ತಿಪಟೂರು: ನಗರದ ಪಲ್ಲಾಗಟ್ಟಿ ಅಡವಪ್ಪಕಲಾ ಮತ್ತು ವಾಣಿಜ್ಯ ಪ್ರಥಮ ದರ್ಜೆಕಾಲೇಜಿನಲ್ಲಿ ಪ್ರಾಂಶುಪಾಲ ಡಾ.ಎನ್.ಜಗದೀಶ್ ಅಧ್ಯಕ್ಷತೆಯಲ್ಲಿ ವಿಶ್ವ ಪರಿಸರ ದಿನ ಆಚರಿಸಲಾಯಿತು.
ಪ್ರಾಂಶುಪಾಲ ಡಾ.ಎನ್.ಜಗದೀಶ್‌ಮಾತನಾಡಿ, ಕೋವಿಡ್ ಮನುಷ್ಯ ಸೇರಿದಂತೆಯಾವುದೇ ಜೀವಿಗಳಿಗೆ ಆಕ್ಸಿಜನ್ ಎಷ್ಟುಮುಖ್ಯ ಎಂಬುದನ್ನು ಅರ್ಥ ಮಾಡಿಸಿ ಗಿಡಮರಗಳ ಬೆಳೆಸುವ ಬಗ್ಗೆ ಪಾಠ ಕಲಿಸಿದೆ. 2ನೇಅಲೆಯಂತೂ ಆಕ್ಸಿಜನ್ ಮಹತ್ವವನ್ನು ಸಾವಿರಾರು ಅಮಾಯಕರನ್ನ ಬಲಿ ತೆಗೆದುಕೊಳ್ಳುವ ಮೂಲಕ ಆಕ್ಸಿಜನ್ ಬೆಲೆ, ಮಹತ್ವವನ್ನು ಎಂದೂ ಮರೆಯದಂತೆ ನಮ್ಮೆಲ್ಲರಿಗೂ ತಿಳಿಸಿ ಕೊಟ್ಟಿದೆ.
ಮುಂದಿನ ದಿನಗಳಲ್ಲಿ ಪ್ರತಿಯೊಬ್ಬರೂ ಕಡ್ಡಾಯವಾಗಿ ಗಿಡಗಳನ್ನ ನೆಟ್ಟುಪೋಷಿಸುವ ಹೊಣೆಗಾರಿಕೆಯನ್ನು ಕಾನೂನುಮಾಡಬೇಕಿರುವುದು ಅತಿ ಮುಖ್ಯ ಎಂದರು.
ಪರಿಸರ ಸಂರಕ್ಷಣೆ ಅನಿವಾರ್ಯ:ಭೂಗೋಳಶಾಸ್ತ್ರ ವಿಭಾಗದ ಅಧ್ಯಾಪಕ ಎ.ಎಂ.ಕಾಂತರಾಜು ಮಾತನಾಡಿ, ಪ್ರಕೃತಿಯಬದಲಾವಣೆಯ ಸಂದರ್ಭ ಹಾಗೂ ಪ್ರಸ್ತುತನಾಶದ ಅಂಚಿನಲ್ಲಿರುವ ಜೀವಿಗಳನ್ನು ರಕ್ಷಣೆಮಾಡಲು ಪರಿಸರ ಸಂರಕ್ಷಣೆ ಮಾಡುವುದುಅತ್ಯಂತ ಅವಶ್ಯಕ. ಈ ನಿಟ್ಟಿನಲ್ಲಿ ಹಲವುಸಂಘ-ಸಂಸ್ಥೆಗಳು ಗಿಡ ನೆಟ್ಟು ಪೋಷಿಸುವಕೆಲಸ ಮಾಡುತ್ತಿದ್ದು, ನಮ್ಮ ಸಂಸ್ಥೆಯ ಎಲ್ಲಕಾಲೇಜುಗಳಲ್ಲಿ ಗಿಡ ನೆಟ್ಟು ಪೋಷಿಸಲಾಗುತ್ತಿದೆಎಂದರು.
ಕಲ್ಪತರು ವಿದ್ಯಾಸಂಸ್ಥೆಯ ಕಾರ್ಯದರ್ಶಿಎಚ್.ಬಿ.ಸುಧಾಕರ್, ಎಂ.ಆರ್. ಸಂಗಮೇಶ್,ಉಪಾಧ್ಯಕ್ಷರಾದ ಬಾಗೇಪಲ್ಲಿ ನಟರಾಜು,ಜಿ.ಪಿ.ದೀಪಕ್, ಪೊ›. ಸಿಎಂಎಸ್‌ಲೋಕೇಶ್ವರಯ್ಯ, ಪ್ರೊ. ಎಚ್.ಆರ್.ಧನಂಜಯ, ಪೊ›.ಟಿ.ಎಸ್. ಕಾಂತರಾಜಯ್ಯಹಾಗೂ ಇತರರು ಇದ್ದರು.