕರೆ ಅರಣ್ಯ ಪ್ರದೇಶದಲ್ಲಿ ಬೃಹತ್ ವೃಕ್ಷೋದ್ಯಾನವನ ಅಭಿವೃದ್ಧಿಪಡಿಸಲಾಗುತ್ತಿದೆ.

Advertisement

ಸಾರ್ವಜನಿಕರ ಮತ್ತು ಮಕ್ಕಳ ಅನುಕೂಲಕ್ಕಾಗಿ 2 ಕೋಟಿ ವೆಚ್ಚದ ವೃಕ್ಷೋದ್ಯಾನವನವನ್ನು 2022 ಫೆ.16 ರಂದು ಶಾಸಕ ಸಿದ್ದು ಸವದಿ ಭೂಮಿ ಪೂಜೆ ಸಲ್ಲಿಸಿದ್ದರು.

ನಂತರ ಅದಕ್ಕೆ ಮೊದಲ ಹಂತವಾಗಿ ರೂ. 25 ಲಕ್ಷ ಬಿಡುಗಡೆಯಾಗಿ ಕಾಮಗಾರಿ ಆರಂಭಗೊಂಡಿತ್ತು. ಆದರೆ ಇದೀಗ ಹಂತ ಹಂತವಾಗಿ ಇಲಾಖೆಯಿಂದ ಬರುವ ಅನುದಾನದಲ್ಲಿ ಕಾಮಗಾರಿ ನಡೆಯುತ್ತಿದೆ.

ಈಗ ಈ ಅರಣ್ಯ ಪ್ರದೇಶದ ಸುತ್ತಲೂ ಕಾಂಪೌಂಡ್‌ ಗೋಡೆ ನಿರ್ಮಾಣದ ಕಾಮಗಾರಿ ಪ್ರಾರಂಭವಾಗಿದ್ದು, ಆಕರ್ಷಕ ಗೇಟ್ ಈಗಾಗಲೇ ನಿರ್ಮಾನವಾಗಿದ್ದು ನೋಡುಗರನ್ನು ಸೆಳೆಯುತ್ತಿದೆ.

ಇಲ್ಲಿ ಬೆಳಗ್ಗೆ ಮತ್ತು ಸಂಜೆ ವಾಯುವಿಹಾರಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಸಿಸಿ ರಸ್ತೆ ನಿರ್ಮಾಣ, ಮಕ್ಕಳು ಆಡುವ ಸಲಕರಣೆಗಳು, ಕುಳಿತುಕೊಳ್ಳಲು 2 ಪ್ಯಾರಾಗೋಲಗಳನ್ನು ನಿರ್ಮಾಣ ಮಾಡಿದ್ದು, ಜೊತೆಗೆ ಮಹಿಳೆ ಮತ್ತು ಪುರುಷರಿಗಾಗಿ ಪ್ರತ್ಯೇಕ ಶೌಚಾಲಯದ ವ್ಯವಸ್ಥೆ ಮಾಡಲಾಗಿದೆ.

Advertisement

ಇಷ್ಟು ಮಾತ್ರವಲ್ಲದೇ ವಾಯುವಿಹಾರಿಗಳು ಕುಳಿತುಕೊಳ್ಳಲು ಅನುಕೂಲವಾಗುವ ನಿಟ್ಟಿನಲ್ಲಿ ಸುಮಾರು 20 ಕ್ಕೂ ಹೆಚ್ಚು ಬೆಂಚ್‌ಗಳನ್ನು ಅಳವಡಿಸಲಾಗಿದ್ದು, ಇಲ್ಲಿ ಒಟ್ಟು 5 ಸಾವಿರಕ್ಕೂ ಹೆಚ್ಚು ಗಿಡಗಳು ಬೆಳೆದು ನಿಂತಿದ್ದು, ನೋಡುಗರನ್ನು ಆಕರ್ಷಿಸುತ್ತಿದೆ.

ಗಿಡ ಮರಗಳನ್ನು ರಕ್ಷಿಸುವುದರ ಜೊತೆಗೆ ಸುಂದರ ಪರಿಸರವನ್ನು ನಿರ್ಮಾಣ ಮಾಡುವ ಅರಣ್ಯ ಇಲಾಖೆ ಅಧಿಕಾರಿಗಳ ಕಾರ್ಯ ನಿಜಕ್ಕೂ ಶ್ಲಾಘನೀಯ. ಈ ಭೂಮಿಯಲ್ಲಿ ಈ ಮೊದಲು ಸಾರ್ವಜನಿಕರು ಅಲ್ಲಲ್ಲಿ ಆಕ್ರಮಿಸಿಕೊಂಡು ಎಲ್ಲೆಂದರಲ್ಲಿ ರಸ್ತೆಗಳನ್ನು ನಿರ್ಮಿಸಿಕೊಂಡಿದ್ದರು. ಆದರೆ ಇಲಾಖೆ ಅಧಿಕಾರಿಗಳು ಭೂ ನಕ್ಷೆ ಪ್ರಕಾರ ವ್ಯಾಪ್ತಿ ಪ್ರದೇಶ ಗುರುತಿಸಿಕೊಂಡು ತಡೆಗೋಡೆ ನಿರ್ಮಿಸಿದ್ದಾರೆ.

ವೃಕ್ಷ ಉದ್ಯಾನವನ ಎಂಬುದು ಗಿಡಮೂಲಿಕೆಗಳು, ಪೊದೆಗಳು, ಬಳ್ಳಿಗಳು ಇತ್ಯಾದಿಗಳೊಂದಿಗೆ ಮುಖ್ಯವಾಗಿ ನೈಸರ್ಗಿಕ ಮತ್ತು ನೆಟ್ಟ ಮರಗಳ ಬೆಳವಣಿಗೆಯ ಪ್ರದೇಶವಾಗಿದೆ.

ನಗರ ಸ್ಥಳಗಳಲ್ಲಿ ಅಥವಾ ಹತ್ತಿರದಲ್ಲಿ ವೃಕ್ಷ ಉದ್ಯಾನವನಗಳನ್ನು ರಚಿಸುವ ಉದ್ದೇಶವು ನಗರವಾಸಿಗಳಿಗೆ ಪ್ರವೇಶಿಸಬಹುದಾದ ದೂರದಲ್ಲಿ ಪ್ರಕೃತಿಯನ್ನು ಅನುಭವಿಸುವ ಅವಕಾಶವನ್ನು ಒದಗಿಸುವುದು.

ವೃಕ್ಷ ಉದ್ಯಾನವನಗಳಲ್ಲಿ ಸಾರ್ವಜನಿಕರ ಅನುಕೂಲಕ್ಕಾಗಿ ಕಾಲ್ನಡಿಗೆಯ ಪಥ, ಪ್ರಕೃತಿ ಹಾದಿಗಳು, ಕುಡಿಯುವ ನೀರಿನ ಸೌಲಭ್ಯಗಳು, ಮಕ್ಕಳ ಆಟದ ಪ್ರದೇಶ, ಶೌಚಾಲಯಗಳು ಮುಂತಾದ ಮೂಲಭೂತ ಸಾರ್ವಜನಿಕ ಸೌಲಭ್ಯಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ.

ಬನಹಟ್ಟಿಯ ಕೆಎಚ್‌ಡಿಸಿ ರಸ್ತೆಯಲ್ಲಿರುವ ನಾಲ್ಕು ಅರಣ್ಯ ಪ್ರದೇಶದ ಭೂಮಿಯಲ್ಲಿಯೂ ಕೂಡಾ ಅರಣ್ಯೀಕರಣಗೊಳಿಸಿ ಅಲ್ಲಿಯೂ ಮಕ್ಕಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಅಭಿವೃದ್ಧಿ ಪಡಿಸಲಾಗುತ್ತದೆ ಎನ್ನುತ್ತಾರೆ ಅರಣ್ಯ ಅಧಿಕಾರಿಗಳು.

ಇಲ್ಲಿ ಇನ್ನೂ ಅನೇಕ ಅಭಿವೃದ್ಧಿ ಕಾಮಗಾರಿಗಳು ನಡೆಯಬೇಕಾಗಿದ್ದು, ಇಲ್ಲಿ ಗುಡ್ಡಗಾಡು ಪ್ರದೇಶವಾಗಿರುವುದರಿಂದ ಒಂದು ಕಡೆ ಕರೆ ಮಾಡಲು ಸೂಕ್ತ ಸ್ಥಳವಿದ್ದು ಅದನ್ನು ಅಭಿವೃದ್ಧಿ ಪಡಿಸಿದ್ದಲ್ಲಿ ಅಂತರಜಲ ಹೆಚ್ಚುವುದರ ಜೊತೆಗೆ ಇನ್ನಷ್ಟು ಹಸಿರುವಾತಾವರಣ ಹಾಗೂ ಪ್ರವಾಸೋದ್ಯಮಕ್ಕೆ ಹೆಚ್ಚಿನ ಬಲ ಬಂದಂತಾಗುತ್ತದೆ ಆ ನಿಟ್ಟಿನಲ್ಲಿ ಅಧಿಕಾರಿಗಳು ಹಾಗೂ ಜನ ಪ್ರತಿನಿಧಿಗಳು ಈತ ಗಮನ ನೀಡಬೇಕಾಗಿದೆ. ಅದರ ಜೊತೆ ಸ್ಥಳೀಯ ಸಂಘ ಸಂಸ್ಥೆಗಳು ಕೂಡಾ ಇದಕ್ಕೆ ಸಾಥ ನೀಡಿದದಲ್ಲಿ ವೃಕ್ಷ ಉದ್ಯಾನವನ ಮತ್ತಷ್ಟು ಬೇಗನೆ ಜನತೆಗೆ ಮುಕ್ತವಾಗಲಿದೆ.

ವೃಕ್ಷೋದ್ಯಾನವನದ ಅಂದ ಹೆಚ್ಚಿಸಲು ಈಗಾಗಲೇ ಗೇಟ್ ಹಾಗೂ ಗೋಡೆ ನಿರ್ಮಾಣ ಆರಂಭವಾಗಿದ್ದು ಅದಕ್ಕೆ ೩ಡಿ ಪೇಂಟಿಂಗ ಮೂಲಕ ಅರಣ್ಯ ಜಾಗೃತಿ ಮೂಡಿಸುವ ಚಿತ್ರಗಳನ್ನು ಬೀಡಿಸುವುದು, ಈಗ ಕೆಲವು ಕಡೆ ಅಳವಡಿಸಿರುವ ತಂತಿ ಬೇಲಿಗಳಿಗೆ ಜೀವಂತ ಬೇಲಿ ಗೀಡಗಳನ್ನು ಬೆಳಸಿ ಉದ್ಯಾನವನ ಸಂರಕ್ಷಣೆ, ಈ ವರ್ಷ ೯೦೦ ಸೌಂದರ್ಯಕರಣದ ಸಸಿ ನೆಡುವು ಯೋಜನೆ, ವಯಸ್ಕರಿಗೆ ಓಪನ ಜಿಮ್, ಮಕ್ಕಳಿಗೆ ಆಟವಾಡಲು ಆಟಿಕೆಗಳ ಅಳವಡಿಕೆ ಕಾರ್ಯಗಳು ಸದ್ಯದಲ್ಲಿಯೇ ಪ್ರಾರಂಭಗೊಳಲಿವೆ.

ವೃಕ್ಷ ಉದ್ಯಾನವನ ಯೋಜನೆಯು ನಗರವಾಸಿಗಳಿಗೆ ಪ್ರವೇಶಿಸಬಹುದಾದ ದೂರದಲ್ಲಿ ನೈಸರ್ಗಿಕ ಪರಿಸರವನ್ನು ಒದಗಿಸುವ ಉದ್ದೇಶವನ್ನು ಹೊಂದಿದೆ. ನಗರಗಳು / ಪಟ್ಟಣಗಳ ಬಳಿ ವೃಕ್ಷ ಉದ್ಯಾನವನಗಳನ್ನು ಸರಕಾರ ಸ್ಥಾಪಿಸುತ್ತಿದೆ. ಇದರಿಂದ ನಗರವಾಸಿಗಳು ಪ್ರಕೃತಿಯನ್ನು ಅನುಭವಿಸಬಹುದು ಪ್ರಕೃತಿ ಜೊತೆಗೆ ವಾಕಿಂಗ್, ಜಾಗಿಂಗ್, ಸೈಕ್ಲಿಂಗ್, ಯೋಗ, ಧ್ಯಾನ ಇತ್ಯಾದಿ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಹುದು ಎನ್ನುತ್ತಾರೆ ಸ್ಥಳೀಯ ಉಪವಲಯ ಅರಣ್ಯ ಅಧಿಕಾರಿ ಮಲ್ಲು ನಾವಿ.

ಈ ವರ್ಷ ಇಲ್ಲಿ ಬೋರವೆಲ್, ಮೋಟರ್ ಮಂಜುರಾಗಿದ್ದು ಇನಷ್ಟು ನೀರಿನ ವ್ಯವಸ್ಥೆ ಮಾಡಿಕೊಳ್ಳಲು ಅನೂಕಲವಾಗಲಿದ್ದು, ಅಲ್ಲದೇ ಈ ವರ್ಷ ವಯಸ್ಕರ ಜಿಮ್, ಮಕ್ಕಳ ಆಟಿಕೆಗಳು ಕೂಡಾ ಮಂಜುರಾಗಿದ್ದು, ವೃಕ್ಷೋದ್ಯಾನವನ ಅಭಿವೃದ್ಧಿ ನಿಟ್ಟಿನಲ್ಲಿ ಹೆಚ್ಚಿನ ಮುತ್ತುವರ್ಜಿವಹಿಸಿ ಕೆಲಸ ಮಾಡುತ್ತಿದ್ದೇವೆ.   –  ಪವನ ಕುರನಿಂಗ, ವಲಯ ಅರಣ್ಯಾಧಿಕಾರಿ, ಜಮಖಂಡಿ

  ಕಿರಣ ಶ್ರೀಶೈಲ ಆಳಗಿ

 

Advertisement

Udayavani is now on Telegram. Click here to join our channel and stay updated with the latest news.

Next