Advertisement

World Cup 2023; ಸ್ಪಿನ್ ದಾಳಿಗೆ ಪರದಾಡಿದ ಆಸೀಸ್ ಬ್ಯಾಟರ್ ಗಳು; ಭಾರತಕ್ಕೆ 200 ರನ್ ಗುರಿ

05:57 PM Oct 08, 2023 | Team Udayavani |

ಚೆನ್ನೈ: 2023ರ ಏಕದಿನ ಕ್ರಿಕೆಟ್ ವಿಶ್ವಕಪ್ ನ ತನ್ನ ಮೊದಲ ಪಂದ್ಯದಲ್ಲಿ ಭಾರತವು ಆರಂಭಿಕ ಯಶಸ್ಸು ಪಡೆದಿದೆ. ಚೆನ್ನೈ ನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಭಾರತದ ಬೌಲಿಂಗ್ ದಾಳಿಗೆ ನಲುಗಿದ ಆಸ್ಟ್ರೇಲಿಯಾ ರನ್ ಕಲೆ ಹಾಕಲು ಪರದಾಡಿದೆ.

Advertisement

ಟಾಸ್ ಗೆದ್ದು ಬ್ಯಾಟಿಂಗ್ ಆರಂಭಿಸಿದ ಆಸ್ಟ್ರೇಲಿಯಾ 49.3 ಓವರ್ ಗಳಲ್ಲಿ ಕೇವಲ 199 ರನ್ ಗಳಿಸಿ ಆಲೌಟಾಗಿದೆ.

ಜಸ್ಪ್ರೀತ್ ಬುಮ್ರಾ ಅವರು ಆರಂಭದಲ್ಲೇ ಮಿಚ್ ಮಾರ್ಶ್ ವಿಕೆಟ್ ಪಡೆಯವ ಮೂಲಕ ಆಸೀಸ್ ಗೆ ಮೊದಲ ಆಘಾತ ನೀಡಿದರು. ಬಳಿಕ ಜತೆಯಾದ ವಾರ್ನರ್ ಮತ್ತು ಸ್ಮಿತ್ ಎರಡನೇ ವಿಕೆಟ್ ಗೆ 69 ರನ್ ಜತೆಯಾಟವಾಡಿದರು. ವಾರ್ನರ್ ವಿಕೆಟ್ ಪಡೆಯುವ ಮೂಲಕ ಕುಲದೀಪ್ ಯಾದವ್ ಈ ಜತೆಯಾಟ ಮುರಿದರು. ವಾರ್ನರ್ 41 ರನ್ ಗಳಿಸಿದರೆ, ಸ್ಮಿತ್ 46 ರನ್ ಮಾಡಿದರು. ಉಳಿದಂತೆ ಲಬುಶೇನ್ 27 ರನ್ ಮಾಡಿದರು. ಕೊನೆಯಲ್ಲಿ ಸ್ಟಾರ್ಕ್ 28 ರನ್ ಗಳಿಸಿದರು.

ಭಾರತದ ಪರ ಅದ್ಭುತ ಬೌಲಿಂಗ್ ನಡೆಸಿದ ರವೀಂದ್ರ ಜಡೇಜಾ ಕೇವಲ 28 ರನ್ ನೀಡಿ ಮೂರು ವಿಕೆಟ್ ಪಡೆದರು. ಉಳಿದಂತೆ ಜಸ್ಪ್ರೀತ್ ಬುಮ್ರಾ ಮತ್ತು ಕುಲದೀಫ್ ಯಾದವ್ ತಲಾ ಎರಡು ವಿಕೆಟ್ ಕಬಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next