Advertisement

ವಿಶ್ವಕಪ್‌ ಜಿಮ್ನಾಸ್ಟಿಕ್‌:ವಾಲ್ಟ್ ನಲ್ಲಿ ದೀಪಾ ಕರ್ಮಾಕರ್‌ ಫೈನಲ್‌ಗೆ

06:40 AM Nov 24, 2018 | Team Udayavani |

ಕಾಟºಸ್‌ (ಜರ್ಮನಿ): ಇಲ್ಲಿ ನಡೆಯುತ್ತಿರುವ ವಿಶ್ವಕಪ್‌ ಆರ್ಟಿಸ್ಟಿಕ್‌ ಜಿಮ್ನಾಸ್ಟಿಕ್‌ ಕೂಟದ ವಾಲ್ಟ್ ಸ್ಪರ್ಧೆಯಲ್ಲಿ ದೀಪಾ ಕರ್ಮಾಕರ್‌ ಫೈನಲ್‌ಗೆ ಪ್ರವೇಶ ಪಡೆದಿದ್ದಾರೆ. ಇದರೊಂದಿಗೆ ಚಿನ್ನ ಗೆಲ್ಲುವ ಭರವಸೆ ಮೂಡಿಸಿದ್ದಾರೆ. ಇದೇ ವಿಭಾಗದಲ್ಲಿ ಸ್ಪರ್ಧಿಸಿದ್ದ ಬಿ.ಅರುಣಾ ರೆಡ್ಡಿ ಗಾಯದ ಕಾರಣದಿಂದ ಸ್ಪರ್ಧೆಯಿಂದ ಹಿಂದೆ ಸರಿದಿದ್ದಾರೆ. ಇದರಿಂದ ಭಾರತ ಸ್ವಲ್ಪ ಮಟ್ಟಿಗೆ ನಿರಾಶೆ ಅನುಭವಿಸುವಂತಾಯಿತು. ಅರುಣಾ ಈ ಹಿಂದೆ ಮೆಲ್ಬರ್ನ್ ವಿಶ್ವಕಪ್‌ ಕೂಟದಲ್ಲಿ ಕಂಚಿನ ಪದಕ ಗೆದ್ದಿದ್ದನ್ನು ಸ್ಮರಿಸಿಕೊಳ್ಳಬಹುದು.

Advertisement

ಗಾಯದ ಬಳಿಕ ಚೇತರಿಸಿಕೊಂಡ ದೀಪಾ: ದೀಪಾ ಕರ್ಮಾಕರ್‌ ಇತ್ತೀಚೆಗಷ್ಟೆ  ಗಾಯದಿಂದ ಚೇತರಿಸಿಕೊಂಡು ಸ್ಪರ್ಧೆಗೆ ವಾಪಸ್‌ ಆಗಿದ್ದರು. ಆತ್ಮವಿಶ್ವಾಸಕದಿಂದ ಕಣಕ್ಕೆ ಇಳಿದಿದ್ದ ಅವರು ವಾಲ್ಟ್ ವಿಭಾಗದಲ್ಲಿ ಶ್ರೇಷ್ಠ ನಿರ್ವಹಣೆ ನೀಡಿದರು. ಈ ವಿಭಾಗದ ಸ್ಪರ್ಧೆಯಲ್ಲಿ ಒಟ್ಟಾರೆ 16 ಮಂದಿ ವಿವಿಧ ದೇಶಗಳ ಸ್ಪರ್ಧಿಗಳಿದ್ದರು. ಇವರಲ್ಲಿ 14.100 ಅಂಕ ಪಡೆದ ದೀಪಾ ಕರ್ಮಾಕರ್‌ 6ನೇ ಸ್ಥಾನಿಯಾಗಿ ಸ್ಪರ್ಧೆ ಮುಗಿಸಿಕೊಂಡು ಫೈನಲ್‌ಗೆ ಅರ್ಹತೆ ಗಿಟ್ಟಿಸಿಕೊಂಡರು. ಪುರುಷರ ವಿಭಾಗದಲ್ಲಿ ರಾಕೇಶ್‌ ಪತ್ರಾ ಹಾಗೂ ಆಶೀಷ್‌ ಸೋಲು ಅನುಭವಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next