Advertisement

ಕಿವೀಸ್‌ ಕೆಡವಲು ಕೊಹ್ಲಿ ಪಡೆ ಸಜ್ಜು

02:15 AM Jul 08, 2019 | Sriram |

ವಿಶ್ವಕಪ್‌ ಮಹಾ ಸಮರದ ಲೀಗ್‌ ಹಂತದ ಮ್ಯಾಚ್‌ಗಳೆಲ್ಲ ಮುಗಿದು, ಭಾರತ ಪಾಯಿಂಟ್ಸ್‌ ಟೇಬಲ್ ನಲ್ಲಿ ಅಗ್ರಸ್ಥಾನಿಯಾಗಿ ಸೆಮಿ ಫೈನಲ್‌ ಪ್ರವೇಶಿಸಿದೆ. ಮಂಗಳವಾರ ಮ್ಯಾಂಚೆಸ್ಟರ್ ನಲ್ಲಿ ಮೊದಲ ಸೆಮಿಫೈನಲ್‌. ಆರಂಭದಲ್ಲಿ ಉತ್ತಮ ಹುರುಪು ತೋರಿ, ಬಳಿಕ ಲಯ ಕಳೆದುಕೊಂಡಿ ರುವ ನ್ಯೂಜಿಲ್ಯಾಂಡ್‌ ಎದುರಾಳಿ. ಭಾರತದ ಬಲಿಷ್ಠ ಪಡೆಗೆ ಕಿವೀಸ್‌ ಪಡೆ ಸಾಟಿಯಾಗಬಲ್ಲದೇ ಎಂಬ ಕುತೂಹಲ ಎಲ್ಲರಲ್ಲೂ ಮೂಡಿದೆ.

Advertisement

ನ್ಯೂಜಿಲ್ಯಾಂಡ್‌
ಕಳೆದ ಬಾರಿಯ ವಿಶ್ವಕಪ್‌ ನಲ್ಲಿ ರನ್ನರ್‌ಅಪ್‌ ಆಗಿದ್ದ ನ್ಯೂಜಿ ಲ್ಯಾಂಡ್‌ ಮತ್ತೂಮ್ಮೆ ಫೈನಲ್‌ ಪ್ರವೇಶಿಸಲು ತಯಾರಿ ನಡೆ ಸಿದೆ. ಇಲ್ಲಿ ನಾಯಕ ಕೇನ್‌ ವಿಲಿಯಮ್ಸನ್‌ ಮತ್ತು ರಾಸ್‌ ಟೇಲರ್‌ ಅವರ ಬ್ಯಾಟಿಂಗ್‌ ಬಲ ವಿದೆ. ವಿಶೇಷವೆಂದರೆ ಇಡೀ ವಿಶ್ವಕಪ್‌ನಲ್ಲಿ ಇವರಿಬ್ಬರೇ ಸ್ಥಿರ ಪ್ರದರ್ಶನ ನೀಡಿರುವುದು. ಬೌಲಿಂಗ್‌ನಲ್ಲಿ ಟ್ರೆಂಟ್‌ ಬೌಲ್ಟ್, ಫ‌ರ್ಗ್ಯುಸನ್‌ ಬಲವಿದೆ. ಆದರೆ ಆರಂಭಿಕರ ವೈಫ‌ಲ್ಯ ಕಾಡುತ್ತಿದೆ.

ವಿಶ್ವಕಪ್‌ ಹಾದಿ
ಶ್ರೀಲಂಕಾ,ಬಾಂಗ್ಲಾ,ಅಫ್ಘಾನಿಸ್ಥಾನ,ದಕ್ಷಿಣ ಆಫ್ರಿಕ, ವಿಂಡೀಸ್‌ ವಿರುದ್ಧ ಗೆದ್ದಿದೆ.ಪಾಕಿಸ್ಥಾನ,ಆಸ್ಟ್ರೇ ಲಿಯ ಮತ್ತು ಇಂಗ್ಲೆಂಡ್‌ ವಿರುದ್ಧ ಸೋತಿದೆ.

ಬ್ಯಾಟಿಂಗ್‌
481 ರನ್‌ ಕೇನ್‌ ವಿಲಿಯಮ್ಸನ್‌
261 ರನ್‌ ರಾಸ್‌ ಟೇಲರ್‌

ಬೌಲಿಂಗ್‌
17 ವಿಕೆಟ್‌ ಲಾಕಿ ಫ‌ರ್ಗ್ಯುಸನ್‌
15 ವಿಕೆಟ್‌ ಟ್ರೆಂಟ್‌ ಬೌಲ್ಟ್

Advertisement

ಭಾರತ
ಟ್ರೋಫಿ ಮೇಲೆ ಕಣ್ಣಿಟ್ಟಿರುವ ಭಾರತ ಎಲ್ಲ ವಿಭಾಗಗಳಲ್ಲೂ ಉತ್ತಮವಾದ ಆಟಗಾರರನ್ನೇ ಹೊಂದಿದೆ. ಬ್ಯಾಟಿಂಗ್‌ನಲ್ಲಿ ರೋಹಿತ್‌ ಶರ್ಮ,ವಿರಾಟ್‌ ಕೊಹ್ಲಿ,ಕೆ.ಎಲ್‌.ರಾಹುಲ್‌ ಪ್ರಚಂಡ ಫಾರ್ಮ್ ನಲ್ಲಿದ್ದಾರೆ. ಬೌಲಿಂಗ್‌ನಲ್ಲಿ ಬುಮ್ರಾ, ಭುವನೇಶ್ವರ್‌, ಚಹಲ್‌ ಉತ್ತಮ ದಾಳಿ ಸಂಘಟಿಸುತ್ತಿದ್ದಾರೆ. ಧೋನಿಯ ಅನುಭವವೂ ತಂಡದ ಮೇಲಿದೆ. ಆದರೂ ಮಧ್ಯಮ ಕ್ರಮಾಂಕದ ಬ್ಯಾಟಿಂಗ್‌ ನಲ್ಲಿ ಕೊಂಚ ಸಮಸ್ಯೆ ಇದೆ.

ವಿಶ್ವಕಪ್‌ ಹಾದಿ
ದಕ್ಷಿಣ ಆಫ್ರಿಕಾ, ಆಸ್ಟ್ರೇಲಿಯ, ಪಾಕಿಸ್ಥಾನ, ಅಫ್ಘಾನಿ ಸ್ಥಾನ, ವಿಂಡೀಸ್‌, ಬಾಂಗ್ಲಾ ಮತ್ತು ಶ್ರೀಲಂಕಾ ವಿರುದ್ಧ ಗೆದ್ದಿದ್ದರೆ, ಇಂಗ್ಲೆಂಡ್‌ ವಿರುದ್ಧ ಸೋಲು ಮತ್ತು ನ್ಯೂಜಿಲ್ಯಾಂಡ್‌ ವಿರುದ್ಧದ ಪಂದ್ಯ ಮಳೆಯಿಂದ ರದ್ದಾಗಿದೆ.

ಬ್ಯಾಟಿಂಗ್‌
647 ರನ್‌ ರೋಹಿತ್‌ ಶರ್ಮ
441 ರನ್‌ ವಿರಾಟ್‌ ಕೊಹ್ಲಿ

ಬೌಲಿಂಗ್‌
17 ವಿಕೆಟ್‌ ಜಸ್‌ ಪ್ರೀತ್‌ ಬುಮ್ರಾ
14 ವಿಕೆಟ್‌ ಮೊಹಮ್ಮದ್‌ ಶಮಿ

Advertisement

Udayavani is now on Telegram. Click here to join our channel and stay updated with the latest news.

Next