Advertisement

World Cup Qualifiers ಹಾಕಿ: ಜಪಾನ್‌ ವಿರುದ್ಧ ಭಾರತಕ್ಕೆ 35-1 ಗೋಲು ಜಯ

11:17 PM Aug 31, 2023 | Team Udayavani |

ಸಲಾಲ: ಭಾರತ ತಂಡವು ಗುರುವಾರ ನಡೆದ ಏಷ್ಯನ್‌ ಹಾಕಿ ಫೈವ್ಸ್‌ ವಿಶ್ವಕಪ್‌ ಅರ್ಹತಾ ಕೂಟದ ಪಂದ್ಯದಲ್ಲಿ ಜಪಾನ ತಂಡವನ್ನು 35-1 ಗೋಲುಗಳಿಂದ ಸೋಲಿಸಿ ಸೆಮಿಫೈನಲ್‌ ಹಂತಕ್ಕೇರಿದೆ. ಈ ಮೊದಲು ನಡೆದ ಪಂದ್ಯದಲ್ಲಿ ಭಾರತವು ಮಲೇಷ್ಯವನ್ನು 7-5 ಗೋಲುಗಳಿಂದ ಸೋಲಿಸಿತ್ತು.

Advertisement

ದಿನದ ಎರಡು ಪಂದ್ಯಗಳ ಗೆಲುವಿನಿಂದ ಭಾರತ ಎಲೈಟ್‌ ಬಣದಲ್ಲಿ 12 ಅಂಕಗಳೊಂದಿಗೆ ದ್ವಿತೀಯ ಸ್ಥಾನ ಪಡೆದು ಸೆಮಿಫೈನಲಿಗೆ ನೇರ ಪ್ರವೇಶ ಪಡೆದಿದೆ.

ಜಪಾನ್‌ ವಿರುದ್ಧದ ಪಂದ್ಯದಲ್ಲಿ ಭಾರತದ ಮಣಿಂದರ್‌ 10 ಗೋಲು ಹೊಡೆದರೆ ಮೊಹಮ್ಮದ್‌ ರಹೀಲ್‌ ಏಳು ಗೋಲು ಹೊಡೆದರು. ಪವನ್‌ ರಾಜ್‌ಭರ್‌ ಮತ್ತು ಗುರುಜೋತ್‌ ಸಿಂಗ್‌ ತಲಾ ಐದು ಗೋಲು ಹೊಡೆದಿದ್ದರೆ ಸುಖ್ವಿಂದರ್ ನಾಲ್ಕು ಗೋಲು ಹೊಡೆದರು.

Advertisement

Udayavani is now on Telegram. Click here to join our channel and stay updated with the latest news.

Next