Advertisement
ಸವಿತಾ ಅಮೋಘ ಕೀಪಿಂಗ್ ದ್ವಿತೀಯ ಕ್ವಾರ್ಟರ್‌ನಲ್ಲೂ ಇಂಗ್ಲೆಂಡ್ 3 ಪೆನಾಲ್ಟಿ ಕಾರ್ನರ್ ಅವಕಾಶ ಪಡೆಯಿ ತಾದರೂ ಗೋಲು ದಾಖಲಾಗಲಿಲ್ಲ. ಈ ಅವಧಿಯಲ್ಲಿ ಸವಿತಾ ಅವರ ಗೋಲ್ ಕೀಪಿಂಗ್ ಅಮೋಘ ಮಟ್ಟದಲ್ಲಿತ್ತು. 25ನೇ ನಿಮಿಷದಲ್ಲಿ ನೇಹಾ ಆಕರ್ಷಕ ಫೀಲ್ಡ್ ಗೋಲ್ ಮೂಲಕ ಭಾರತದ ಪಾಳೆಯದಲ್ಲಿ ಸಂಭ್ರಮ ಉಕ್ಕಿಸಿದರು. ಇಂಗ್ಲೆಂಡ್ ರೆಫರಲ್ ಮೊರೆ ಹೋಯಿ ತಾದರೂ ತೀರ್ಪು ಭಾರತದ ಪರವಾಗಿಯೇ ಬಂತು. ವಿರಾಮದ ವೇಳೆ ಭಾರತ 1-0 ಮುನ್ನಡೆಯಲ್ಲಿತ್ತು.
3ನೇ ಕ್ವಾರ್ಟರ್‌ನಲ್ಲಿ ಅಲೆಕ್ಸ್ ಡಾನ್ಸನ್ ಮುನ್ನುಗ್ಗಿ ಬಂದಾಗಲೂ ಗೋಲಿ ಸವಿತಾ ಭಾರತವನ್ನು ಬಚಾಯಿಸಿದರು. ಆದರೆ ಕೊನೆಯ ಕ್ವಾರ್ಟರ್‌ನಲ್ಲಿ ಓವ್‌ಸ್ಲಿ ಹೊಡೆತ ವನ್ನು ತಡೆಯಲು ಅವರಿಂದಾಗಲಿಲ್ಲ. ಭಾರತ ತನ್ನ 2ನೇ ಲೀಗ್ ಪಂದ್ಯವನ್ನು ಜು. 26ರಂದು ಅಯರ್‌ಲ್ಯಾಂಡ್ ವಿರುದ್ಧ ಆಡಲಿದೆ. ಪೆನಾಲ್ಟಿ ಹೊಡೆತಗಳಿಗೆ ತಡೆ
ಇಂಗ್ಲೆಂಡ್ ಆರಂಭದಿಂದಲೇ ಆಕ್ರಮಣಕಾರಿ ಆಟದ ಮೂಲಕ ಮೇಲುಗೈ ಸಾಧಿಸಿತು. ಭಾರತ ಅಮೋಘ ರಕ್ಷಣಾತ್ಮಕ ಆಟವಾಡಿ ಆತಿಥೇಯರಿಗೆ ತಡೆಯೊಡ್ಡಿತು. ಹೀಗಾಗಿ ಇಂಗ್ಲೆಂಡಿಗೆ ಮೊದಲ ಕ್ವಾರ್ಟರ್‌ನಲ್ಲಿ ಲಭಿಸಿದ ಎರಡೂ ಪೆನಾಲ್ಟಿ ಕಾರ್ನರ್‌ಗಳು ವ್ಯರ್ಥವಾದವು.