ನಮ್ಮ ದೈನಂದಿನ ಜೀವನದಲ್ಲಿ ಎದುರಿಸುವ ಅತಿ ಸಾಮಾನ್ಯವಾದ ದೀರ್ಘಕಾಲದ ಕಾಯಿಲೆಗಳಲ್ಲಿ ಮಧುಮೇಹವೂ ಒಂದು. ಮಧುಮೇಹ ರೋಗಿಗಳನ್ನು ವೈದ್ಯಕೀಯವಾಗಿ ಎರಡು ವಿಧಗಳಾಗಿ ವಿವರಿಸಲಾಗಿದೆ: ಟೈಪ್-1 ಡಯಾಬಿಟಿಸ್ ಮೆಲ್ಲಿಟಸ್ (ಟಿ1ಡಿಎಂ) ಮತ್ತು ಟೈಪ್-2 ಡಯಾಬಿಟಿಸ್ ಮೆಲ್ಲಿಟಸ್ (ಟಿ2ಡಿಎಂ). ʻಟಿ1ಡಿಎಂʼ ವಿಧದ ಮಧುಮೇಹದಲ್ಲಿ, ದೇಹದಲ್ಲಿ ಇನ್ಸುಲಿನ್ ತೀವ್ರ ಕೊರತೆ ಕಾಣಿಸುತ್ತದೆ. ಆದರೆ ʻಟಿ2ಡಿಎಂʼ ವಿಧದಲ್ಲಿ ಇನ್ಸುಲಿನ್ ಪ್ರತಿರೋಧಕತೆಯಿಂದಾಗಿ, ದೇಹದಲ್ಲಿ ʻಇನ್ಸುಲಿನ್ʼ ಸಾಕಷ್ಟು ಪರಿಣಾಮಕಾರಿಯಾಗಿ ಕೆಲಸ ಮಾಡುವುದಿಲ್ಲ. ಇದರ ಜೊತೆಗೆ, ಮಧುಮೇಹದ ಇನ್ನೂ ಹಲವಾರು ರೂಪಗಳಿವೆ, ಅವುಗಳನ್ನು ಕೆಳಗೆ ವಿವರಿಸಲಾಗಿದೆ.
ಟೈಪ್-1 ಡಯಾಬಿಟಿಸ್ ಮೆಲ್ಲಿಟಸ್
ʻಇನ್ಸುಲಿನ್ʼ ಮತ್ತು ಇತರ ಹಾರ್ಮೋನುಗಳ ಮೂಲಕ ರಕ್ತದಲ್ಲಿನ ಸಕ್ಕರೆ ಪ್ರಮಾಣವು 80-140 ಮಿಗ್ರಾಂ / ಡಿಎಲ್ (mg/dl) ಮಟ್ಟದ ಕಿರಿದಾದ ವ್ಯಾಪ್ತಿಯಲ್ಲಿ ನಿರ್ವಹಿಸಲ್ಪಡುತ್ತದೆ. ರೋಗಿಯು ತಿನ್ನುವಾಗ ಅಥವಾ ಸಕ್ಕರೆ ಅಂಶವು ಹೆಚ್ಚಾದಾಗ, ಮೇದೋಜ್ಜೀರಕ ಗ್ರಂಥಿಯು ʻಇನ್ಸುಲಿನ್ʼ ಬಿಡುಗಡೆಯನ್ನು ಹೆಚ್ಚಿಸುತ್ತದೆ. ರಕ್ತದಲ್ಲಿರುವ ʻಗ್ಲೂಕೋಸ್ʼ (ಸಕ್ಕರೆ ಅಂಶ) ಅನ್ನು ಜೀವಕೋಶಗಳ ಒಳಗೆ ಕಳುಹಿಸಲು ʻಇನ್ಸುಲಿನ್ʼ ಕೀಲಿಯಂತೆ ಸಹಾಯ ಮಾಡುತ್ತದೆ. ಆ ಮೂಲಕ ರಕ್ತದಲ್ಲಿನ ಗ್ಲೂಕೋಸ್ ಮಟ್ಟವನ್ನು ಕಡಿಮೆ ಮಾಡುತ್ತದೆ. ʻಟೈಪ್-1ʼ ಮಧುಮೇಹ ರೋಗಿಗಳಲ್ಲಿ, ʻಇನ್ಸುಲಿನ್ʼ ಉತ್ಪಾದನೆ ಮತ್ತು ಬಿಡುಗಡೆ ಸಂಭವಿಸುವುದಿಲ್ಲ, ಇದರಿಂದಾಗಿ ಅವರ ರಕ್ತದಲ್ಲಿನ ಸಕ್ಕರೆ ಹೆಚ್ಚಾಗಿರುತ್ತದೆ. ʻಟಿ1ಡಿಎಂʼ ಹೊಂದಿರುವ ರೋಗಿಗಳು ಈ ಕೆಳಗಿನ ಲಕ್ಷಣಗಳನ್ನು ಹೊಂದಿರುತ್ತಾರೆ:
1 ಸಂಪೂರ್ಣ ಇನ್ಸುಲಿನ್ ಕೊರತೆ
2 ಕಿರಿಯ ವಯಸ್ಸಿನಲ್ಲೇ ರೋಗ ಪತ್ತೆ
3 ಸಕ್ಕರೆ ನಿಯಂತ್ರಣಕ್ಕಾಗಿ ಮೌಖಿಕ ಮಾತ್ರೆಗಳಿಗೆ ಸ್ಪಂದನೆ ಇಲ್ಲದಿರುವುದು- ಇನ್ಸುಲಿನ್ ಅಗತ್ಯತೆ
4 ಅಧಿಕ ಸಕ್ಕರೆಯಿಂದಾಗಿ ʻಡಯಾಬಿಟಿಕ್ ಕೀಟೋಅಸಿಡೋಸಿಸ್ʼ (ಡಿಕೆಎ) ಎಂದು ಕರೆಯಲ್ಪಡುವ ಗಂಭೀರ ಸಮಸ್ಯೆ ಆಗಾಗ್ಗೆ ಕಾಣಿಸಿಕೊಳ್ಳಬಹುದು
5 ಇದು ಸ್ವಯಂ-ಪ್ರತಿರಕ್ಷಣಾ ಕಾಯಿಲೆ – ಇಲ್ಲಿ ನಮ್ಮ ದೇಹವು ನಮ್ಮ ದೇಹದ ಮೇಲೆಯೇ ದಾಳಿ ಮಾಡುವ ಪ್ರತಿಕಾಯಗಳನ್ನು ಉತ್ಪಾದಿಸುತ್ತದೆ. ಆದ್ದರಿಂದ ʻಆಂಟಿ-ಜಿಎಡಿʼ ʻಆಂಟಿ-ಇನ್ಸುಲಿನ್ʼ ಪ್ರತಿಕಾಯದಂತಹ ಸ್ವಯಂ-ಪ್ರತಿಕಾಯಗಳು ದೇಹದಲ್ಲಿ ಕಾಣಿಸಿಕೊಳ್ಳಬಹುದು.
ಟೈಪ್-2 ಡಯಾಬಿಟಿಸ್ ಮೆಲ್ಲಿಟಸ್
ʻಟಿ2ಡಿಎಂʼ – ಇದು ʻಇನ್ಸುಲಿನ್ʼ ಪ್ರತಿರೋಧದಿಂದ ಉಂಟಾಗುವ ಸಮಸ್ಯೆಯಾಗಿದೆ. ಈ ಪ್ರಕರಣದಲ್ಲಿ, ದೇಹದಲ್ಲಿ ಉತ್ಪತ್ತಿಯಾಗುವ ʻಇನ್ಸುಲಿನ್ʼ ಪರಿಣಾಮಕಾರಿಯಾಗಿರುವುದಿಲ್ಲ. ಆದ್ದರಿಂದ ದೈನಂದಿನ ಅಗತ್ಯಗಳಿಗಾಗಿ ದೇಹಕ್ಕೆ ಹೆಚ್ಚಿನ ʻಇನ್ಸುಲಿನ್ʼ ಅಗತ್ಯವಿರುತ್ತದೆ, ಈ ರೋಗಿಗಳು ಆರಂಭದಲ್ಲಿ ಮೌಖಿಕ ಔಷಧಗಳಿಗೆ ಸ್ಪಂದಿಸುತ್ತಾರೆ. ಆದರೆ ನಂತರ ʻಇನ್ಸುಲಿನ್ʼ ತೆಗೆದುಕೊಳ್ಳುವುದು ಅಗತ್ಯವಾಗಬಹುದು. ʼಟೈಪ್-2’ ಮಧುಮೇಹವುಳ್ಳ ರೋಗಿಗಳು ಸಾಮಾನ್ಯವಾಗಿ ಬೊಜ್ಜು, ಕುಟುಂಬದ ರೋಗ ಇತಿಹಾಸ ಮತ್ತು ಕಳಪೆ ಜೀವನಶೈಲಿಯನ್ನು ಹೊಂದಿರುತ್ತಾರೆ. ʻಟೈಪ್-2ʼ ಮಧುಮೇಹದ ಸಾಮಾನ್ಯವಾದ ಲಕ್ಷಣಗಳೆಂದರೆ:
1 ಇನ್ಸುಲಿನ್ ಪ್ರತಿರೋಧ
2 ಹಿರಿಯ ವಯಸ್ಸಿನಲ್ಲಿ ಕಾಣಿಸಿಕೊಳ್ಳುತ್ತದೆ
3 ಬೊಜ್ಜು ಮತ್ತು ಕಳಪೆ ಜೀವನಶೈಲಿ ಕಾರಣ
ಮೇದೋಜ್ಜೀರಕ (ಪ್ಯಾಂಕ್ರಿಯಾಟಿಕ್) ಮಧುಮೇಹ
ಮೇದೋಜ್ಜೀರಕ ಗ್ರಂಥಿಯಿಂದ ʻಇನ್ಸುಲಿನ್ʼ ಸೃಷ್ಟಿಯಾಗುತ್ತದೆ; ಆದ್ದರಿಂದ ದೀರ್ಘಕಾಲದ ʻಪ್ಯಾಂಕ್ರಿಯಾಟೈಟಿಸ್ʼ ನಂತಹ ಕಾಯಿಲೆಗಳಿಂದಾಗಿ ಮೇದೋಜ್ಜೀರಕ ಗ್ರಂಥಿಯ ಮೇಲೆ ಪರಿಣಾಮ ಉಂಟಾದಾಗ, ಅಂತಹ ರೋಗಿಗಳಲ್ಲಿ ಮಧುಮೇಹ ಕಾಣಿಸಿಕೊಳ್ಳಬಹುದು. ಅಂತಹ ಸ್ಥಿತಿಯನ್ನು ದೀರ್ಘಕಾಲದ ʻಫೈಬ್ರೊ ಕ್ಯಾಲ್ಸಿಫಿಕ್ ಪ್ಯಾಂಕ್ರಿಯಾಟಿಕ್ ಮಧುಮೇಹʼ ಎಂದು ಕರೆಯಲಾಗುತ್ತದೆ.
MODY (ಮೊಡಿ)– ಯೌವನದ ಆರಂಭದಲ್ಲಿ ಕಾಣಿಸಿಕೊಳ್ಳುವ ಮಧುಮೇಹ
ಈ ರೀತಿಯ ಮಧುಮೇಹದಲ್ಲಿ ರೋಗಿಗಳು ಬಹಳ ಚಿಕ್ಕ ವಯಸ್ಸಿನಲ್ಲಿಯೇ ಮಧುಮೇಹದಿಂದ ಬಳಲುತ್ತಿರುತ್ತಾರೆ. ಇದನ್ನು ಹೆಚ್ಚಾಗಿ ʻಟೈಪ್-1ʼ ಮಧುಮೇಹ ಎಂದು ತಪ್ಪಾಗಿ ರೋಗನಿರ್ಣಯ ಮಾಡುವ ಸಾಧ್ಯತೆ ಇರುತ್ತದೆ. ಆದರೆ ಇದು ʻಟೈಪ್-1ʼ ಮಧುಮೇಹಕ್ಕಿಂತಲೂ ಭಿನ್ನವಾದುದು. ಈ ಸಮಸ್ಯೆಯುಳ್ಳ ರೋಗಿಗಳು ಬಾಯಿಯ ಮೂಲಕ ತೆಗೆದುಕೊಳ್ಳುವ ಮಧುಮೇಹ ತಡೆ ಔಷಧಗಳಿಗೆ ಸ್ಪಂದಿಸುತ್ತಾರೆ. ಅವರು ಕನಿಷ್ಠ 3 ತಲೆಮಾರುಗಳಿಂದ ಬಹಳ ಬಲವಾದ ಕುಟುಂಬ ಇತಿಹಾಸವನ್ನು ಹೊಂದಿರುತ್ತಾರೆ. ಅವರಲ್ಲಿ 50% ಕ್ಕಿಂತ ಹೆಚ್ಚು ಜನರು ಮಧುಮೇಹವನ್ನು ಹೊಂದಿರುತ್ತಾರೆ. ಈ ಮಧುಮೇಹವು ಆನುವಂಶಿಕವಾದುದು ಎಂದು ಅಧ್ಯಯನಗಳಿಂದ ದೃಢಪಟ್ಟಿದೆ.
LADA (ಲಾಡಾ)- (ವಯಸ್ಕರ ಸುಪ್ತ ಸ್ವಯಂ-ಪ್ರತಿರಕ್ಷಣಾ ಮಧುಮೇಹ)
ಈ ರೀತಿಯ ಮಧುಮೇಹದಲ್ಲಿ ರೋಗಿಗಳು ಆರಂಭದಲ್ಲಿ ʻಟೈಪ್-2ʼ ಮಧುಮೇಹಿಗಳಂತೆ ವರ್ತಿಸುತ್ತಾರೆ, ಆದರೆ ಮೊದಲ 5 ವರ್ಷಗಳಲ್ಲಿ ಅವರ ವರ್ತನೆ ಅಥವಾ ರೋಗ ಲಕ್ಷಣವು ಇನ್ಸುಲಿನ್ ಅಗತ್ಯವಿರುವ ʻಟೈಪ್-1’ ಮಧುಮೇಹಿಗಳಂತೆ ಬದಲಾಗುತ್ತದೆ.
ದ್ವಿತೀಯ ಮಧುಮೇಹ (ಸೆಕೆಂಡರಿ ಡಯಾಬಿಟಿಸ್)
ʻಕುಶಿಂಗ್ ಸಿಂಡ್ರೋಮ್ʼ (ಅಧಿಕ ಸ್ಟೀರಾಯ್ಡ್ಗಳು) ಅಥವಾ ʻಆಕ್ರೊಮೆಗಾಲಿʼ (ಅಧಿಕ ಬೆಳವಣಿಗೆಯ ಹಾರ್ಮೋನ್) ಅಥವಾ ʻಥೈರಾಯ್ಡ್ʼ ಅಸಮತೋಲನದಂತಹ ಇತರ ಹಾರ್ಮೋನುಗಳ ಸಮಸ್ಯೆಗಳಿಂದಾಗಿ ಈ ಬಗೆಯ ಮಧುಮೇಹ ಕಾಣಿಸಿಕೊಳ್ಳಬಹುದು. ಕೆಲವೊಮ್ಮೆ ಇತರ ಕಾಯಿಲೆಗಳಿಗೆ ಔಷಧವಾಗಿ ಬಳಸುವ ʻಸ್ಟೀರಾಯ್ಡ್ʼಗಳು ರಕ್ತದಲ್ಲಿನ ಸಕ್ಕರೆಯನ್ನು ಹೆಚ್ಚಿಸಿ ಮಧುಮೇಹಕ್ಕೆ ಕಾರಣವಾಗಬಹುದು. ಸಾಮಾನ್ಯವಾಗಿ ಮುಖ್ಯ ಕಾಯಿಲೆಗೆ ಚಿಕಿತ್ಸೆ ನೀಡಿದ ಬಳಿಕ ಅಥವಾ ʻಸ್ಟೀರಾಯ್ಡ್ʼ ಅನ್ನು ಕಡಿಮೆ ಮಾಡಿದ ನಂತರ ಮಧುಮೇಹ ಸಹ ಇಳಿಮುಖವಾಗುತ್ತದೆ.
ಗರ್ಭಾವಸ್ಥೆಯ ಮಧುಮೇಹ
ಸಾಮಾನ್ಯ ಗರ್ಭಾವಸ್ಥೆಯಲ್ಲಿ ರಕ್ತದಲ್ಲಿ ಸಕ್ಕರೆ ಅಂಶ ಹೆಚ್ಚಾಗಬಹುದು. ಹೀಗಾದಲ್ಲಿ ಇದು ತಾಯಿ ಮತ್ತು ಮಗುವಿಗೆ ಹಾನಿ ಉಂಟು ಮಾಡಬಹುದು. ಆದ್ದರಿಂದ ಈ ರೋಗಿಗಳಿಗೆ ರೋಗನಿರ್ಣಯ ಮತ್ತು ಚಿಕಿತ್ಸೆಯ ಮಾನದಂಡಗಳು ಕ್ಲಿಷ್ಟವಾಗಿರುತ್ತವೆ. ಸಾಮಾನ್ಯವಾಗಿ ಈ ರೋಗಿಗಳಿಗೆ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಆಹಾರ ಸೇವನೆಗೆ ಮುನ್ನ ʻ95 ಮಿಗ್ರಾಂ/ಡಿಎಲ್ʼಗಿಂತ ಕಡಿಮೆ (