Advertisement

“ಕಸ ವಿಲೇವಾರಿ ಸಮರ್ಪಕ ನಿರ್ವಹಣೆಯಾಗಲಿ’

08:07 PM Jun 06, 2019 | Team Udayavani |

ಕೊಣಾಜೆ: ಕಳೆದ ವರ್ಷ ಕ್ಯಾಂಪಸ್‌ನ್ನು ಪ್ಲಾಸ್ಟಿಕ್‌ ನಿಷೇಧಿತ ಪ್ರದೇಶವನ್ನಾಗಿ ಘೋಷಿಸಿ, ಈ ವರ್ಷ ಕೆ.ಎಸ್‌.ಆರ್‌.ಪಿ. ವಸತಿ ಸಮುಚ್ಚಯದಲ್ಲಿ ಕಸವನ್ನು ಮನೆಮನೆಯಲ್ಲಿ ವಿಂಗಡಿಸಿ ಸಮರ್ಪಕವಾಗಿ ನಿರ್ವಹಿಸುವುದರ ಮೂಲಕ ಸ್ವತ್ಛ ಪ್ರದೇಶವೆಂದು ಘೋಷಿಸಲು ಸಾಧ್ಯವಾಗಿದೆ ಎಂದು ರಾಜ್ಯ ಮೀಸಲು ಪೊಲೀಸ್‌ 7ನೇ ಪಡೆ ಕಮಾಂಡೆಂಟ್‌ ಜನಾರ್ದನ ಹೇಳಿದರು.

Advertisement

ಕರ್ನಾಟಕ ರಾಜ್ಯ ಮೀಸಲು ಪೋಲಿಸ್‌ 7ನೇ ಪಡೆ ಕ್ಯಾಂಪಸ್‌ನಲ್ಲಿ ಕಸ ವಿಲೇವಾರಿ ಆಂದೋಲನದೊಂದಿಗೆ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಏರ್ಪಡಿಸಲಾದ ಕಾರ್ಯಕ್ರಮದಲ್ಲಿ ಗಿಡವನ್ನು ನೆಟ್ಟು ಹಸಿ ಕಸ ಹಾಗೂ ಒಣ ಕಸವನ್ನು ವಿಂಗಡಿಸುವ ಕೇಂದ್ರವನ್ನು ಉದ್ಘಾಟಿಸಿ ಕಸ ವಿಲೇವಾರಿ ವಾಹನಕ್ಕೆ ಚಾಲನೆ ನೀಡಿ ಮಾತನಾಡಿದರು.
ಸಹಾಯಕ ಕಮಾಂಡೆಂಟ್‌ ಶರತ್‌ ಎಂ.ಎ, ಇನ್ಸ್‌ಪೆಕ್ಟರ್‌ ರಾಜು ಹಾಗೂ ಜನ ಶಿಕ್ಷಣ ಟ್ರಸ್ಟ್‌ ನಿರ್ದೇಶಕ ಕೃಷ್ಣ ಮೂಲ್ಯ, ಘಟಕಾಧಿಕಾರಿ, ಸಿಬಂದಿ ವರ್ಗ ಹಾಗೂ ಪೊಲೀಸ್‌ ಕುಟುಂಬದ ಸದಸ್ಯರು ಉಪಸ್ಥಿತರಿದ್ದರು.

ಸಮರ್ಪಕ ನಿರ್ವಹಣೆ
ಜಿಲ್ಲಾ ಸ್ವತ್ಛತಾ ರಾಯಭಾರಿ ಶೀನ ಶೆಟ್ಟಿ ಮಾತ ನಾಡಿ, ಸ್ವತ್ಛತೆಯೇ ಸಮೃದ್ಧಿ,ಸ್ವತ್ಛತೆಯೇ ಸಂಸ್ಕೃತಿ ಎಂಬ ಧ್ಯೇಯ ವಾಕ್ಯದೊಂದಿಗೆ ವಿಶ್ವ ಪರಿಸರ ದಿನಾಚರಣೆ ಮಹತ್ವ, ಮತ್ತು ಪ್ಲಾಸ್ಟಿಕ್‌ ಮತ್ತಿತರ ಘನ ತ್ಯಾಜ್ಯಗಳ ಸಮರ್ಪಕ ನಿರ್ವಹಣೆಯ ಅಗತ್ಯದ ಬಗ್ಗೆ ಮಾಹಿತಿ ನೀಡಿದರು.ಕೆ.ಎಸ್‌.ಆರ್‌.ಪಿ ವಸತಿ ಸಮುಚ್ಚಯದ ಪ್ರತಿ ಮನೆಯಲ್ಲಿ ಹಸಿ ಕಸ ಒಣ ಕಸವನ್ನಾಗಿ ವಿಂಗಡಿಸಿ ಸಮರ್ಪಕ ವಿಲೇವಾರಿಗೆ ಕ್ರಮ ಕೈಗೊಂಡ‌ ಕ.ರಾ. ಮೀಸಲು ಪೊಲೀಸ್‌ ಪಡೆ 7ನೇ ಘಟಕವು ಇತರ ಇಲಾಖೆಗೆ ಮಾದರಿಯಾಗಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next