ಬ್ಯಾಡಗಿ: ಗ್ರಾಹಕರಿಗೆ ತಮ್ಮ ಹಕ್ಕು ಮತ್ತು ಕರ್ತವ್ಯಗಳ ಬಗ್ಗೆ ಮಾಹಿತಿಇಲ್ಲದಿರುವುದರಿಂದ ಇತ್ತೀಚೆಗೆ ಗ್ರಾಹಕವಂಚನೆ ಪ್ರಕರಣ ಹೆಚ್ಚಾಗುತ್ತಿದೆ ಎಂದು ಕಿರಿಯ ದಿವಾಣಿ ನ್ಯಾಯಾಧೀಶ ಧನುರಾಜ ಎಸ್.ಎಂ. ಹೇಳಿದರು.
ತಾಲೂಕು ಕಾನೂನು ಸೇವೆಗಳ ಸಮಿತಿ, ನ್ಯಾಯವಾದಿಗಳ ಸಂಘಮತ್ತು ತಾಲೂಕಾಡಳಿತ ಬ್ಯಾಡಗಿಇವರ ಸಂಯುಕ್ತಾಶ್ರಯದಲ್ಲಿ ಪಟ್ಟಣದತಹಶೀಲ್ದಾರ್ ಕಚೇರಿ ಸಭಾಭವನದಲ್ಲಿ”ವಿಶ್ವ ಗ್ರಾಹಕರ ಹಕ್ಕುಗಳ ದಿನಾಚರಣೆ ಅಂಗವಾಗಿ’ ಆಯೋಜಿಸಲಾಗಿದ್ದ ಕಾನೂನು ಸಾಕ್ಷರತಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಹಣ ಕೊಟ್ಟು ವಸ್ತುಗಳನ್ನು ಖರೀದಿಸುವಯಾವುದೇ ವ್ಯಕ್ತಿಯು ಗ್ರಾಹಕನಾಗಿದ್ದು,ತಮ್ಮ ಹಕ್ಕುಗಳಬಗ್ಗೆ ಸಂಪೂರ್ಣ ಅರಿವುಪಡೆದುಕೊಳ್ಳಬೇಕಿದೆ. ಇದರಿಂದ ಗ್ರಾಹಕರಿಗೆಆಗುವ ವಂಚನೆ ತಡೆಯಬಹುದಾಗಿದೆ ಎಂದರು.
ತಹಶೀಲ್ದಾರ್ ರವಿಕುಮಾರ ಕೊರವರ ಮಾತನಾಡಿ, ಗ್ರಾಹಕರಿಗೆ ತಾವು ಪಡೆಯುವ ವಸ್ತುಗಳ ಸುರಕ್ಷತೆಯ ಹಕ್ಕು, ಮಾಹಿತಿ ಪಡೆಯುವ ಹಕ್ಕು, ಆಯ್ಕೆಯಹಕ್ಕು ಸೇರಿದಂತೆ ಹಲವು ಹಕ್ಕುಗಳನ್ನುನೀಡಲಾಗಿದೆ ಎಂದರು. ಅಧ್ಯಕ್ಷತೆ ವಹಿಸಿಮಾತನಾಡಿದ ನ್ಯಾಯವಾದಿಗಳ ಸಂಘದ ಅಧ್ಯಕ್ಷ ಎನ್.ಎಸ್. ಬಟ್ಟಲಕಟ್ಟಿ, ಇದೀಗಎಲ್ಲವೂ ಆನ್‌ಲೈನ್ ಮೂಲಕ ವ್ಯಾಪಾರವಹಿವಾಟು ನಡೆಯುತ್ತಿದೆ. ಅಲ್ಲಿನ ವಿವಿಧವಸ್ತುಗಳನ್ನು ಖರೀದಿಸುವಾಗ ಗ್ರಾಹಕರು ಮೋಸ ಹೋಗುವ ಸಾಧ್ಯತೆ ಅಧಿಕವಾಗಿದ್ದು, ಎಚ್ಚರಿಕೆ ವಹಿಸುವ ಅಗತ್ಯವಿದೆ ಎಂದರು.
ಸಿಪಿಐ ಪಿ.ಎಸ್. ಬಸವರಾಜ, ಪುರಸಭೆಮುಖ್ಯಾಧಿಕಾರಿ ವಿ.ಎಂ. ಪೂಜಾರ,ನ್ಯಾಯವಾದಿಗಳಾದ ಪಿ.ಸಿ. ಸದ್ದಲಗಿ,ಎಸ್.ಎಚ್. ಗುಂಡಪ್ಪನವರ, ಎಸ್.ಎಚ್.ಕಾಟೇನಹಳ್ಳಿ, ಎಂ.ಎ. ಅಗಸರ, ಎಂ.ಪಿ. ಹಂಜಗಿ, ಎಂ.ಎಸ್. ಕುಮ್ಮೂರ, ಎಂ.ಪಿ. ಹಂಜಗಿ, ಭಾರತಿ ಕುಲಕರ್ಣಿ, ಲಕ್ಷ್ಮೀ ಗುಗ್ಗರಿ ಸೇರಿದಂತೆ ಇನ್ನಿತರರು ಇದ್ದರು.