Advertisement
ಫುಟ್ಬಾಲ್ ಸರಳವಾದ ಆಟವಾದುದರಿಂದ ಇಡೀ ಜಗತ್ತಿನಲ್ಲೇ ಜನಪ್ರಿಯವಾಗಿದೆ. ಫುಟ್ಬಾಲ್ ಫೆಡರೇಶನ್ನ ಸಮೀಕ್ಷೆ ಪ್ರಕಾರ ಜಗತ್ತಿನ 200 ಕ್ಕೂ ಹೆಚ್ಚು ರಾಷ್ಟ್ರಗಳಲ್ಲಿ ಜನರು ಫುಟ್ಬಾಲ್ನ್ನು ಆಡುತ್ತಿದ್ದಾರೆ. ಕಾಲ್ಚೆಂಡಿನ ಆಟಕ್ಕೆ 1930 ರಲ್ಲಿ ಜಾಗತಿಕ ಮನ್ನಣೆ ದೊರೆತ ನಂತರ ಇದರ ಖದರೇ ಬದಲಾಗಿದೆ. 1930 ರಲ್ಲಿ ಉರುಗ್ವೆ ದೇಶದಲ್ಲಿ ಹಲವು ಅಡೆತಡೆಗಳ ನಡುವೆ ಆರಂಭಗೊಂಡ ವಿಶ್ವಕಪ್ ಫುಟ್ಬಾಲ್ ಟೂರ್ನಿ ಮೊದಲ ಪ್ರಯತ್ನದಲ್ಲೇ ಎಲ್ಲರಿಂದಲೂ ಪ್ರಶಂಸೆಗೆ ಪಾತ್ರವಾಯಿತು. ಅಲ್ಲಿಂದ ಇಲ್ಲಿಯವರೆಗೆ 88 ವರ್ಷಗಳ ಇತಿಹಾಸದಲ್ಲಿ ಈ ಜಾಗತಿಕ ಕ್ರೀಡಾಮೇಳ 21 ಆವೃತ್ತಿಗಳನ್ನು ಕಂಡಿದೆ.
Related Articles
ವಿಶ್ವಕಪ್ ಫುಟ್ಬಾಲ್ ಬಗ್ಗೆ ಏನು ಹೇಳಿದರೂ ಅದರಲ್ಲಿ ಬ್ರೆಜಿಲ್ ಬಗ್ಗೆ ವಿಶೇಷ ಪ್ರಸ್ತಾವನೆ ಅಗತ್ಯವಾಗಿ ಬೇಕಾಗುತ್ತದೆ. ಬ್ರೆಜಿಲ್ಗೆ ಫುಟ್ಬಾಲ್ ಎನ್ನುವುದು ಮೂಲಸಂಸ್ಕೃತಿಯಾಗಿದೆ. ಮನಮೋಹಕ ನೃತ್ಯ, ಸಂಗೀತ, ಅತೀ ಸುಂದರ ನೈಸರ್ಗಿಕ ಸಿರಿ ಸಂಪತ್ತನ್ನು ಬ್ರೆಜಿಲ್ ಹೊಂದಿದ್ದರೂ ಅದು ಜಗತ್ತಿನಲ್ಲಿ ಗುರುತಿಸಿಕೊಂಡದ್ದು ಫುಟ್ಬಾಲ್ನಿಂದ ಮಾತ್ರ! ಬ್ರೆಜಿಲ್ ಎಂದರೆ ಫುಟ್ಬಾಲ್ ಎಂಬ ರೂಢಿ ಮಾತೇ ಇದೆ.
Advertisement
ಇಲ್ಲಿಯ ತನಕ 20 ವಿಶ್ವಕಪ್ ಫುಟ್ಬಾಲ್ ಟೂರ್ನಿಯಲ್ಲಿ ಪ್ರಧಾನ ಹಂತದ ಸ್ಪರ್ಧೆಯಲ್ಲಿ ಭಾಗವಹಿಸಿದ ಏಕೈಕ ತಂಡ ಬ್ರೆಜಿಲ್. ಅಷ್ಟೇ ಅಲ್ಲ, ಅದು ಇದೀಗ 21ನೆಯ ವಿಶ್ವಕಪ್ನಲ್ಲೂ ಆಡುತ್ತಿದೆ. ಆದುದರಿಂದಲೇ ವಿಶ್ವಕಪ್ ಫುಟ್ಬಾಲ್ ಎಂದಾಗಲೇ ಎಲ್ಲರ ಕಣ್ಣು ಬ್ರೆಜಿಲ್ ಮೇಲೆ ನೆಟ್ಟಿದೆ.
ಐದು ಬಾರಿ ವಿಶ್ವಕಪ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿರುವ ಬ್ರೆಜಿಲ್ ವಿಶ್ವದ ಏಕೈಕ ಫೇವರೆಟ್ ತಂಡವಾಗಿದೆ. ಅದು ಫೇವರೆಟ್ ಆಗಲು ಇಲ್ಲಿಯವರೆಗೆ ಸಾಧಿಸಿರುವ ಸಾಧನೆಯೇ ಕಾರಣವಾಗಿದೆ. 1958 ರಲ್ಲಿ ಮೊದಲ ಬಾರಿಗೆ ವಿಶ್ವಕಪ್ ಪ್ರಶಸ್ತಿ ಪಡೆಯಲು ಆರಂಭಿಸಿದ ಬ್ರೆಜಿಲ್ ನಂತರ 1962, 1970, 1994 ಮತ್ತು 2002 ರಲ್ಲಿ ವಿಶ್ವಕಪ್ ಗೆದ್ದು ಅಪೂರ್ವ ದಾಖಲೆ ಗೈದಿದೆ. ಎರಡು ಬಾರಿ ರನ್ನರ್ ಅಪ್ ಪ್ರಶಸ್ತಿಯನ್ನು ಬ್ರೆಜಿಲ್ ಪಡೆದಿತ್ತು.
ಬ್ರೆಜಿಲ್ ಖ್ಯಾತಿಗೆ ಹಲವಾರು ವಿಶ್ವ ವಿಖ್ಯಾತ ಆಟಗಾರರ ಕೊಡುಗೆಯೂ ಇದೆ. ಅವರಲ್ಲಿ ಪ್ರಮುಖರೆಂದರೆ, ಲಿಯೋನಿಡಾಸ್, ಪೀಲೆ, ಡಿಡಿ, ವಾವಾ, ಗಾರಿಂಚ, ಜೈರ್ಜಿನೊ, ಟೊಸ್ಲಾವೋ, ರೊಮಾರಿಯಾ, ರೊನಾಲ್ಡ್, ರಿವಾಲ್ಡೊ, ರೊನಾಲ್ಡಿನೊ ಹಾಗೂ ಇದೀಗ ನೇಮರ್ ! ಇಂತಹ ಖ್ಯಾತನಾಮರನ್ನು ಬೇರಾವುದೇ ರಾಷ್ಟ್ರ ಫುಟ್ಬಾಲ್ ರಂಗಕ್ಕೆ ನೀಡಿಲ್ಲ.
ವಿಶ್ವಕಪ್ ಫುಟ್ಬಾಲ್ ವೀಕ್ಷಣೆಜಗತ್ತಿನ ಅತ್ಯಧಿಕ ಮಂದಿ ವಿಶ್ವಕಪ್ ಫುಟ್ಬಾಲ್ನ್ನು ದೂರದರ್ಶನದ ಮೂಲಕ ವೀಕ್ಷಿಸಲು ಕಾತರದಲ್ಲಿದ್ದಾರೆ. 1994 ರಲ್ಲಿ ವಿಶ್ವಕಪ್ ಫುಟ್ಬಾಲ್ ಟೂರ್ನಿ ನಡೆದಿದ್ದಾಗ 320 ಕೋಟಿಗೂ ಹೆಚ್ಚು ಮಂದಿ ಈ ಪಂದ್ಯಾವಳಿಯನ್ನು ವೀಕ್ಷಿಸಿದ್ದಾರೆ. 1998ರಲ್ಲಿ ಫ್ರಾನ್ಸ್ನಲ್ಲಿ ವಿಶ್ವಕಪ್ ನಡೆದಿದ್ದಾಗ 335 ಕೋಟಿ, 2002ರಲ್ಲಿ ಕೊರಿಯಾ-ಜಪಾನ್ ಆತಿಥ್ಯದಲ್ಲಿ ನಡೆದ ವಿಶ್ವಕಪ್ನ್ನು 400 ಕೋಟಿ, ಜರ್ಮನಿಯಲ್ಲಿ 2006 ರಲ್ಲಿ ನಡೆದ ವಿಶ್ವಕಪ್ನ್ನು 715 ಕೋಟಿ, 2010 ರಲ್ಲಿ ದಕ್ಷಿಣ ಆಫ್ರಿಕಾದಲ್ಲಿ ಹಾಗೂ 2014 ರಲ್ಲಿ ಬ್ರೆಜಿಲ್ನಲ್ಲಿ ನಡೆದ 19 ಹಾಗೂ 20ನೆಯ ವಿಶ್ವಕಪ್ನ್ನು 800 ಕೋಟಿಗೂ ಹೆಚ್ಚು ಜನರು ದೂರದರ್ಶನದ ಮೂಲಕ ವೀಕ್ಷಿಸಿ¨ªಾರೆ ಎನ್ನುವಾಗ ಈ ಕ್ರೀಡೆಯ ಮಾಂತ್ರಿಕ ಶಕ್ತಿ ಎಷ್ಟಿದೆ- ಎನ್ನುವುದನ್ನು ಊಹಿಸಬಹುದು. ಒಟ್ಟಿನಲ್ಲಿ ಜೂನ್ 14 ರಿಂದ ಆರಂಭಗೊಂಡಿರುವ ವಿಶ್ವಕಪ್ ಫುಟ್ಬಾಲ್ ಪಂದ್ಯಾವಳಿಯನ್ನುರಷ್ಯಾ ಹಾಗೂ ವಿಶ್ವದಾದ್ಯಂತ ಫುಟ್ಬಾಲ್ಪ್ರಿಯರು ಕಾತರದಿಂದ ವೀಕ್ಷಿಸುತ್ತಿದ್ದಾರೆ. ಫುಟ್ಬಾಲ್ ನೆಪದಲ್ಲಿ ವಿಶ್ವವನ್ನು ಒಂದೇ ಛಾವಣಿಯಡಿಯಲ್ಲಿ ತರುವ ಪ್ರಯತ್ನ ವಿಶ್ವಕಪ್ ಟೂರ್ನಿಯಲ್ಲಿ ನಡೆದಿದೆ. ಎಸ್. ಜಗದೀಶ್ಚಂದ್ರ ಅಂಚನ್