Advertisement
ಅವರು ಕುಶಾಲನಗರದ ಸಮೀಪದ ಹಾರಂಗಿ ಆನೆ ಶಿಬಿರದಲ್ಲಿ ನಡೆದ ಆನೆ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. ಆನೆಗಳು ಪರಿಸರದ ಭಾಗವಾಗಿದ್ದು, ಪ್ರಕೃತಿಯ ಸಂರಕ್ಷಣೆ ಆದಲ್ಲಿ ಮಾತ್ರ ಮಾನವನ ಉಳಿವುಸಾಧ್ಯ ಎಂದರು. ದೇಶದಲ್ಲಿ ಆನೆಗಳ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತಿದ್ದು ರಾಜ್ಯದಲ್ಲಿ 6 ಸಾವಿರಕ್ಕೂ ಅಧಿಕ ಆನೆಗಳಿದ್ದು ಜಿಲ್ಲೆಯಲ್ಲಿ ಕೂಡ ಆನೆಗಳ ಸಂಖ್ಯೆ ಏರಿಕೆ ಕಂಡು ಬಂದಿದೆ. ಆನೆ ಮಾನವ ಸಂಘರ್ಷಕ್ಕೆ ನಾವುಗಳೇ ಪರಿಹಾರ ಹುಡುಕಬೇಕಾಗಿದೆ. ಅವುಗಳ ಸಂರಕ್ಷಣೆ ನಮ್ಮಿಂದಲೇ ಆಗಬೇಕಾಗಿದೆ ಎಂದರು.
ಕಾಡಾನೆಗಳಿಗೆ ಪ್ರತಿನಿತ್ಯ ಅಂದಾಜು 350 ಕೆಜಿ ಪ್ರಮಾಣದ ಆಹಾರ, ನೀರು ಮತ್ತು ಅವುಗಳ ಓಡಾಟಕ್ಕೆ ಅಗತ್ಯವಿರುವ 50 ರಿಂದ 60 ಕಿಲೋಮೀಟರ್ ಸುತ್ತಳತೆಯ ಅರಣ್ಯದ ಅಗತ್ಯತೆ ಇದೆ ಎಂದರು. ಆನೆ ಸೂಕ್ಷ್ಮ ಪ್ರಾಣಿಯಾಗಿದ್ದು ಅದರ ಸಂರಕ್ಷಣೆಗೆ ಪ್ರತಿಯೊಬ್ಬರೂ ಕೈಜೋಡಿಸಬೇಕಾಗಿದೆ ಎಂದರು. ಇದೇ ಸಂದರ್ಭ ಮಾತನಾಡಿದ ಅವರು ಶಿಬಿರದಲ್ಲಿರುವ ಎಲ್ಲಾ ಆನೆಗಳು ಆರೋಗ್ಯಕರವಾಗಿದೆ ಎಂದು ಪ್ರತಿಕ್ರಿಯೆ ವ್ಯಕ್ತಪಡಿಸಿದರು.
Related Articles
Advertisement
ಈ ಸಂದರ್ಭ ಕೂಡಿಗೆ ಸೈನಿಕ ಶಾಲೆಯ ವಿದ್ಯಾರ್ಥಿಗಳಿಗೆ ವನ್ಯಜೀವಿ ತಜ್ಞರಾದ ಡಾ ಚಿಟ್ಟಿಯಪ್ಪ ಆನೆಗಳ ಬಗ್ಗೆ ಉಪನ್ಯಾಸ ನೀಡಿದರು. ಈ ಸಂದರ್ಭದಲ್ಲಿ ಸೋಮವಾರಪೇಟೆ ಅರಣ್ಯ ಸಹಾಯಕ ಸಂರಕ್ಷಣಾಧಿಕಾರಿ ಎ. ಎ ಗೋಪಾಲ್, ಕುಶಾಲನಗರ ವಲಯ ಅರಣ್ಯಾಧಿಕಾರಿ ಕೆ ವಿ ಶಿವರಾಮ್, ವನ್ಯಜೀವಿ ವಲಯದ ಅಧಿಕಾರಿಗಳಾದ ವಿನೋದ್ ಬಾಬು, ಕೊಟ್ರೇಶ್, ಉಪವಲಯ ಅರಣ್ಯ ಅಧಿಕಾರಿಗಳಾದ ಅನಿಲ್ ಡಿಸೋಜಾ, ರಂಜನ್, ದೇವಯ್ಯ, ವಿಲಾಸ್,, ಶ್ರವಣ್ ಕುಮಾರ್, ಚೇತನ್ ಮಾವುತರು ಕವಾಡಿಗರು ಮತ್ತು ಸಿಬ್ಬಂದಿಗಳು ಇದ್ದರು. ಆನೆ ದಿನಾಚರಣೆ ಅಂಗವಾಗಿ ಶಿಬಿರದ ಆನೆಗಳನ್ನು ಸಿಂಗರಿಸಲಾಗಿತ್ತು.