Advertisement

ಪಾಕಿಗೆ ಬೀಳಲಿ ಏಳನೇ ಏಟು!

10:56 AM Jun 17, 2019 | Sriram |

ಮ್ಯಾಂಚೆಸ್ಟರ್‌: ಎರಡೂ ದೇಶಗಳ ನಡುವಿನ ಹದಗೆಟ್ಟ ಸಂಬಂಧ ಹಾಗೂ ತ್ವೇಷಮಯ ವಾತಾವರಣದ ನಡುವೆ ಬದ್ಧ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ಥಾನ ತಂಡಗಳ ವಿಶ್ವಕಪ್‌ ಕ್ರಿಕೆಟಿನ ದೊಡ್ಡಾಟ ವೊಂದಕ್ಕೆ ರವಿವಾರ ಮ್ಯಾಂಚೆಸ್ಟರ್‌ನ ಓಲ್ಡ್‌ ಟ್ರಾಫ‌ರ್ಡ್‌ ಅಂಗಳ ಸಾಕ್ಷಿಯಾಗಲಿದೆ.

Advertisement

ಪದೇ ಪದೇ ಕಾಲುಕೆರೆದು ಜಗಳಕ್ಕೆ ಬರುವ, ಸದಾ ಭಾರತದ ಮೇಲೆ ಭಯೋ ತ್ಪಾದಕ ದಾಳಿ ನಡೆಸುವ ಪಾಕಿಸ್ಥಾನ ವಿರುದ್ಧ ಕ್ರಿಕೆಟ್‌ ಸಹವಾಸವೇ ಬೇಡ ಎಂಬ ಅನೇಕರ ಪ್ರತಿರೋಧದ ನಡುವೆ ಈ ಪಂದ್ಯ ಸಾಗಲಿದೆ. ಆದರೆ ಪಾಕಿಗಳು ಕ್ರಿಕೆಟ್‌ ಅಂಗಳದಲ್ಲೂ ಸೋಲುವುದನ್ನು ಕಾಣೋಣ, ಅವರ ಸೋಲನ್ನು ಕಣ್ತುಂಬಿಸಿಕೊಳ್ಳೋಣ ಎಂದು ಬಯಸುವವರ ಸಂಖ್ಯೆಯೂ ದೊಡ್ಡ ಮಟ್ಟದಲ್ಲಿದೆ.

ಕಪ್‌ ಗೆದ್ದಷ್ಟೇ ಖುಷಿ!
ಇಲ್ಲಿ ಗೆದ್ದವರು ವಿಶ್ವಕಪ್‌ ಎತ್ತಿದಷ್ಟೇ ಸಂಭ್ರಮದಲ್ಲಿ ಬೀಗಲಿದ್ದಾರೆ. ಗೆಲುವಿನ ರೂವಾರಿಗಳು ಕ್ರಿಕೆಟಿನ ದೊಡ್ಡ ಹೀರೋಗಳಾಗಿ ಮೆರೆಯಲಿ ದ್ದಾರೆ. ಹಾಗೆಯೇ ಕೆಲವು ವಿಲನ್‌ಗಳೂ ಹುಟ್ಟಿ ಕೊಳ್ಳಲಿದ್ದಾರೆ. ಪಾಕಿಸ್ಥಾನ ಸೋತರೆ ಅಲ್ಲಿ ಇವರ ಪ್ರತಿಕೃತಿ ದಹನವಾಗಲಿದೆ; ಮನೆಗೆ ಕಲ್ಲು ಬೀಳಲಿದೆ. ಇದರಿಂದ ಬಚಾವಾಗುವುದು ಪಾಕ್‌ ಕ್ರಿಕೆಟಿಗರ ಪಾಲಿಗೆ ಇನ್ನೂ ದೊಡ್ಡ ಸವಾಲು. ಸೋಲಿನ ದಾಖಲೆಯನ್ನೇ ಹೊಂದಿರುವು ದರಿಂದ ವಿಶ್ವಕಪ್‌ನಲ್ಲಿ ಭಾರತವನ್ನು ಎದುರಿ ಸುವುದೆಂದರೆ ಪಾಕಿಸ್ಥಾನಕ್ಕೆ ಅವ್ಯಕ್ತ ಭೀತಿ!

ಅಂದು ಕಾರ್ಗಿಲ್‌ ಬಿಸಿ…
ಸರಿಯಾಗಿ 2 ದಶಕಗಳ ಹಿಂದೆ ಇದೇ ಮ್ಯಾಂಚೆಸ್ಟರ್‌ ಅಂಗಳದಲ್ಲಿ ಭಾರತ-ಪಾಕಿಸ್ಥಾನ ವಿಶ್ವಕಪ್‌ನಲ್ಲಿ ಎದುರಾಗುವ ವೇಳೆ ಕಾರ್ಗಿಲ್‌ ಕದನ ಕಾವೇರಿಸಿಕೊಂಡಿತ್ತು. ಪಾಕ್‌ ವಿಶ್ವಕಪ್‌ ಅಂಗಳದಲ್ಲೂ ಭಾರತಕ್ಕೆ ಶರಣಾಗಿತ್ತು. ಈ ಬಾರಿ ಪುಲ್ವಾಮಾ ದಾಳಿಯ ಸರದಿ. ಇದಕ್ಕೆ ಭಾರತ ಈಗಾಗಲೇ ಪ್ರತೀಕಾರ ತೀರಿಸಿಕೊಂಡಿದೆ. ಹೀಗಾಗಿ ಪಾಕಿಗೆ ವಿಶ್ವಕಪ್‌ನಲ್ಲೂ ಭಾರತ ತಪರಾಕಿ ನೀಡಿ, ಅಜೇಯ ಓಟವನ್ನು ಏಳಕ್ಕೆ ವಿಸ್ತರಿಸಲಿ ಎಂಬುದು ಅಭಿಮಾನಿಗಳ ಹಾರೈಕೆ. ಆದರೆ ಇದಕ್ಕೆ ವರುಣನ ಕೃಪಾಕಟಾಕ್ಷ ಅತ್ಯಗತ್ಯ!

ಪಾಕ್‌ ಮೇಲೆ ಒತ್ತಡ ಹೆಚ್ಚು
ಭಾರತ ಈ ಕೂಟದ ಅಜೇಯ ತಂಡ. ದಕ್ಷಿಣ ಆಫ್ರಿಕಾ ಮತ್ತು ವಿಶ್ವ ಚಾಂಪಿಯನ್‌ ಆಸ್ಟ್ರೇಲಿಯವನ್ನು ಕೆಡವಿದೆ. ನ್ಯೂಜಿಲ್ಯಾಂಡ್‌ ಪಂದ್ಯವನ್ನು ಮಳೆ ನುಂಗಿದೆ. 3 ಪಂದ್ಯಗಳಿಂದ 5 ಅಂಕ ಸಂಪಾದಿಸಿರುವ ಕೊಹ್ಲಿ ಪಡೆಗೆ ಅಂಕಪಟ್ಟಿಯಲ್ಲಿ 4ನೇ ಸ್ಥಾನ.

Advertisement

ಇನ್ನೊಂದೆಡೆ ಪಾಕಿಸ್ಥಾನದ್ದು ಮಿಶ್ರ ಸಾಧನೆ. ನಾಲ್ಕರಲ್ಲಿ ಒಂದನ್ನಷ್ಟೇ ಗೆದ್ದು 8ನೇ ಸ್ಥಾನಕ್ಕೆ ಕುಸಿದಿದೆ. ಮತ್ತೆ ಎಡವಿದರೆ ಅಥವಾ ಪಂದ್ಯ ರದ್ದಾದರೆ ಪಾಕ್‌ ತೀವ್ರ ಸಂಕಟಕ್ಕೆ ಸಿಲುಕಲಿದೆ. ಇದರಿಂದ ಪಾರಾಗಲೇಬೇಕಾದ ಕಾರಣ ಸಫ‌ìರಾಜ್‌ ಪಡೆ ಮೇಲೆ ತೀವ್ರ ಒತ್ತಡ ಇರುವುದು ಸುಳ್ಳಲ್ಲ. ಇಂಥ ಹಂತದಲ್ಲೇ ಭಾರತದ ಸವಾಲು ಎದುರಾಗಿದೆ. ಕೊಹ್ಲಿ ಪಡೆ ಇದರ ಲಾಭ ಎತ್ತಬೇಕಿದೆ. ಆದರೆ ಆತಿಥೇಯ ಇಂಗ್ಲೆಂಡನ್ನೇ ಸೋಲಿಸಿರುವ ಪಾಕ್‌ ಯಾವುದೇ ಹಂತದಲ್ಲಿ ತಿರುಗಿ ಬೀಳುವ, ಅನಿಶ್ಚಿತ ಫ‌ಲಿತಾಂಶಕ್ಕೆ ಹೆಸರಾದ ತಂಡ ಎಂಬ ಎಚ್ಚರಿಕೆ ಇಲ್ಲಿ ಅಗತ್ಯ.

ಭಾರತೀಯರ ಜೋಶ್‌
ನ್ಯೂಜಿಲ್ಯಾಂಡ್‌ ಎದುರಿನ ಪಂದ್ಯ ರದ್ದಾದ್ದರಿಂದ ಶಿಖರ್‌ ಧವನ್‌ ಗೈರಲ್ಲಿ ತಂಡವನ್ನು ಹೇಗೆ ಕಟ್ಟಬಹುದು ಎಂಬ ಭಾರತದ ಕಾರ್ಯ ತಂತ್ರಕ್ಕೆ ದೊಡ್ಡ ಹಿನ್ನಡೆಯಾಗಿದೆ. ಕೆ.ಎಲ್‌. ರಾಹುಲ್‌ಗೆ ಬಡ್ತಿ ನೀಡಿ, ಮಧ್ಯಮ ಕ್ರಮಾಂಕ ದಲ್ಲಿ ವಿಜಯ್‌ ಶಂಕರ್‌ ಅಥವಾ ದಿನೇಶ್‌ ಕಾರ್ತಿಕ್‌ರನ್ನು ಆಡಿಸುವುದು ಭಾರತದ ಯೋಜನೆ.

ಇದೀಗ
ಹವಾಮಾನ ವರದಿ…
“ಭಾರತ-ಪಾಕಿಸ್ಥಾನ ನಡುವಿನ ರವಿವಾರದ ಮ್ಯಾಂಚೆಸ್ಟರ್‌ ವಿಶ್ವಕಪ್‌ ಪಂದ್ಯಕ್ಕೆ ಮಳೆಯಿಂದ ಅಡಚಣೆ ಆಗುವ ಸಂಭವವಿದೆ. ಬೆಳಗ್ಗೆ 10 ಗಂಟೆಗೆ, ಅಂದರೆ ಟಾಸ್‌ ಹಾರಿಸುವ ವೇಳೆ ಮಳೆಯ ಸಾಧ್ಯತೆ ಶೇ. 20ರಷ್ಟು ಮಾತ್ರ. ಆಟದ ಆರಂಭಕ್ಕೇನೂ ತೊಂದರೆ ಇಲ್ಲ. ಆದರೆ 12 ಗಂಟೆ ಮತ್ತು ಒಂದು ಗಂಟೆ ನಡುವೆ ಸಣ್ಣ ಪ್ರಮಾಣದಲ್ಲಿ ಮಳೆಯಾಗಲಿದೆ. ಅಪರಾಹ್ನದ ಬಳಿಕ ಮಳೆ ಬಿರುಸುಗೊಳ್ಳುವ ಸಾಧ್ಯತೆ ಇದೆ. ಹೀಗಾಗಿ ಪೂರ್ತಿ 100 ಓವರ್‌ಗಳ ಆಟವನ್ನು ನಿರೀಕ್ಷಿಸುವಂತಿಲ್ಲ…’

ಅಪಾಯಕಾರಿ ಪಾಕಿಗಳು…
ಬ್ಯಾಟ್ಸ್‌ಮನ್‌ಗಳಾದ ಫ‌ಕಾರ್‌, ಇಮಾಮ್‌, ಆಜಂ, ಆಲ್‌ರೌಂಡರ್‌ ಹಫೀಜ್‌, ಮಲಿಕ್‌, ರಿಯಾಜ್‌, ವೇಗಿ ಆಮಿರ್‌ ಅವರೆಲ್ಲ ಎದುರಾಳಿಗೆ ಆತಂಕ ತಂದೊಡ್ಡಬಲ್ಲರು. ಆದರೆ ನಮ್ಮ ರೋಹಿತ್‌, ಕೊಹ್ಲಿ, ಧೋನಿ, ಪಾಂಡ್ಯ, ಬುಮ್ರಾ, ಚಹಲ್‌ ಅವರೆಲ್ಲ ಇದನ್ನು ಮೆಟ್ಟಿ ನಿಲ್ಲಬಲ್ಲರೆಂಬ ವಿಶ್ವಾಸ ಇದೆ.

ಸೋಲಿಲ್ಲದ ಸರದಾರ
ವಿಶ್ವಕಪ್‌ ಇತಿಹಾಸದಲ್ಲಿ ಭಾರತ-ಪಾಕಿಸ್ಥಾನ ತಂಡಗಳದ್ದೇ ಒಂದು ಪ್ರತ್ಯೇಕ ಇತಿಹಾಸ! ಬಗೆದಷ್ಟೂ ರೋಚಕ ಅಂಕಿಅಂಶ, ಘಟನಾವಳಿ, ರೋಮಾಂಚನ ಹಾಗೂ ಉದ್ವೇಗದ ಕ್ಷಣಗಳು ಉಕ್ಕಿ ಬರುತ್ತವೆ. ಇವುಗಳಲ್ಲಿ ಪ್ರಮುಖವಾದುದೆಂದರೆ, ಪಾಕಿಸ್ಥಾನ ವಿರುದ್ಧದ ವಿಶ್ವಕಪ್‌ ಮುಖಾಮುಖೀಯಲ್ಲಿ ಭಾರತ ಸೋಲರಿಯದ ಸರದಾರನಾಗಿ ಮೆರೆದಿರುವುದು. ಈ ಪ್ರತಿಷ್ಠಿತ ಕೂಟದಲ್ಲಿ ಆಡಿದ ಆರೂ ಪಂದ್ಯಗಳಲ್ಲಿ ಟೀಮ್‌ ಇಂಡಿಯಾ ಪಾಕಿಸ್ಥಾನವನ್ನು ಮಣ್ಣುಮುಕ್ಕಿಸಿದೆ!

ಸಿಲ್ಲಿ ಪಾಯಿಂಟ್‌
300: ಇತ್ತಂಡಗಳ ವಿಶ್ವಕಪ್‌ ಪಂದ್ಯಗಳಲ್ಲಿ ಭಾರತ 7ಕ್ಕೆ 300 ರನ್‌ ಗಳಿಸಿದ್ದು ಗರಿಷ್ಠ ಮೊತ್ತವಾಗಿದೆ (2015).

313: ತೆಂಡುಲ್ಕರ್‌ ಭಾರತ-ಪಾಕ್‌ ನಡುವಿನ ವಿಶ್ವಕಪ್‌ ಪಂದ್ಯಗಳಲ್ಲಿ ಮುನ್ನೂರು ಪ್ಲಸ್‌ ರನ್‌ ಪೇರಿಸಿದ ಏಕೈಕ ಆಟಗಾರ.

2: ಭಾರತ-ಪಾಕ್‌ ನಡುವಿನ ವಿಶ್ವಕಪ್‌ ಪಂದ್ಯಗಳಲ್ಲಿ 2 ಶತಕ ದಾಖಲಾಗಿದೆ. 2003ರಲ್ಲಿ ಸಯೀದ್‌ ಅನ್ವರ್‌ 101 ರನ್‌, 2015ರಲ್ಲಿ ಕೊಹ್ಲಿ 107 ರನ್‌ ಬಾರಿಸಿದ್ದಾರೆ.

13: ಇತ್ತಂಡಗಳ ವಿಶ್ವಕಪ್‌ ಪಂದ್ಯಗಳಲ್ಲಿ 13 ಅರ್ಧ ಶತಕ ದಾಖಲಾಗಿದೆ. ಸಚಿನ್‌ ತೆಂಡುಲ್ಕರ್‌ ಅತೀ ಹೆಚ್ಚು 3 ಅರ್ಧ ಶತಕ ಹೊಡೆದಿದ್ದಾರೆ.

8: ಭಾರತ-ಪಾಕ್‌ ವಿಶ್ವಕಪ್‌ ಪಂದ್ಯಗಳಲ್ಲಿ ವೆಂಕಟೇಶ ಪ್ರಸಾದ್‌ ಅತೀ ಹೆಚ್ಚು 8 ವಿಕೆಟ್‌ ಉರುಳಿಸಿದ್ದಾರೆ.

5: ವೆಂಕಟೇಶ ಪ್ರಸಾದ್‌ 1999ರ ಪಂದ್ಯ ದಲ್ಲಿ 27ಕ್ಕೆ 5 ವಿಕೆಟ್‌ ಉರುಳಿಸಿದ್ದು ದಾಖಲೆ.

3: ಭಾರತ-ಪಾಕ್‌ ಪಂದ್ಯಗಳಲ್ಲಿ ಮೂವರು 5 ವಿಕೆಟ್‌ ಉರುಳಿಸಿದ್ದಾರೆ. ವೆಂಕಟೇಶ ಪ್ರಸಾದ್‌ (27/5, 1999), ವಹಾಬ್‌ ರಿಯಾಜ್‌ (46/5, 2011) ಮತ್ತು ಸೊಹೈಲ್‌ ಖಾನ್‌ (55/5, 2015).

4: ಭಾರತ-ಪಾಕ್‌ ಪಂದ್ಯಗಳಲ್ಲಿ ಧೋನಿ ಅತ್ಯುತ್ತಮ ಸಾಧನೆಗೈದ ವಿಕೆಟ್‌ ಕೀಪರ್‌.

5: ಅನಿಲ್‌ ಕುಂಬ್ಳೆ ಅತೀ ಹೆಚ್ಚು 5 ಕ್ಯಾಚ್‌ ಪಡೆದ ಕ್ಷೇತ್ರರಕ್ಷಕ.

Advertisement

Udayavani is now on Telegram. Click here to join our channel and stay updated with the latest news.

Next