Advertisement

ವಸ್ತುಗಳ ಗುಣಮಟ್ಟದ ಬಗ್ಗೆ ಅರಿವು ಮುಖ್ಯ

12:27 PM Mar 17, 2021 | Team Udayavani |

ಚನ್ನಪಟ್ಟಣ: ಕೇವಲ ಪ್ರಚಾರಕ್ಕೆ ಮಾರುಹೋಗಿ ವಸ್ತುಗಳನ್ನು ಖರೀದಿಸದೇ ಅವುಗಳ ಗುಣಮಟ್ಟದಬಗ್ಗೆ ಜಾಗೃತೆ ವಹಿಸುವುದು ಮುಖ್ಯವಾಗಿದೆ ಎಂದುಮತ್ತೀಕೆರೆ ಗ್ರಾಪಂ ಅಧ್ಯಕ್ಷೆ ಪದ್ಮಾ ಮುರುಳಿ ಸಲಹೆ ನೀಡಿದರು.

Advertisement

ತಾಲೂಕಿನ ಮತ್ತೀಕೆರೆ ಆದರ್ಶ ವಿದ್ಯಾಲಯದಲ್ಲಿ ಹಮ್ಮಿಕೊಳ್ಳಲಾಗಿದ್ದ ವಿಶ್ವ ಗ್ರಾಹಕ ದಿನಾಚರಣೆ ಹಾಗೂಶಾಲಾ ಗ್ರಾಹಕರ ಕ್ಲಬ್‌ ಉದ್ಘಾಟಿಸಿ ಮಾತನಾಡಿದರು. ಮಾರುಕಟ್ಟೆಯಲ್ಲಿ ವಸ್ತುಗಳನ್ನು ಖರೀದಿಸುವಾಗ ಎಚ್ಚರಿಕೆ ವಹಿಸುವುದು ಅತ್ಯವಶ್ಯ. ಗ್ರಾಹಕರ ಹಕ್ಕುಗಳ ಮಾಹಿತಿ ಪಡೆಯುವುದು ಅತ್ಯಗತ್ಯವಾಗಿದೆ. ಗ್ರಾಹಕರ ಹಕ್ಕುಗಳ ಬಗ್ಗೆ ಅರಿವು ಹೊಂದಿದರೆ ಮಾರುಕಟ್ಟೆಯಲ್ಲಿ ವಸ್ತುಗಳ ಖರೀದಿ, ಕಲಬೆರಕೆ ಬಗೆಗೆ ಎಚ್ಚರ ವಹಿಸಲು ಸಾಧ್ಯ ಎಂದರು.

ವಿದ್ಯಾರ್ಥಿಗಳು ಚಿಕ್ಕಂದಿನಿಂದಲೇ ಗ್ರಾಹಕರ ಹಕ್ಕುಗಳ ಬಗ್ಗೆ ತಿಳಿದುಕೊಂಡು ಅದನ್ನು ತಮ್ಮ ಮನೆಗಳಲ್ಲಿ ಅರಿವು ಮೂಡಿಸಬೇಕು, ಆ ಮೂಲಕ ಪ್ರತಿಯೊಬ್ಬರೂ ಜಾಗೃತರಾಗಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.

ಸಹಾಯಕ ಸರ್ಕಾರಿ ಅಭಿಯೋಜಕ ಜಿ.  ನಾಗೇಂದ್ರಕುಮಾರ್‌ ಮಾತನಾಡಿ, ಅತಿಯಾದ ಲಾಭದ ಆಸೆಯಿಂದ ವ್ಯಾಪಾರಸ್ಥರು, ಉದ್ಯಮಿ ದಾರರು ಗ್ರಾಹಕರಿಗೆ ಒಂದಿಲ್ಲ ಒಂದು ರೀತಿ ವಂಚಿಸುತ್ತಿ ರುವುದು ಕಂಡುಬರುತ್ತದೆ. ಆಹಾರ ಪದಾರ್ಥಗಳಲ್ಲಿ ಕಲಬೆರಕೆ, ಗುಣಮಟ್ಟದ ವಸ್ತುಗಳ ಹೆಸರಿನಲ್ಲಿ ಮೋಸದಂತಹ ಪ್ರಕರಣಗಳು ನಿತ್ಯವೂ ನಡೆಯುತ್ತಿದೆ. ಇದಕ್ಕೆ ಪರಿಹಾರ ಗ್ರಾಹಕ ಶಿಕ್ಷಣ ಹಾಗೂ ಜಾಗೃತಿಯಿಂದ ಮಾತ್ರ ವಂಚನೆಯನ್ನು ಸಮರ್ಥವಾಗಿ ಎದುರಿಸಬಹುದು ಎಂದು ಹೇಳಿದರು.

ಗ್ರಾಹಕರು ಎಷ್ಟೇ ಜಾಗೃತರಾದರು ಒಂದೊಮ್ಮೆ ಮೋಸಹೋಗುವುದು ಸಹಜ. ಇಂತಹ ಸಂದರ್ಭದಲ್ಲಿ ಮೋಸ ಹೋದ ಯಾವುದೇ ಗ್ರಾಹಕನು ತನಗಾದ ನಷ್ಟವನ್ನು ಹಿಂಪಡೆಯಲುಗ್ರಾಹಕ ವೇದಿಕೆಗೆ ಲಿಖೀತ ರೂಪದಲ್ಲಿ ದೂರನ್ನು ಸಲ್ಲಿಸಬಹುದು. ಪರಿಹಾರ ಕೇಳುವ ಒಟ್ಟು ಮೊತ್ತದಆಧಾರದ ಮೇಲೆ ಜಿಲ್ಲಾ ಮಟ್ಟದಲ್ಲಿ, ರಾಜ್ಯ ಮಟ್ಟದಲ್ಲಿ ಮತ್ತು ರಾಷ್ಟ್ರ ಮಟ್ಟದಲ್ಲಿಯೂ ಈ ದೂರನ್ನು ಸಲ್ಲಿಸಲು ಅವಕಾಶವಿದೆ ಎಂದರು.

Advertisement

ವಿದ್ಯಾಲಯದ ಮುಖ್ಯಶಿಕ್ಷಕಿ ಶಶಿಕಲಾ ಮಾತನಾಡಿ, ಜಗತ್ತಿನಲ್ಲಿ ಹುಟ್ಟಿದ ಮಗುವಿನಿಂದ ಸಾಯುವವ್ಯಕ್ತಿಯವರಿಗೆ ಎಲ್ಲರೂ ಗ್ರಾಹಕರೇ. ಸಮಾಜದಲ್ಲಿ ಒಬ್ಬರನ್ನೊಬ್ಬರು ಅಲಂಬಿಸಿರುವುದರಿಂದ ದಿನನಿತ್ಯದ ಜೀವನಕ್ಕೆ ಅವಶ್ಯವಾದ ವಸ್ತುಗಳನ್ನು ಖರೀದಿಸುವಾಗ ನಡೆಯುವ ಮೋಸ, ವಂಚನೆಗೆ ಒಳಗಾಗುವುದನ್ನು ತಡೆಯಲು ಜಾಗೃತರಾಗಬೇಕು. ಮಕ್ಕಳು ಗ್ರಾಹಕರ ಹಕ್ಕುಗಳ ಬಗ್ಗೆ ತಿಳಿದುಕೊಳ್ಳಬೇಕು ಎಂದು ಸಲಹೆ ನೀಡಿದರು.

ಎಸ್‌ಡಿಎಂಸಿ ಅಧ್ಯಕ್ಷ ಶ್ರೀನಿವಾಸರಾಜ ಅರಸ್‌ ಮಾತನಾಡಿದರು. ವಿಶ್ವ ಗ್ರಾಹಕರ ದಿನಾಚರಣೆನಿಮಿತ್ತ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾ ರ್ಥಿ ಗಳಲ್ಲಿ ಸನ್ಮಾನಿಸಲಾಯಿತು. ಎಸ್‌ಡಿಎಂಸಿ ಉಪಾಧ್ಯಕ್ಷೆ ಶಿವರತ್ನಮ್ಮ, ಮಾರ್ಗದರ್ಶಿ ಶಿಕ್ಷಕ ಶಿವಕುಮಾರ್‌, ಶಾಲಾ ಗ್ರಾಹಕರ ಕ್ಲಬ್‌ನ ಶ್ರೇಯಾಶ್ರೀ ಕೆ.ಪಿ. ಸೇರಿದಂತೆ ಶಿಕ್ಷಕರು, ವಿದ್ಯಾರ್ಥಿಗಳು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next