Advertisement

World Cup 2023: ಭಾರತಕ್ಕೆ 11,367 ಕೋಟಿ ರೂ. ಲಾಭ

11:00 PM Sep 11, 2024 | Team Udayavani |

ಹೊಸದಿಲ್ಲಿ: ಕಳೆದ ವರ್ಷ ಭಾರತದಲ್ಲಿ ನಡೆದ ಐಸಿಸಿ ಏಕದಿನ ವಿಶ್ವಕಪ್‌ನಿಂದ ಒಟ್ಟು 11,367 ಕೋಟಿ ರೂ. ಆರ್ಥಿಕ ಲಾಭವಾಗಿದೆ ಎಂದು ಐಸಿಸಿ ವರದಿಯಲ್ಲಿ ತಿಳಿಸಲಾಗಿದೆ.

Advertisement

ಪ್ರವಾಸೋದ್ಯಮ, ಹೊಟೇಲ್‌, ಸಾರಿಗೆ, ಆಸ್ಪತ್ರೆ ಸೇರಿ ಭಾರತದ ವಿವಿಧ ವಲಯಗಳಲ್ಲಿ ಹಣ ಹರಿದಿದ್ದರಿಂದ ದೇಶದಲ್ಲಿ ಈ ಮಟ್ಟದ ಆರ್ಥಿಕ ಲಾಭವಾಗಿದೆ ಎನ್ನುವುದು ವರದಿಯ ಸಾರಾಂಶ.

ಐಸಿಸಿ ವಿಶ್ವಕಪ್‌ ಕಾರಣಕ್ಕೆ ಭಾರತದಲ್ಲಿ ಪ್ರವಾ ಸೋ ದ್ಯಮಕ್ಕೆ ಉತ್ತೇಜನ ಸಿಕ್ಕಿದೆ. ವಿದೇಶಿ ಮತ್ತು ದೇಶೀಯ ಪ್ರವಾಸಿಗರು ದೊಡ್ಡ ಪ್ರಮಾಣದಲ್ಲಿ ಭಾರತದ ಬೇರೆ ಬೇರೆ ನಗರಗಳಿಗೆ ಭೇಟಿ ನೀಡಿ ದ್ದಾರೆ. ಇದರಿಂದ ಸ್ಥಳೀಯವಾಗಿ ಹಲವಾರು ರೀತಿಯ ವಹಿವಾಟು ನಡೆದಿದೆ ಎಂದು ಐಸಿಸಿ ಹೇಳಿದೆ.

ಮುಂಬಯಿ, ಹೊಸದಿಲ್ಲಿ, ಬೆಂಗಳೂರು, ಅಹ್ಮದಾ ಬಾದ್‌, ಕೋಲ್ಕತಾ, ಚೆನ್ನೈ, ಲಕ್ನೋ, ಪುಣೆ, ಧರ್ಮಶಾಲಾ, ಹೈದರಾಬಾದ್‌ಗಳಲ್ಲಿ ಹೊಟೇಲ್‌, ರೆಸ್ಟೋರೆಂಟ್‌, ಸಾರಿಗೆಗೆ ಉತ್ತೇಜನ ಸಿಕ್ಕಿದೆ. ಈ ಕ್ಷೇತ್ರದಲ್ಲೇ ಒಟ್ಟು 7,233 ಕೋಟಿ ರೂ. ವಹಿವಾಟು ನಡೆದಿದೆ.

48,000 ಉದ್ಯೋಗ ಸೃಷ್ಟಿ
ಐಸಿಸಿ ಕೂಟದಿಂದ ಭಾರತದ ವಿವಿಧ ಕ್ಷೇತ್ರ ಗಳಲ್ಲಿ 48,000 ಪೂರ್ಣಕಾಲಿಕ, ಅರೆಕಾಲಿಕ ಉದ್ಯೋಗ ಗಳು ಸೃಷ್ಟಿಯಾಗಿವೆ. ಈ ಕೂಟದ ಆಯೋಜನೆಗೆ ಹಲವು ಕಂಪೆನಿಗಳು ಕೈಜೋಡಿಸಿದ್ದರಿಂದ, ಆತಿಥ್ಯ ಮತ್ತು ಸೇವಾ ಕ್ಷೇತ್ರಗಳು ಸಕ್ರಿಯವಾಗಿದ್ದರಿಂದ ಇಂತಹ ಬೆಳ ವಣಿಗೆ ಯಾಗಿದೆ ಎಂದು ಐಸಿಸಿ ಹೇಳಿದೆ.

Advertisement

ವಿದೇಶೀಯರಿಗೆ ಹೆಚ್ಚಿದ ಆಸಕ್ತಿ
ಈ ಕೂಟದಿಂದ ಭಾರತದ ಪ್ರವಾಸೋದ್ಯಮಕ್ಕೆ ಶಾಶ್ವತ ಲಾಭವಾಗಿದೆ ಎಂದು ಐಸಿಸಿ ಹೇಳಿದೆ. ಭಾರತಕ್ಕೆ ಬಂದ ವಿದೇಶಿ ಪ್ರವಾಸಿಗಳಲ್ಲಿ ಶೇ.59 ಮಂದಿ ಇನ್ನೊಮ್ಮೆ ದೇಶಕ್ಕೆ ಬರುವ ಇಂಗಿತ ತೋರಿ ದ್ದಾರೆಂದು ವರದಿಯಲ್ಲಿ ಹೇಳಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.